For Quick Alerts
ALLOW NOTIFICATIONS  
For Daily Alerts
 

ಭರ್ಜರಿ ಬ್ಯಾಟಿಂಗ್ ಮಾಡಲು ದ್ರಾವಿಡ್ ಕಾರಣ: ಕೆಎಲ್ ರಾಹುಲ್

India vs Australia: ‘He helped me a lot’ - KL Rahul lauds Rahul Dravid after returning to form

ಬೆಂಗಳೂರು, ಫೆಬ್ರವರಿ 28: ಕಾಫಿ ವಿಥ್ ಕರಣ್ ಶೋದಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ನಿಷೇಧಕ್ಕೊಳಗಾಗಿದ್ದ ಕೆಎಲ್ ರಾಹುಲ್ ಈಗ ಮತ್ತೆ ಕಣಕ್ಕಿಳಿದು ಆರ್ಭಟಿಸಿದ್ದಾರೆ.

ಎರಡು ಪಂದ್ಯಗಳ ನಿಷೇಧದಿಂದ ಹೊರಬಂದು, ಭಾರತ ಟಿ20 ಸೇರಿದ ಕೆಎಲ್ ರಾಹುಲ್ ಅವರು ಎರಡು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಕ್ರಿಕೆಟ್ ದಿಗ್ಗಜ ರಾಹುಲ್​ದ್ರಾವಿಡ್ ಅವರೇ ಕಾರಣ ಎಂದು ಕೆ.ಎಲ್​ ರಾಹುಲ್​ ಹೇಳಿಕೊಂಡಿದ್ದಾರೆ.

ರಾಹುಲ್ ದ್ರಾವಿಡ್​ ಮಾರ್ಗದರ್ಶನಲ್ಲಿ ಭಾರತ ಎ ತಂಡದ ಪರ ಕೆಲವು ಪಂದ್ಯಗಳನ್ನಾಡಿದೆ. ಈ ಸಂದರ್ಭದಲ್ಲಿ ದ್ರಾವಿಡ್​ ಅವರ ಮಾರ್ಗದರ್ಶನ, ಆತ್ಮವಿಶ್ವಾಸ ತುಂಬಿದರು. ಇದರಿಂದ ನಾನು 89 ಮತ್ತು 81 ರನ್ ಗಳಿಸಿ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು. ಇದರಿಂದ ಟಿ20 ತಂಡಕ್ಕೂ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು.

ಕ್ರಿಕೆಟ್​ಕುರಿತು ದ್ರಾವಿಡ್​ಬಳಿ ಸಾಕಷ್ಟು ಕಲಿತಿದ್ದೇನೆ. ಅವರು ನೀಡಿದ ಸಲಹೆ ಸೂಚನೆಗಳಿಂದ ಇಂಗ್ಲೆಂಡ್​ ಲಯನ್ಸ್​ ತಂಡದ ವಿರುದ್ಧ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು. ಹೀಗಾಗಿ ನಾನು ಭಾತರ ತಂಡಕ್ಕೆ ಮರಳಲು ರಾಹುಲ್​ ದ್ರಾವಿಡ್​ ಅವರೇ ಸಹಾಯ ಮಾಡಿದರು ಎಂದು ಗುರುವಿನ ಸಹಾಯವನ್ನ ರಾಹುಲ್​ ನೆನಪಿಸಿಕೊಂಡಿದ್ದಾರೆ. ಅಲ್ಲದೆ ಭಾರತ ತಂಡದ ಪರ ಆಡಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿದೆ. ಇದಕ್ಕೆ ನಾನು ಹೊರತೇನಲ್ಲ, ಸಿಕ್ಕ ಅವಕಾಶಗಳನ್ನ ಬಳಸಿಕೊಂಡು ಉತ್ತಮ ಪ್ರದರ್ಶನ ನೀಡುತ್ತೇನೆ ಎಂದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡು ಟಿ-20 ಪಂದ್ಯಗಳಲ್ಲಿ ಕೆ.ಎಲ್​.ರಾಹುಲ್​ ಕ್ರಮವಾಗಿ 50 ಮತ್ತು 47 ರನ್​ಗಳಿಸಿದ್ದರು.

Story first published: Thursday, February 28, 2019, 16:25 [IST]
Other articles published on Feb 28, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+