ಅಂತಿಮ ಟೆಸ್ಟ್‌ಗೆ ಬ್ರಸ್ಬೇನ್‌ಗೆ ತೆರಳಲು ಟೀಮ್ ಇಂಡಿಯಾ ಹಿಂದೇಟು: ವರದಿ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಎರಡು ಟೆಸ್ಟ್ ಪಂದ್ಯಗಳು ಮುಕ್ತಾಯವಾಗಿದ್ದು ಮೂರನೇ ಟೆಸ್ಟ್‌ಗೆ ದಿನಗಣನೆ ಆರಂಭವಾಗಿದೆ. ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ನ ಆರಂಭಕ್ಕೂ ಮುನ್ನವೇ ಈಗ ನಾಲ್ಕನೇ ಟೆಸ್ಟ್‌ನ ವಿಚಾರವಾಗಿ ಚರ್ಚೆಗಳು ಆರಂಭವಾಗಿದೆ. ಕೊರೊನಾ ವೈರಸ್‌ನ ಹಿನ್ನೆಲೆಯಲ್ಲಿ ಬ್ರಸ್ಬೇನ್‌ನಲ್ಲಿರುವ ಕ್ವಾರಂಟೈನ್ ನಿಯಮದಿಂದಾಗಿ ಟೀಮ್ ಇಂಡಿಯಾ ಬ್ರಿಸ್ಬೇನ್‌ಗೆ ತೆರಳಲು ಹಿಂದೇಟು ಹಾಕುತ್ತಿದೆ ಎಂದು ವರದಿಯಾಗಿದೆ.
ಅಂತಿಮ ಟೆಸ್ಟ್ ನಡೆಯಲಿರುವ ಬ್ರಿಸ್ಬೇನ್ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿದೆ. ಎರಡು ಕ್ರಿಕೆಟ್ ತಂಡಗಳು ಕೂಡ ಬ್ರಿಸ್ಬೇನ್‌ಗೆ ತೆರಳಿದರೆ ಅಲ್ಲಿನ ಸರ್ಕಾರ ಎರಡು ತಂಡಗಳನ್ನೂ 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲಿದೆ. ಹೀಗಾಗಿ ಜನವರಿ 15ರಿಂದ ಆರಂಭವಾಗಲಿರುವ ಅಂತಿಮ ಟೆಸ್ಟ್ ಪಂದ್ಯದ ಬಗ್ಗೆ ಗೊಂದಲಗಳು ಉಂಟಾಗಿದೆ.

ಅಧಿಕೃತವಾಗಿ ಮನವಿ ಮಾಡಿಲ್ಲ
ಯುಎಇನಲ್ಲಿ ನಡೆದ ಐಪಿಎಲ್ 2020 ಆವೃತ್ತಿಯ ಅಂತ್ಯದ ಬಳಿಕ ಆಸ್ಟ್ರೇಲಿಯಾಗೆ ಹಾರಿದ್ದ ಟೀಮ್ ಇಂಡಿಯಾ ಆಟಗಾರರು ಸಿಡ್ನಿಯಲ್ಲಿ 14ದಿನಗಳ ಕ್ವಾರಂಟೈನ್‌ಗೆ ಒಳಗಾಗಿದ್ದರು. ಹೀಗಾಗಿ ಬಿಸಿಸಿಐ ಕ್ರಿಕೆಟ್ ಆಸ್ಟ್ರೇಲಿಯಾಗೆ ಅಧಿಕೃತವಾಗಿ ಯಾವುದೇ ವಿನಂತಿಯನ್ನು ಮಾಡದಿದ್ದರೂ ಟೀಮ್ ಇಂಡಿಯಾ ಆಟಗಾರರು ಮತ್ತೆ ಕ್ವಾರಂಟೈನ್‌ಗೆ ಒಳಗಾಗಲು ಬಯಸುತ್ತಿಲ್ಲ ಎನ್ನಲಾಗಿದೆ. ಅಷ್ಟು ಮಾತ್ರವಲ್ಲದೆ ಮೂರನೇ ಟೆಸ್ಟ್ ಪಂದ್ಯದ ಅಂತ್ಯದ ಬಳಿಕ ನಾಲ್ಕನೇ ಟೆಸ್ಟ್‌ಗೆ 14 ದಿನಗಳ ಕ್ವಾರಂಟೈನ್ ಪೂರೈಸುವಷ್ಟು ಸಮಯಾವಕಾಶವೂ ಇಲ್ಲದಿರುವುದರಿಂದ ಕ್ರಿಕೆಟ್ ಆಸ್ಟ್ರೇಲಿಯಾವೇ ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ.

ಮತ್ತೆ ಕ್ವಾರಂಟೈನ್ ಬಯಸುತ್ತಿಲ್ಲ
ಈ ಬಗ್ಗೆ ಟೀಮ್ ಇಂಡಿಯಾ ಮೂಲಗಳ ಹೇಳಿಕೆಯನ್ನು ಕ್ರಿಕ್ ಬಝ್ ಪ್ರಕಟಿಸಿದ್ದು ಅದರಲ್ಲಿ "ನಿಮಗೆ ತಿಳಿದಿರುವಂತೆಯೇ ನಾವು ದುಬೈಯಿಂದ ಆಸ್ಟ್ರೇಲಿಯಾಗೆ ತೆರಳುವ ಮುನ್ನವೇ 14 ದಿನಗಳ ಕ್ವಾರಂಟೈನ್ ಪೂರೈಸಿದ್ದೆವು. ಸಿಡ್ನಿಗೆ ಬಂದ ಬಳಿಕವೂ 14 ದಿನಗಳ ಕ್ವಾರಂಟೈನ್ ಪೂರೈಸಿದ್ದೇವೆ. ಅಂದರೆ ನಾವು ಇಲ್ಲಿಗೆ ಬರುವ ಮುನ್ನವೇ ಕಠಿಣ ಬಯೋಬಬಲ್‌ನಲ್ಲಿ ತಿಂಗಳುಗಳ ಕಾಲ ಇದ್ದೆವು. ಹೀಗಾಗಿ ಸರಣಿಯ ಅಂತಿಮ ಹಂತದಲ್ಲಿ ಮತ್ತೆ ಕ್ವಾರಂಟೈನ್‌ಗೆ ನಾವು ಬಯಸುತ್ತಿಲ್ಲ" ಎಂದಿದ್ದಾರೆ.

ಸಿಡ್ನಿ ಅಂಗಳ ಮೀಸಲು
ಟೀಮ್ ಇಂಡಿಯಾ ಆಟಗಾರರು ಬ್ರಿಸ್ಬೇನ್‌ಗೆ ತೆರಳಲು ನಿರಾಕರಿಸಿದರೆ ಮೂರನೇ ಟೆಸ್ಟ್ ಪಂದ್ಯ ನಡೆಯಲಿರುವ ಸಿಡ್ನಿ ಕ್ರಿಕೆಟ್ ಗ್ರೌಂಡ್‌ಅನ್ನೇ ನಾಲ್ಕನೇ ಪಂದ್ಯಕ್ಕೆ ಮೀಸಲು ಇರಿಸಿಕೊಳ್ಳುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications