ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 4 ಬೆಸ್ಟ್ ಏಕದಿನ ಇನ್ನಿಂಗ್ಸ್‌ಗಳು

ಸಿಡ್ನಿ: ಶುಕ್ರವಾರ (ನವೆಂಬರ್ 27) ನಡೆದ ಭಾರತ vs ಆಸ್ಟ್ರೇಲಿಯಾ ನಡುವಿನ ಮೊದಲನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 66 ರನ್ ಸೋಲನುಭವಿಸಿದೆ. ಸರಣಿಯ ಮೊದಲ ಪಂದ್ಯದಲ್ಲಿ ಸುಲಭ ಗೊಲುವಿನೊಂದಿಗೆ ಆಸ್ಟ್ರೇಲಿಯಾ 3 ಪಂದ್ಯಗಳ ಏಕದಿನ ಸರಣಿಯಲ್ಲಿ 3-1ರ ಮುನ್ನಡೆ ಸಾಧಿಸಿದೆ.
ಆಸ್ಟ್ರೇಲಿಯಾದಿಂದ ನಾಯಕ ಆ್ಯರನ್ ಫಿಂಚ್ 114, ಸ್ಟೀವನ್ ಸ್ಮಿತ್ 105 (66 ಎಸೆತ) ರನ್ ಬಾರಿಸಿ ತಂಡದ ರನ್ ಹೆಚ್ಚಳಕ್ಕೆ ಕಾರಣವಾದರೆ (374 ಒಟ್ಟು ರನ್), ಭಾರತ ಪರ ಶಿಖರ್ ಧವನ್ 74, ಹಾರ್ದಿಕ್ ಪಾಂಡ್ಯ 90 (76 ಎಸೆತ) ರನ್ (308 ಒಟ್ಟು ರನ್) ಸೋಲಿನ ಅಂತರ ಕಡಿಮೆಗೊಳಿಸಲು ಸಹಕಾರಿಯಾಯ್ತು.
ಏಕದಿನದಲ್ಲಿ ಹಾರ್ದಿಕ್ ಪಾಂಡ್ಯ ಅವರ ಹಿಂದಿನ ಸಾಧನೆ ಚೆನ್ನಾಗಿದೆ. ಹಾರ್ದಿಕ್ ಹೆಚ್ಚು ರನ್ ಗಳಿಸಿರುವ ಹಿಂದಿನ ನಾಲ್ಕು ಏಕದಿನ ಪಂದ್ಯಗಳನ್ನು ಗಮನಿಸಿದರೆ ಆಸ್ಟ್ರೇಲಿಯಾ ವಿರುದ್ಧವೇ ಹಾರ್ದಿಕ್ ಪಾರಮ್ಯ ಮೆರೆದಿದ್ದಾರೆ. ಅದು ಬಿಟ್ಟರೆ 2017ರಲ್ಲಿ ಪಾಕಿಸ್ತಾನ ವಿರುದ್ಧ ಹಾರ್ದಿಕ್ 76 ರನ್ ಬಾರಿಸಿದ್ದರು.
ಏಕದಿನದಲ್ಲಿ ಹಾರ್ದಿಕ್ ಉತ್ತಮ ರನ್ ಸಾಧನೆಗಳು
* 90 ರನ್ vs ಆಸ್ಟ್ರೇಲಿಯಾ (ನವೆಂಬರ್ 27, 2020)
* 83 ರನ್ vs ಆಸ್ಟ್ರೇಲಿಯಾ (2017)
* 78 ರನ್ vs ಆಸ್ಟ್ರೇಲಿಯಾ (2017)
* 76 ರನ್ vs ಪಾಕಿಸ್ತಾನ (2017)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications