Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ವಿರುದ್ಧದ 2ನೇ ಟೆಸ್ಟ್‌ನಿಂದ ಆಸೀಸ್‌ ಪ್ರಮುಖ ಪ್ಲೇಯರ್ಸ್ ಔಟ್

India vs Australia: David Warner, Sean Abbott ruled out of second Test

ಸಿಡ್ನಿ: ತೊಡೆ ಬೇನೆಯಿಂದ ಡೇವಿಡ್ ವಾರ್ನರ್ ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಹೀಗಾಗಿ ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ನಿಂದಲೂ ಆರಂಭಿಕ ಬ್ಯಾಟ್ಸ್‌ಮನ್‌ ವಾರ್ನರ್ ಹೊರ ಬಿದ್ದಿದ್ದಾರೆ. ಆಸ್ಟ್ರೇಲಿಯಾದಲ್ಲಿರುವ ಬಯೋಬಬಲ್ ಕಠಿಣ ಮುನ್ನೆಚ್ಚರಿಕಾ ಕ್ರಮಗಳು ಎರಡನೇ ಟೆಸ್ಟ್‌ನಿಂದಲೂ ವಾರ್ನರ್ ಹೊರಗಿರುವಂತೆ ಮಾಡಿದೆ.

ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಡೇವಿಡ್ ವಾರ್ನರ್ ಆರಂಭದಲ್ಲಿ ನಡೆದ ಕೆಲವು ಏಕದಿನ ಪಂದ್ಯಗಳನ್ನು ಮತ್ತು ಮೊದಲ ಟೆಸ್ಟ್‌ ಅನ್ನು ಮಿಸ್ ಮಾಡಿಕೊಂಡಿದ್ದರು. ಈಗ ದ್ವಿತೀಯ ಟೆಸ್ಟ್‌ಗೂ ಎಡಗೈ ಬ್ಯಾಟ್ಸ್‌ಮನ್‌ ವಾರ್ನರ್ ಲಭ್ಯರಿಲ್ಲ ಎಂದು ಆಸ್ಟ್ರೇಲಿಯಾ ಕ್ರಿಕೆಟ್‌ ಬೋರ್ಡ್ ತಿಳಿಸಿದೆ.

ಕಾಲಿನ ಹಿಂಭಾಗದ ಸ್ನಾಯು ಬೇನೆಗೆ ತುತ್ತಾಗಿರುವ ಆಸ್ಟ್ರೇಲಿಯಾ ಆಲ್ ರೌಂಡರ್ ಸೀನ್ ಅಬಾಟ್ ಕೂಡ ದ್ವಿತೀಯ ಟೆಸ್ಟ್‌ಗೆ ಅಲಭ್ಯರಾಗಿರಲಿದ್ದಾರೆ. ಅಭ್ಯಾಸ ಪಂದ್ಯದ ವೇಳೆ ಅಬಾಟ್ ಗಾಯ ಮಾಡಿಕೊಂಡಿದ್ದರು. ಡಿಸೆಂಬರ್ 26ರಿಂದ ದ್ವಿತೀಯ ಟೆಸ್ಟ್‌ ಆಗಿ ಬಾಕ್ಸಿಂಗ್‌ ಡೇ ಟೆಸ್ಟ್‌ ಮೆಲ್ಬರ್ನ್‌ನಲ್ಲಿ ಆರಂಭಗೊಳ್ಳಲಿದೆ.

ಸಿಡ್ನಿಯಲ್ಲಿ ಕೋವಿಡ್ -19 ಪ್ರಕರಣಗಳು ಏಕಾಏಕಿ ಏರತೊಡಗಿದ ನಂತರ ಇಬ್ಬರೂ ಆಟಗಾರರು ರಾಜ್ಯದ ಗಡಿ ಮುಚ್ಚುವ ಮುನ್ನ ಮೆಲ್ಬರ್ನ್‌ಗೆ ಹಾರಿದ್ದರು. ತೃತೀಯ ಟೆಸ್ಟ್‌ ವೇಳೆ ಇಬ್ಬರೂ ತಂಡ ಸೇರಿಕೊಳ್ಳುವ ನಿರೀಕ್ಷೆಯಿದೆ. ಜನವರಿ 7ರಿಂದ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ತೃತೀಯ ಟೆಸ್ಟ್ ಆರಂಭಗೊಳ್ಳಲಿದೆ.

Story first published: Wednesday, December 23, 2020, 8:56 [IST]
Other articles published on Dec 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+