IND vs AUS: ಒಂದೇ ದಿನ ಟೀಮ್ ಇಂಡಿಯಾದ 2 ಪಂದ್ಯ: ಇಲ್ಲಿದೆ ಸಮಯ ಮತ್ತು ದಿನಾಂಕದ ಮಾಹಿತಿ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಮುಗಿದಿದೆ. ಈಗ ಎರಡನೇ ಟೆಸ್ಟ್ ಪಂದ್ಯಕ್ಕೆ ಉಭಯ ತಂಡಗಳು ಭರದ ಸಿದ್ಧತೆ ನಡೆಸಿವೆ. ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಈಗ ಆಡಿಲೇಡ್ ಟೆಸ್ಟ್‌ಗಾಗಿ ಟೀಮ್ ಇಂಡಿಯಾ ತಯಾರಿ ನಡೆಸಿದೆ. ಈ ಟೆಸ್ಟ್‌ಗೂ ಮುನ್ನ ಟೀಮ್ ಇಂಡಿಯಾ, ಒಂದು ಅಬ್ಯಾಸ ಪಂದ್ಯವನ್ನು ಹಗಲು ರಾತ್ರಿ ಆಡಲಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಒಂದೇ ದಿನ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಾದಾಟ ನಡೆಸಲಿದೆ. ಏನಪ್ಪ ಒಂದೇ ತಂಡ, ಒಂದೇ ದಿನ ಎರಡು ಪಂದ್ಯಗಳನ್ನು ಆಡಲಿದೆಯಾ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ ಇದಕ್ಕೆ ಉತ್ತರ ಇಲ್ಲಿದೆ.

ಒಂದೇ ದಿನ ಎರಡು ಪಂದ್ಯ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮುಂದಿನ ಟೆಸ್ಟ್ ಪಂದ್ಯ ಮುಂದಿನ ತಿಂಗಳ ಆರರಂದು ಆಡಿಲೇಡ್‌ನಲ್ಲಿ ನಡೆಯಲಿದೆ. ಆಡಿಲೇಡ್‌ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯ ಹಗಲು ರಾತ್ರಿ ಆಗಿರಲಿದೆ. ಈ ಪಂದ್ಯದಲ್ಲಿ ಭಾರತದ ಪುರುಷರ ತಂಡ, ಆಸ್ಟ್ರೇಲಿಯಾ ಪುರುಷರ ತಂಡವನ್ನು ಎದುರಿಸಲಿದೆ. ಅದೇ ದಿನ ಮತ್ತೊಂದು ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ನೀವು ಈ ಎರಡೂ ಪಂದ್ಯಗಳನ್ನು ನೋಡುವುದು ಹೇಗೆ ಎಂಬ ಪ್ರಶ್ನೆಗಳು ಉದ್ಭವಿಸಬಹುದು.
ಎರಡು ಪಂದ್ಯಗಳು ಆರಂಭವಾಗುವುದು ಯಾವಾಗ?
ಭಾರತ ಮಹಿಳಾ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿದೆ. ಈ ವೇಳೆ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಲಿದೆ. ಉಭಯ ದೇಶಗಳ ನಡುವಣ ಮೊದಲ ಪಂದ್ಯ ಡಿಸೆಂಬರ್ 5 ರಂದು ಬ್ರಿಸ್ಬೇನ್‌ನಲ್ಲಿ ನಡೆದರೆ, ಎರಡನೇ ಪಂದ್ಯವು ಡಿಸೆಂಬರ್ 8 ರಂದು ಅಂದರೆ ಭಾನುವಾರದಂದು ನಡೆಯಲಿದೆ. ಡಿಸೆಂಬರ್ 6 ರಿಂದ 10ರ ವರೆಗೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಹೀಗಾಗಿ ಡಿಸೆಂಬರ್‌ನ ಎರಡನೇ ಭಾನುವಾರ ರೋಚಕತೆ ಹೆಚ್ಚಿಸಿದೆ.
ಆಡಿಲೇಡ್‌ನಲ್ಲಿ ನಡೆಯಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 9.30ಕ್ಕೆ ಪ್ರಾರಂಭವಾಗಲಿದೆ. ಇದೇ ದಿನ ಮಹಿಳಾ ಏಕದಿನ ಪಂದ್ಯ ಬೆಳಗ್ಗೆ 5.30 ಕ್ಕೆ ಆರಂಭವಾಗಲಿದೆ. ಈ ಎರಡೂ ಪಂದ್ಯಗಳನ್ನು ನೋಡಲು ಅಭಿಮಾನಿಗಳು ಬೇಗ ಏಳುವುದು ಅನಿವಾರ್ಯ.
ಭಾರತ ಈಗಾಗಲೇ ಪರ್ತ್‌ನಲ್ಲಿ ನಡೆದಿರುವ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈಗ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಈ ವೇಳೆ ಟೀಮ್ ಇಂಡಿಯಾ ಯಾವ ಕಾಂಬಿನೇಷನ್‌ನೊಂದಿಗೆ ಕಣಕ್ಕೆ ಇಳಿಯಲಿದೆ ಎಂಬುದೇ ಕುತೂಹಲ ಮೂಡಿಸಿದೆ. ಎರಡನೇ ಟೆಸ್ಟ್ ಪಂದ್ಯದ ವೇಳೆ ಶುಭಮನ್ ಗಿಲ್ ಫಿಟ್ ಆಗದೇ ಇದ್ದಲ್ಲಿ ಕೆಎಲ್ ರಾಹುಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications