ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ದ್ವಿತೀಯ ಏಕದಿನಕ್ಕೆ ಭಾರತ ಸಂಭಾವ್ಯ ತಂಡ

India vs Australia: India Predicted XI for 2nd ODI

ರಾಜ್‌ಕೋಟ್‌, ಜನವರಿ 16: ಮುಂಬೈನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿತ್ತು. ಇದಕ್ಕೆ ಒಂದಿಷ್ಟು ಕಾರಣಗಳೂ ಇದ್ದವು. ಆರಂಭಿಕ ಬ್ಯಾಟ್ಸ್‌ಮನ್‌ಗಳು ಎಣಿಕೆ ಮಟ್ಟದಲ್ಲಿ ವಿಕೆಟ್‌ ಕಾವಲು ಕಾಯದೆ ಹೋಗಿದ್ದು, ವಿರಾಟ್ ಕೊಹ್ಲಿ ಬ್ಯಾಟಿಂಗ್ ಆರ್ಡರ್ ಬದಲಾಯಿಸಿದ್ದು, ಬೌಲರ್‌ಗಳ ವ್ಯರ್ಥ ಶ್ರಮ, ಆಸೀಸ್‌ ಬಲಿಷ್ಠ ಆರಂಭಿಕ ಜೋಡಿ ಎಲ್ಲವೂ ಆತಿಥೇಯರ ಸೋಲಿಗೆ ಕಾರಣವಾಗಿತ್ತು.

ಮುಗಿಯಿತಾ ಧೋನಿ ಯುಗ: ಬಿಸಿಸಿಐ ಕಾಂಟ್ರ್ಯಾಕ್ಟ್ ಲಿಸ್ಟ್‌ನಿಂದ ಧೋನಿ ಹೊರಕ್ಕೆಮುಗಿಯಿತಾ ಧೋನಿ ಯುಗ: ಬಿಸಿಸಿಐ ಕಾಂಟ್ರ್ಯಾಕ್ಟ್ ಲಿಸ್ಟ್‌ನಿಂದ ಧೋನಿ ಹೊರಕ್ಕೆ

ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಜನವರಿ 17ರಂದು 1.30 pmಗೆ ಆರಂಭಗೊಳ್ಳಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಗೆಲ್ಲಲೇಬೇಕು. ಇಲ್ಲದಿದ್ದರೆ ಏಕದಿನ ಸರಣಿ ಸೋಲಿನ ಮುಖಭಂಗವನ್ನೂ ಭಾರತ ಎದುರಿಸಬೇಕಾಗುತ್ತದೆ.

ಭಾರತ ವಿರುದ್ಧದ ಟಿ20ಐ ಸರಣಿಗೆ ಬಲಿಷ್ಠ ನ್ಯೂಜಿಲೆಂಡ್‌ ತಂಡ ಪ್ರಕಟಭಾರತ ವಿರುದ್ಧದ ಟಿ20ಐ ಸರಣಿಗೆ ಬಲಿಷ್ಠ ನ್ಯೂಜಿಲೆಂಡ್‌ ತಂಡ ಪ್ರಕಟ

ದ್ವಿತೀಯ ಪಂದ್ಯದಲ್ಲಿ ಕೊಹ್ಲಿ ಪಡೆ ಗೆಲ್ಲಬೇಕಾದರೆ ಪ್ಲೇಯಿಂಗ್‌ XI ಆರ್ಡರ್‌ ಗಟ್ಟಿಗೊಳಿಸಿಕೊಳ್ಳಬೇಕಿದೆ. ಜೊತೆಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಎಚ್ಚರಿಕೆಯ ಆಟ ಆಡಬೇಕಿದೆ.

ಟಾಪ್ ಆರ್ಡರ್

ಟಾಪ್ ಆರ್ಡರ್

ಮುಂಬೈ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ 74 ರನ್‌ಗಳ ಕೊಡುಗೆಯಿತ್ತರಾದರೂ ಮತ್ತೊಬ್ಬ ಓಪನರ್ ರೋಹಿತ್ ಶರ್ಮಾ (10 ರನ್) ಬೇಗನೆ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತ್ತು. ಅಲ್ಲದೆ ವಿರಾಟ್ ಕೊಹ್ಲಿ 3ನೇ ಕ್ರಮಾಂಕಕ್ಕೆ ಬದಲಾಗಿ 4ನೇ ಕ್ರಮಾಂಕದಲ್ಲಿ ಬಂದಿದ್ದು ಇನ್ನೊಂದು ಎಡವಟ್ಟು (1. ರೋಹಿತ್ ಶರ್ಮಾ, 2. ಶಿಖರ್ ಧವನ್, 3 ವಿರಾಟ್ ಕೊಹ್ಲಿ).

