Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಿಯಮ ಪಾಲಿಸುವುದಿಲ್ಲವಾದರೆ ಭಾರತೀಯರು ಬರುವುದು ಬೇಡ: ಕ್ವೀನ್ಸ್‌ಲ್ಯಾಂಡ್ ಪ್ರತಿಕ್ರಿಯೆ

India vs Australia: If Indians don’t want to play by the rules, don’t come

ಬ್ರಿಸ್ಬೇನ್ ಟೆಸ್ಟ್‌ ನಡೆಯುವ ಬಗ್ಗೆ ಗೊಂದಲ ಆರಂಭವಾಗಿದೆ. ಕೊರೊನಾ ವೈರಸ್‌ನ ಕಾರಣದಿಂದಾಗಿ ಕ್ವೀನ್ಸ್‌ಲ್ಯಾಂಡ್ ಸರ್ಕಾರ ನಾಲ್ಕನೇ ಟೆಸ್ಟ್‌ಗೆ ಬ್ರಿಸ್ಬೇನ್‌ಗೆ ತೆರಳಲಿರುವ ಆಟಗಾರರು ಕ್ವಾರಂಟೈನ್ ಪೂರೈಸಲೇಬೇಕು ಎಂಬ ನಿಲುವನ್ನು ಸರ್ಕಾರ ಅಧಿಕೃತವಾಗಿ ವ್ಯಕ್ತಪಡಿಸಿದೆ. ಅದು ಸಾಧ್ಯವಿಲ್ಲವಾದರೆ ಭಾರತೀಯರು ಆಗಮಿಸುವುದು ಬೇಡ ಎಂದು ಕ್ವೀನ್ಸ್ ಲ್ಯಾಂಡ್ ಸರ್ಕಾರದ ಪ್ರತಿನಿಧಿ ಹೇಳಿಕೆ ನೀಡಿದ್ದಾರೆ.

ಕೊರೊನಾ ವೈರಸ್‌ನ ಹಿನ್ನೆಲೆಯಲ್ಲಿ ಬ್ರಿಸ್ಬೇನ್‌ನಲ್ಲಿ ನಡೆಯುವ ಅಂತಿಮ ಟೆಸ್ಟ್‌ಗೆ ಮುನ್ನ ಅಲ್ಲಿನ ರಾಜ್ಯ ಸರ್ಕಾರದ ನಿಯಮದಂತೆ 14 ದಿನಗಳ ಕ್ವಾರಂಟೈನ್ ಪೂರೈಸಬೇಕೆಂಬ ನಿಯಮವಿದ್ದು ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾದಲ್ಲಿ ಎರಡನೇ ಬಾರಿಗೆ ಕ್ವಾರಂಟೈನ್ ಪೂರೈಸಲು ಸಿದ್ಧರಿಲ್ಲ ಎಂಬ ವರದಿಗಳು ಬಂದಿತ್ತು.

ಆಸ್ಟ್ರೇಲಿಯಾಗೆ ತೆರಳುವ ಮುನ್ನ 14 ದಿನಗಳ ಕ್ವಾರಂಟೈನ್ ಪೂರೈಸಿದ್ದ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾದ ಸಿಡ್ನಿಗೆ ತೆರಳಿದ ಬಳಿಕ ಅಲ್ಲಿ 14 ದಿನಗಳ ಕಾಲ ಕಠಿಣ ಕ್ವಾರಂಟೈನ್ ಪೂರೈಸಿದ್ದರು. ಇದೀಗ ಸರಣಿಯ ಅಂತಿಮ ಘಟ್ಟದಲ್ಲಿ ಮತ್ತೊಮ್ಮೆ ಅದೇ ಮಾದರಿಯಲ್ಲಿ ಹೋಟೆಲ್‌ನ ರೂಮ್‌ನಲ್ಲಿ ಬಂಧಿಯಾಗುವುದು ಆಟಗಾರರಿಗೆ ಮಾನಸಿಕವಾಗಿ ಒತ್ತಡವನ್ನು ಉಂಟು ಮಾಡಲಿದೆ.

ಆದರೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಸರ್ಕಾರದ ಸದಸ್ಯೆಯೊಬ್ಬರು ಈ ಬಗ್ಗೆ ಸ್ಪಷ್ಟವಾದ ಹೇಳಿಕೆಯನ್ನು ನೀಡಿದ್ದು ನಿಯಮಗಳನ್ನು ಪಾಳಿಸದಿರುವುದು ಆಯ್ಕೆಯಲ್ಲ ಎಂದಿದ್ದಾರೆ. "ಭಾರತೀಯರು ನಿಯಮದ ಪ್ರಕಾರ ಆಡಲು ನಿದ್ಧರಿಲ್ಲವಾದರೆ ಬರುವುದು ಬೇಡ" ಎಂದು ಕ್ವೀನ್ಸ್‌ಲ್ಯಾಂಡ್‌ನ ಆರೋಗ್ಯ ಸಚಿವೆ ರೀಸ್ ಬೇಟ್ಸ್‌ ಹೇಳಿದ್ದಾರೆ.

Story first published: Sunday, January 3, 2021, 13:27 [IST]
Other articles published on Jan 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+