For Quick Alerts
ALLOW NOTIFICATIONS  
For Daily Alerts
 

ಟಿ20ಯಲ್ಲಿ ಆಸ್ಟ್ರೇಲಿಯಾಕ್ಕೆ ಭಾರತ ಕಠಿಣ ಸವಾಲೊಡ್ಡುವ ನಿರೀಕ್ಷೆ

India vs Australia: India expected to pose tougher challenge to Australia in T20s

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಏಕದಿನ ಸರಣಿಯನ್ನು 2-1ರಿಂದ ಸೋತಿದೆ. ಏಕದಿನ ಸರಣಿಯಲ್ಲಿ ಒಂದಿಷ್ಟು ಹಿನ್ನಡೆಯ ಸಂಗತಿಗಳು ತಂಡದಲ್ಲಿದ್ದವು. ಮುಖ್ಯವಾಗಿ ರೋಹಿತ್ ಶರ್ಮಾ ತಂಡದ ಜೊತೆಗಿರಲಿಲ್ಲ. ಆದರೆ ಟಿ20ಗೆ ಸೂಕ್ತವಾಗಬಲ್ಲ ತಂಡ ಭಾರತದ ಜೊತೆಗಿದೆ. ಹೀಗಾಗಿ ಭಾರತ ತಂಡ ಟಿ20ಯಲ್ಲಿ ಆಸ್ಟ್ರೇಲಿಯಾಕ್ಕೆ ಕಠಿಣ ಸವಾಲೊಡ್ಡುವ ನಿರೀಕ್ಷೆಯಿದೆ.

ಕೊರೊನಾ ವೈರಸ್ ಕಾರಣ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಳ್ಳುವುದಕ್ಕೂ ಮುನ್ನ ಟೀಮ್ ಇಂಡಿಯಾ ಕಡೇಯ ಟಿ20ಐ ಸರಣಿ ಆಡಿದ್ದು ನ್ಯೂಜಿಲೆಂಡ್ ವಿರುದ್ಧ. ಅಂದು ನ್ಯೂಜಿಲೆಂಡ್‌ಗೆ ಪ್ರವಾಸ ಬಂದಿದ್ದ ಭಾರತ 5 ಪಂದ್ಯಗಳ ಟಿ20ಐ ಸರಣಿಯನ್ನು 5-0ಯಿಂದ ವಶಪಡಿಸಿಕೊಂಡಿತ್ತು.

ನವೆಂಬರ್‌ನಲ್ಲಿ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಭಾರತೀಯ ಆಟಗಾರರ ವಿಶ್ವಾಸ ಹೆಚ್ಚಿರುವುದರಿಂದ ಶುಕ್ರವಾರ (ಡಿಸೆಂಬರ್ 4) ನಡೆಯುವ ಮೊದಲ ಟಿ20ಐ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಯಿದೆ. ಟಿ20ಐ ಸರಣಿ ಮೂರು ಪಂದ್ಯಗಳನ್ನು ಒಳಗೊಂಡಿರಲಿದೆ.

ಏಕದಿನ ಸರಣಿಯ ಕಡೇಯ ಪಂದ್ಯದಲ್ಲಿ ಯಾರ್ಕರ್ ಸ್ಪೆಷಾಲಿಸ್ಟ್ ಟಿ ನಟರಾಜನ್ ಉತ್ತಮ ಪ್ರದರ್ಶನ ನೀಡಿದ್ದರು. ಟಿ20ಐನಲ್ಲೂ ಉತ್ತಮ ಬೌಲಿಂಗ್ ಪ್ರದರ್ಶಿಸಲಿದ್ದಾರೆ. ಇನ್ನು ಭಾರತ ಟಿ20ಐ ತಂಡದಲ್ಲಿ ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್ ಕೂಡ ತಂಡಕ್ಕೆ ಬಲ ತುಂಬಲಿದ್ದಾರೆ. ಮೊದಲ ಟಿ20ಐ ಪಂದ್ಯ ಡಿಸೆಂಬರ್ 4ರಂದು 1.40 pmಗೆ ಆರಂಭಗೊಳ್ಳಲಿದೆ.

Story first published: Thursday, December 3, 2020, 18:04 [IST]
Other articles published on Dec 3, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+