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ತಂಡವೊಂದರ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟಾಗ ತಂಡವನ್ನು ಮೇಲೆತ್ತುವ ಜವಾಬ್ದಾರಿ ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮನ್‌ಗಳ ಮೇಲಿರುತ್ತದೆ. ಆದರೆ ಹಿಂದಿನ ಪಂದ್ಯದಲ್ಲಿ ಭಾರತದ ಮಧ್ಯಮ ಕ್ರಮಾಂಕವೂ ವೈಫಲ್ಯ ತೋರಿಕೊಂಡಿತ್ತು. ರಾಜ್‌ ಕೋಟ್‌ನಲ್ಲಾದರೂ ಮಧ್ಯಮ ಕ್ರಮಾಂಕ ಮಿನುಗುತ್ತಾ ಕಾದು ನೋಡಬೇಕಿದೆ (4. ಕೆಎಲ್ ರಾಹುಲ್, 5. ಶ್ರೇಯಸ್ ಐಯ್ಯರ್, 6. ಮನೀಶ್ ಪಾಂಡೆ).

ಆಲ್ ರೌಂಡರ್

ಆಲ್ ರೌಂಡರ್

ಕಳೆದ ಪಂದ್ಯದಲ್ಲಿ ಮೆನ್ ಇನ್ ಬ್ಲೂ ತಂಡದ ಆಲ್ ರೌಂಡರ್‌ಗಳ ಸಾಲಿನಲ್ಲಿ ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಇದ್ದರು. ಈ ಬಾರಿ ಠಾಕೂರ್ ಬದಲು ತಂಡದಲ್ಲಿ ಸಣ್ಣ ಬದಲಾವಣೆಯಾಗುವ ಸಾಧ್ಯತೆಯಿದೆ. ಯುವ ವೇಗಿ ನವದೀಪ್ ಸೈನಿ ತಂಡ ಸೇರಿಕೊಳ್ಳುವ ನಿರೀಕ್ಷೆಯಿದೆ (7. ರವೀಂದ್ರ ಜಡೇಜಾ).

ಕೆಳ ಕ್ರಮಾಂಕ

ಕೆಳ ಕ್ರಮಾಂಕ

ಮೊದಲ ಏಕದಿನ ಪಂದ್ಯದಲ್ಲಿ ಭಾರತ ಬೌಲರ್‌ಗಳ ಆಟ ನಡೆಯಲೇಯಿಲ್ಲ. ಭಾರತೀಯರು ಎಸೆಯುತ್ತಿದ್ದ ಎಸೆತಗಳನ್ನು, ಬದಲಾವಣೆಗಳನ್ನು ಎದುರಾಳಿ ಬ್ಯಾಟ್ಸ್‌ಮನ್‌ಗಳು ಅರಿತುಕೊಂಡು ಚೆಂಡನ್ನು ಪೆವಿಲಿಯನ್‌ಗೆ ಅಟ್ಟುವುದನ್ನು ಮುಂದುವರೆಸಿದ್ದರು. ಈ ಬಾರಿಯಾದರೂ ಬೌಲರ್‌ಗಳು ಆಸೀಸ್ ಬ್ಯಾಟ್ಸ್‌ಮನ್‌ಗಳ ಮುಂದೆ ಬಲ ಪ್ರದರ್ಶಿಸಬೇಕಿದೆ (8. ಯುಜುವೇಂದ್ರ ಚಾಹಲ್, 9. ಮೊಹಮ್ಮದ್ ಶಮಿ, 10. ನವದೀಪ್ ಸೈನಿ, 11. ಜಸ್‌ಪ್ರೀತ್‌ ಬೂಮ್ರಾ).

Story first published: Thursday, January 16, 2020, 16:51 [IST]
Other articles published on Jan 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X