ನಾಯಕನಾಗಿ ರಿಕಿ ಪಾಂಟಿಂಗ್ ವಿಶ್ವದಾಖಲೆ ಮುರಿಯಲು ವಿರಾಟ್ ಕೊಹ್ಲಿ ಸಜ್ಜು

ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್‌ಗಳ ಸರಣಿ ಅಂತ್ಯವಾಗಿದ್ದು ಟೆಸ್ಟ್ ಸರಣಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮಾತ್ರವೇ ಭಾಗಿಯಾಗಲಿದ್ದಾರೆ. ಅಡಿಲೆಡ್ ಟೆಸ್ಟ್ ಬಳಿಕ ಕೊಹ್ಲಿ ಪಿತೃತ್ವದ ರಜೆಯ ಹಿನ್ನೆಲೆಯಲ್ಲಿ ತವರಿಗೆ ವಾಪಾಸ್ಸಾಗಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಒಂದೇ ಪಂದ್ಯದಲ್ಲಿ ಕೊಹ್ಲಿ ಭಾಗಿಯಾಗಲಿದ್ದರೂ ದೊಡ್ಡ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆಯುವ ಅವಕಾಶವಿದೆ. ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರೆನಿಸಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಗೂ ಕೊಹ್ಲಿ ಈ ಜಂಟಿಯಾಗಿ ಈ ದಾಖಲೆಯನ್ನು ಹೊಂದಿದ್ದು ಇದನ್ನು ಮೀರಿ ನಿಲ್ಲಲು ಕೊಹ್ಲಿಗೆ ಅವಕಾಶವಿದೆ. ಮಾತ್ರವಲ್ಲ 2020ರಲ್ಲಿ ಯಾವುದೇ ಮಾದರಿಯಲ್ಲೂ ಶತಕವನ್ನು ಬಾರಿಸಲು ವಿಫಲರಾಗಿರುವ ಕೊಹ್ಲಿಗೆ ಆಸಿಸ್ ವಿರುದ್ಧದ ಈ ಪಂದ್ಯ ಶತಕವನ್ನು ಬಾರಿಸಲು ಅಂತಿಮ ಅವಕಾಶವಾಗಿರಲಿದೆ.

ಮೊದಲ ಟೆಸ್ಟ್‌ನಲ್ಲಿ ಶತಕಗಳಿಸುತ್ತಾರಾ ಕೊಹ್ಲಿ
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಒಂದು ಶತಕವನ್ನು ಗಳಿಸಬೇಕಿದೆ. ಈ ಸಾಧನೆ ಕೊಹ್ಲಿ ಮಾಡಿದರೆ ರಿಕಿ ಪಾಂಟಿಂಗ್ ಮಾಡಿದ ಸಾಧನೆಯನ್ನು ಕೊಹ್ಲಿ ಮೀರಿ ನಿಲ್ಲಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಅತ್ಯಂತ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆ ಕೊಹ್ಲಿ ಪಾಲಾಗಲಿದೆ.

ಕೊಹ್ಲಿ-ಪಾಂಟಿಂಗ್ ಸಮಾನ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರಿಕಿ ಪಾಂಟಿಂಗ್ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ಇಬ್ಬರು ಆಟಗಾರರು ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕರಾಗಿ ತಲಾ 41 ಶತಕವನ್ನು ದಾಖಲಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇನ್ನೊಂದು ಶತಕ ಕೊಹ್ಲಿ ಬ್ಯಾಟ್‌ನಿಂದ ಸಿಡಿದರೆ ಅದು ನಾಯಕನಾಗಿ 42ನೇ ಶತಕವಾಗಿರಲಿದೆ.

ಪಂದ್ಯಗಳ ಲೆಕ್ಕಾಚಾರದಲ್ಲಿ ಅಜಗಜಾಂತರ
ವಿರಾಟ್ ಕೊಹ್ಲಿ ಹಾಗೂ ರಿಕಿ ಪಾಂಟಿಂಗ್ ಸದ್ಯ ಈ ಸಾಧನೆಯಲ್ಲಿ ಸಮಾನವಾಗಿದ್ದರೂ ಇಷ್ಟು ಶತಕವನ್ನು ದಾಖಲಿಸಲು ತೆಗೆದುಕೊಂಡಿರುವ ಪಂದ್ಯಗಳ ಸಂಖ್ಯೆ ಮಾತ್ರ ಸಾಕಷ್ಟು ವ್ಯತ್ಯಾಸವಿದೆ. ನಾಯಕನಾಗ 41 ಶತಕವನ್ನು ಸಿಡಿಸಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 324 ಪಂದ್ಯಗಳನ್ನು ತೆಗೆದುಕೊಂಡಿದ್ದರೆ ವಿರಾಟ್ ಕೊಹ್ಲಿ 187 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ನಂತರದ ಸ್ಥಾನದಲ್ಲಿ ಯಾರು?
ನಾಯಕನಾಗಿ ಹೆಚ್ಚು ಶತಕವನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಹಾಗೂ ಪಾಂಟಿಂಗ್ ಬಳಿಕದ ಸ್ಥಾನವನ್ನು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ವಹಿಸಿಕೊಂಡಿದ್ದಾರೆ. ಗ್ರೇಮ್ ಸ್ಮಿತ್ ನಾಯಕನಾಗಿ 33 ಶತಕವನ್ನು ಬಾರಿಸಿದ್ದಾರೆ. ನಲ್ಕನೇ ಸ್ಥಾನದಲ್ಲಿ ಸ್ಟೀವ್ ಸ್ಮಿತ್ ಇದ್ದು ನಾಯಕನಾಗಿ ಸ್ಮಿತ್ 20 ಶತಕ ಬಾರಿಸಿದ್ದಾರೆ. ತಲಾ 19 ಶತಕವನ್ನು ಗಳಿಸಿರುವ ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ಹಾಗೂ ವೆಸ್ಟ್ ಇಂಡೀಸ್ ಮಾಜಿ ನಾಯಕ ಬ್ರಿಯಾನ್ ಲಾರಾ ನಂತರದ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications