ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಟೆಸ್ಟ್ ಜಯ


ಅಡಿಲೇಡ್, ಡಿಸೆಂಬರ್ 10: ಆಸ್ಟ್ರೇಲಿಯಾ ನೆಲದಲ್ಲಿ ಭಾರತವು ಮೊದಲ ಟೆಸ್ಟ್ ಪಂದ್ಯ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಒಂದು ದಶಕದ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಟೆಸ್ಟ್ ಗೆದ್ದಿದೆ. ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿದೆ.
ಕೊನೆಯ ದಿನವಾದ ಇಂದು ಟೆಸ್ಟ್ ಪಂದ್ಯವು ಅತ್ಯಂತ ರೋಚಕ ಘಟ್ಟಕ್ಕೆ ಹೋಗಿತ್ತು. ಆರಂಭದಲ್ಲಿ ಭಾರತದ ಮಡಿಲಲ್ಲಿ ಇದ್ದ ವಿಜಯಲಕ್ಷ್ಮಿ ಆಸ್ಟ್ರೇಲಿಯನ್ನರ ಕಡೆ ವಾಲುವುದರಲ್ಲಿತ್ತು ಆದರೆ ಕೊನೆಯ ಕ್ಷಣದಲ್ಲಿ ಭಾರತವು ಉತ್ತಮ ಬೌಲಿಂಗ್ ದಾಳಿ ಪ್ರದರ್ಶಿಸಿ ಗೆಲುವು ತಮ್ಮದಾಗಿಸಿಕೊಂಡರು.
ಆಸ್ಟ್ರೇಲಿಯಾದ ಟೇಲ್ ಎಂಡರ್‌ಗಳು ಕೊನೆಯ ದಿನ ಭಾರತದ ಬೌಲರ್‌ಗಳನ್ನು ಕಾಡಿದರು. ಒಂದು ಹಂತದಲ್ಲಿ ಜಯವು ಭಾರತದಲ್ಲಿ ದೂರ ಹೋಗುತ್ತಿದೆ ಎಂದೂ ಎನಿಸಿತ್ತು. ಆದರೆ ರವಿಚಂದ್ರನ್ ಅಶ್ವಿನ್ ಹಾಗೂ ಜಸ್ಪಿತ್ ಬುಮ್ರಾ ಬೌಲಿಂಗ್ ದಾಳಿಯ ಮುಂದೆ ಆಸ್ಟ್ರೇಲಿಯನ್ನರ ಆಟ ನಡೆಯಲಿಲ್ಲ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತವು ಚೆತೇಶ್ವರ್ ಪೂಜಾರಾ ಅವರ ತಾಳ್ಮೆಯ ಶತಕದ ನೆರವಿನಿಂದ 250 ರನ್‌ಗಳಿಸಿತು. ಆಸ್ಟ್ರೇಲಿಯಾವು 235 ರನ್‌ಗಳಿಗೆ ಆಲ್‌ಔಟ್ ಆಗಿ ಭಾರತಕ್ಕೆ 15 ರನ್‌ಗಳ ಅಲ್ಪ ಮುನ್ನಡೆಯನ್ನು ಬಿಟ್ಟುಕೊಟ್ಟಿತು.

ಕಾಡಿದ ಟೇಲ್ ಎಂಡರ್‌ಗಳು
ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆಟವಾಡಿದ ಭಾರತ 307 ರನ್‌ಗಳನ್ನು ಗಳಿಸಿ ಆಸ್ಟ್ರೇಲಿಯಾದ ಮುಂದೆ 323 ರನ್ ಗುರಿ ಇರಿಸಿತ್ತು. ಇದನ್ನು ಬೆನ್ನತ್ತಿದ್ದ ಆಸ್ಟ್ರೇಲಿಯಾ ನಾಲ್ಕನೇ ದಿನದಾಂತ್ಯಕ್ಕೆ 156ಕ್ಕೆ6 ವಿಕೆಟ್ ಕಳೆದುಕೊಂಡಿತ್ತು. ಆದರೆ ಆ ನಂತರ ಬಂದ ಟೇಲ್ ಎಂಡರ್‌ಗಳು ಭಾರತದ ಬೌಲರ್‌ಗಳನ್ನು ಕಾಡಿದರು.

ಗೆಲ್ಲಲು ಆಸ್ಟ್ರೇಲಿಯಾಕ್ಕೆ 31 ರನ್ ಬೇಕಿತ್ತು
ಗೆಲ್ಲಲು ಆಸ್ಟ್ರೇಲಿಯಾಕ್ಕೆ ಕೇವಲ 30 ರನ್ ಅವಶ್ಯಕತೆ ಇದ್ದಾಗ ಕೊನೆಯ ವಿಕೆಟ್ ಅನ್ನು ರವಿಚಂದ್ರನ್ ಅಶ್ವಿನ್ ಪಡೆದುಕೊಂಡರು. ಆ ಮೂಲಕ ಒಂದು ದಶಕದ ನಂತರ ಭಾರತವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಂತಾಯಿತು.

ಭಾರತದ ಮಾನ ಕಾಪಾಡಿದ ಪುಜಾರಾ
ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ ಚೆತೇಶ್ವರ್ ಪೂಜಾರಾ ಪಂದ್ಯ ಪುರುಶೋತ್ತಮ ಗೌರವಕ್ಕೆ ಭಾಜನರಾದರು. ಎರಡೂ ಇನ್ನಿಂಗ್ಸ್‌ನಲ್ಲಿ ಭಾರತದ ಮಾನ ಕಾಪಾಡಿದ್ದು ಅವರೇ.

14 ಡಿಸೆಂಬರ್‌ಗೆ ಎರಡನೇ ಟೆಸ್ಟ್
ಎರಡನೇ ಟೆಸ್ಟ್ ಪಂದ್ಯವು 14 ಡಿಸೆಂಬರ್‌ಗೆ ಪ್ರಾರಂಭವಾಗಲಿದೆ. ಒಟ್ಟು ಐದು ಟೆಸ್ಟ್ ಪಂದ್ಯಗಳನ್ನು ಭಾರತವು ಆಸ್ಟ್ರೇಲಿಯಾ ನೆಲದಲ್ಲಿ ಆಡಲಿದೆ. ಭಾರತ ತಂಡವು ಆರಂಭಿಕ ಮುನ್ನಡೆಯನ್ನು ಸರಣಿಯಲ್ಲಿ ತೆಗೆದುಕೊಂಡಿದ್ದು, ಸರಣಿ ಗೆದ್ದು ಇತಿಹಾಸ ಸೃಷ್ಠಿಸುತ್ತಾರೆಯೇ ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications