Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ಪ್ರವಾಸ ಸರಣಿಗಾಗಿ ದುಬೈ ತೊರೆದ ಟೀಮ್ ಇಂಡಿಯಾ

India vs Australia: Indian cricket team departs for Australia tour

ದುಬೈ: ಬಹು ನಿರೀಕ್ಷಿತ ಭಾರತ vs ಆಸ್ಟ್ರೇಲಿಯಾ ಸರಣಿ ಸಲುವಾಗಿ ಟೀಮ್ ಇಂಡಿಯಾ ಬುಧವಾರ (ನವೆಂಬರ್ 11) ಯುನೈಟೆಡ್ ಅರಬ್ ಎಮಿರೇಟ್ಸ್‌ ತೊರೆದಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ ಸಲುವಾಗಿ ಭಾರತ ತಂಡ ತಂಡ ಯುಎಇಯಲ್ಲಿ ಜೊತೆಯಾಗಿತ್ತು. ಅಲ್ಲಿಂದ ಆಸ್ಟ್ರೇಲಿಯಾಕ್ಕೆ ಕೊಹ್ಲಿ ಪಡೆ ಪ್ರಯಾಣ ಬೆಳೆಸಿದೆ. ಸೆಪ್ಟೆಂಬರ್ 19ರಂದು ಆರಂಭಗೊಂಡಿದ್ದ ಐಪಿಎಲ್ ನವೆಂಬರ್ 10ಕ್ಕೆ ಫೈನಲ್‌ನೊಂದಿಗೆ ಅಂತ್ಯಗೊಂಡಿತ್ತು.

ದುಬೈ ಬಿಡುವುದಕ್ಕೂ ಮುನ್ನ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ಹೊರಟು ನಿಂತಿರುವ ಫೋಟೋವನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. ಚಿತ್ರದಲ್ಲಿ ಆಟಗಾರರು ಕ್ರೀಡಾ ಪಿಪಿಇ ಕಿಟ್ ಧರಿಸಿದ್ದಾರೆ.

ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿಯು ಮೂರು ಏಕದಿನ, ಮೂರು ಟಿ20ಯ ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ. ಇದರಲ್ಲಿ ಒಂದು ಪಿಂಕ್‌ ಬಾಲ್ ಟೆಸ್ಟ್ ಕೂಡ ಸೇರಿರಲಿದೆ. ನವೆಂಬರ್ 27ರಂದು ಆರಂಭವಾಗುವ ಪ್ರವಾಸ ಸರಣಿ ಜನವರಿ 19ಕ್ಕೆ ಕೊನೆಗೊಳ್ಳಲಿದೆ.

ಭಾರತ ಟಿ20ಐ ತಂಡ

ಭಾರತ ಟಿ20ಐ ತಂಡ

ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಮಯಾಂಕ್ ಅಗರ್ವಾಲ್, ಕೆ.ಎಲ್.ರಾಹುಲ್ (ಉಪನಾಯಕ, ವಿಕೆ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ (ವಿಕೆ), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಾಹಲ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ದೀಪಕ್ ಚಹಾರ್, ಟಿ. ನಟರಾಜನ್

ಭಾರತ ಏಕದಿನ ತಂಡ

ಭಾರತ ಏಕದಿನ ತಂಡ

ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಶುಬ್ಮನ್ ಗಿಲ್, ಕೆ.ಎಲ್. ರಾಹುಲ್ (ಉಪನಾಯಕ, ವಿಕೆ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಾಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಸಂಜು ಸ್ಯಾಮ್ಸನ್ (ವಿಕೆ).

ಭಾರತ ಟೆಸ್ಟ್ ತಂಡ

ಭಾರತ ಟೆಸ್ಟ್ ತಂಡ

ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಕೆ.ಎಲ್. ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ಶುಬ್ಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆ), ರಿಷಭ್ ಪಂತ್ (ವಿಕೆ), ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ನವದೀಪ್ ಸೈಂದ್, ಕುಲ್ದೀಪ್‌ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್.

ಸಂಪೂರ್ಣ ವೇಳಾಪಟ್ಟಿ (ಭಾರತೀಯ ಕಾಲಮಾನ)

ಸಂಪೂರ್ಣ ವೇಳಾಪಟ್ಟಿ (ಭಾರತೀಯ ಕಾಲಮಾನ)

* 1ನೇ ಏಕದಿನ, ನವೆಂಬರ್ 27: ಸಿಡ್ನಿ, 9:10 AM
* 2ನೇ ಏಕದಿನ, ನವೆಂಬರ್ 29: ಸಿಡ್ನಿ, 9:10 AM
* 3ನೇ ಏಕದಿನ, ಡಿಸೆಂಬರ್ 2: ಮನುಕಾ ಓವಲ್, ಕ್ಯಾನ್ಬೆರಾ, 9:10 AM
* 1ನೇ ಟಿ20, ಡಿಸೆಂಬರ್ 4: ಮನುಕಾ ಓವಲ್: ಕ್ಯಾನ್ಬೆರಾ, 1:40 PM
* 2ನೇ ಟಿ20, ಡಿಸೆಂಬರ್ 6: ಸಿಡ್ನಿ, 1:40 PM
* ಭಾರತ ಎ vs ಆಸ್ಟ್ರೇಲಿ ಎ, ಮೊದಲ ಅಭ್ಯಾಸ ಪಂದ್ಯ, ಡಿಸೆಂಬರ್ 6, ಡ್ರಮ್ಮನಿ ಓವಲ್, ಸಿಡ್ನಿ, 5:00 AM
* 3ನೇ ಟಿ20, ಡಿಸೆಂಬರ್ 8: ಸಿಡ್ನಿ, 1:40 PM
* ಆಸ್ಟ್ರೇಲಿಯಾ ಎ vs ಭಾರತ, ಎರಡನೇ ಅಭ್ಯಾಸ ಪಂದ್ಯ, ಡಿಸೆಂಬರ್ 11-13, ಸಿಡ್ನಿ ಕ್ರಿಕೆಟ್ ಗ್ರೌಂಡ್, ಸಿಡ್ನಿ, 9:30 AM
* 1ನೇ ಟೆಸ್ಟ್, ಡಿಸೆಂಬರ್ 17-21: ಅಡಿಲೇಡ್ ಓವಲ್, 9:30 AM (ಡೇ ನೈಟ್ ಟೆಸ್ಟ್)
* 2ನೇ ಟೆಸ್ಟ್, ಡಿಸೆಂಬರ್ 26-31: ಮೆಲ್ಬರ್ನ್, 5:00 AM
* 3ನೇ ಟೆಸ್ಟ್, ಜನವರಿ 7-11: ಸಿಡ್ನಿ, 5:00 AM
* 4ನೇ ಟೆಸ್ಟ್, ಜನವರಿ 15-19: ದ ಗಬ್ಬಾ, ಬ್ರಿಸ್ಬೇನ್, 5:30 AM

Story first published: Wednesday, November 11, 2020, 23:32 [IST]
Other articles published on Nov 11, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+