ಭಾರತ vs ಆಸ್ಟ್ರೇಲಿಯಾ: ಮೊದಲ ಏಕದಿನಕ್ಕೆ ಸಂಭಾವ್ಯ XI ಭಾರತ ತಂಡ

ಹೈದರಾಬಾದ್, ಮಾರ್ಚ್ 1: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಕಳೆದುಕೊಂಡಿರುವ ಭಾರತ ಏಕದಿನ ಸರಣಿಯಲ್ಲಿ ಶುಭಾರಂಭ ಕಾಣುವ ಹುಮ್ಮಸ್ಸಿನಲ್ಲಿದೆ. ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0ಯಿಂದ ಸೋತಿತ್ತು. ಆದರೆ ಹೈದರಾಬಾದ್‌ನಲ್ಲಿ ಮಾರ್ಚ್ 2ರಂದು ನಡೆಯುವ ಪಂದ್ಯವನ್ನು ಗೆದ್ದುಕೊಳ್ಳುವ ಯೋಜನೆಯಲ್ಲಿ ಕೊಹ್ಲಿ ಬಳಗವಿದೆ.
ಟಿ20 ಸರಣಿ ಸೋಲಿನ ಬಗ್ಗೆ ಟೀಮ್ ಇಂಡಿಯಾ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಎರಡೇ ಪಂದ್ಯಗಳ ಸರಣಿಯಿದಾದ್ದರಿಂದ ಭಾರತವೂ ಸಣ್ಣಮಟ್ಟಿನಲ್ಲಿ ನಿರ್ಲಕ್ಷ್ಯ ತೋರಿಕೊಂಡಂತಿತ್ತು. ಆದರೆ ಏಕದಿನ ಸರಣಿಯನ್ನೂ ಸೋತರೆ ಭಾರತಕ್ಕೆ ತೀವ್ರ ಮುಖಭಂಗವಾಗಲಿದೆ. ಹಾಗಾಗಿ ಆರಂಭಿಕ ಏಕದಿನ ಪಂದ್ಯವನ್ನು ಭಾರತ ಗಂಭೀರವಾಗಿ ತೆಗೆದುಕೊಳ್ಳಲಿದೆ.
ಲಭಿಸಿರುವ ಮಾಹಿತಿ ಪ್ರಕಾರ ಆಸೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಅನುಭವಿ ಆಟಗಾರರನ್ನು ಮುಂದಿಟ್ಟುಕೊಂಡು ತಂಡವನ್ನು ಕಣಕ್ಕಿಳಿಸುವುದರಲ್ಲಿದೆ. ವಿಜಯ್ ಶಂಕರ್ ಮತ್ತು ಯುಜುವೇಂದ್ರ ಚಾಹಲ್ ಇವರಲ್ಲಿ ಅಂತಿಮ ಆಯ್ಕೆಯನ್ನು ನಿರ್ಧರಿಸುವುದು ಕಷ್ಟ. ಉಳಿದಂತೆ ಆಡುವ XI ಆಟಗಾರರ ತಂಡ ಬಹುತೇಕ ಕೆಳಗಿನಂತಿರಲಿದೆ.
ಸಂಭಾವ್ಯ ಭಾರತ ತಂಡ: 1. ರೋಹಿತ್ ಶರ್ಮಾ, 2. ಶಿಖರ್ ಧವನ್, 3. ವಿರಾಟ್ ಕೊಹ್ಲಿ, 4. ಅಂಬಾಟಿ ರಾಯುಡು, 5. ಎಂಎಸ್ ಧೋನಿ, 6. ಕೇದಾರ್ ಜಾಧವ್, 7. ವಿಜಯ್ ಶಂಕರ್ / ಯುಜುವೇಂದ್ರ ಚಾಹಲ್, 8. ರವೀಂದ್ರ ಜಡೇಜಾ, 9. ಕುಲದೀಪ್ ಯಾದವ್, 10 ಮೊಹಮ್ಮದ್ ಶಮಿ, 11. ಜಸ್‌ಪ್ರೀತ್ ಬೂಮ್ರಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications