For Quick Alerts
ALLOW NOTIFICATIONS  
For Daily Alerts
 

Ind vs Aus: ಆಸ್ಟ್ರೇಲಿಯಾ ವಿರುದ್ಧದ ಭಾರತದ ಸೋಲಿನ ಬೆನ್ನಲ್ಲೇ ಬಿಸಿಸಿಐಗೆ ಐಸಿಸಿಯಿಂದ ಶಾಕ್!

India vs Australia: Indore pitch receive poor rating by ICC after Australia’s 9-wicket victory

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯ ಅಂತ್ಯವಾಗಿದೆ. ಇಂದೋರ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 9 ವಿಕೆಟ್‌ಗಳ ಅಂತರದ ಸೋಲು ಅನುಭವಿಸಿದ್ದು ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಗೆಲುವು ಸಾಧಿಸಿದೆ. ಈ ಪಂದ್ಯದ ಮುಕ್ತಾಯದ ಬಳಿಕ ಇಂದೋರ್ ಪಿಚ್‌ಗೆ ಐಸಿಸಿ ಶ್ರೇಯಾಂಕ ನೀಡಿದ್ದು ಪಿಚ್‌ನ ಗುಣಮಟ್ಟ ಕಳಪೆ ಎಂದಿದೆ.

ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಬಳಿಕ ಆರಂಭದಲ್ಲಿಯೇ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಕ್ರೀಸ್‌ನಲ್ಲಿ ಭಾತರತದ ಯಾವ ಬ್ಯಾಟರ್‌ ಕೂಡ ನೆಲೆಯೂರಲು ಸಾಧ್ಯವಾಗಿರಲೇ ಇಲ್ಲ. ಹೀಗಾಗಿ ಪಿಚ್ ವಿಚಾರವಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಮೊದಲ ದಿನದಿಂಲೇ ಪಿಚ್ ವರ್ತನೆಯ ಬಗ್ಗೆ ಪ್ರಶ್ನೆಗಳಿ ಏಳಲು ಆರಂಭವಾಗಿದ್ದವು. ಇದೀಗ ಐಸಿಸಿ ಈ ಪಿಚ್ ಬಗ್ಗೆ ರೇಟಿಂಗ್ ನೀಡಿದೆ.

ಗಮನಾರ್ಹ ಅಂಶವೆಂದರೆ ಈ ಸರಣಿಯ ಮೊದಲ ಎರಡು ಪಂದ್ಯಗಳು ನಾಗ್ಪುರ ಹಾಗೂ ದೆಹಲಿಯಲ್ಲಿ ನಡೆದಿದ್ದು ಆ ಎರಡು ಟೆಸ್ಟ್ ಪಂದ್ಯಗಳ ಪಿಚ್‌ಗೂ ಐಸಿಸಿ 'ಸಾಧಾರಣ' ಎಂದು ರೇಟಿಂಗ್ ನೀಡಿತ್ತು. ಆ ಎರಡು ಪಿಚ್‌ಗಳು ಕೂಡ ಮೂರು ದಿನದ ಮುನ್ನವೇ ಅಂತ್ಯ ಕಂಡಿತ್ತು ಹಾಗೂ ಆ ಪಂದ್ಯದಲ್ಲಿಯೂ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿತ್ತು. ಆ ಎರಡು ಪಂದ್ಯದಲ್ಲಿಯೂ ಭಾರತ ಭರ್ಜರಿ ಗೆಲುವು ಸಾಧಿಸಿತ್ತು.

ಇಂಡೋಸ್ ಟೆಸ್ಟ್ ಪಂದ್ಯ ಮ್ಯಾಚ್ ರೆಫ್ರೀ ಕ್ರಿಸ್ ಬ್ರಾಡ್ ಪಿಚ್ ಪರಿಶೀಲಿಸಿ ವರದಿ ನೀಡಿದ್ದು ಈ ಪಿಚ್ ಬ್ಯಾಟ್ ಹಾಗೂ ಬಾಲ್ ಮಧ್ಯೆ ಸಮವಾಗಿ ಹೊಂದಾಣಿಕೆಯಾಗಿಲ್ಲ ಎಂದಿದ್ದಾರೆ. "ಪಿಚ್ ಬಹಳ ಒಣಗಿದೆ. ಆರಂಭದಿಂದಲೂ ಇದು ಬ್ಯಾಟ್ ಹಾಗೂ ಬಾಲ್ ಮಧ್ಯೆ ಹೊಂದಾಣಿಕೆ ಇರುವಂತೆ ಇರಲಿಲ್ಲ" ಎಂದಿದ್ದಾರೆ.

ಇಂದೋರ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 31 ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾಗಿದೆ. ಅದರಲ್ಲೂ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾದ ಸ್ಪಿನ್ನರ್‌ಗಳ ದಾಳಿಗೆ ಕೇವಲ 109 ರ್‌ಗಳಿಸಿ ಆಲವಟ್ ಆಗಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅನುಭವಿ ಆಟಗಾರ ನಾಥನ್ ಲಿಯಾನ್ ಬರೊಬ್ಬರಿ 11 ವಿಕೆಟ್ ಸಂಪಾದಿಸಿದರು.

ಮತ್ತೊಂದು ಅಂಶವೆಂದರೆ ಭಾರತ ಅಪರೂಪಕ್ಕೆ ಎಂಬಂತೆ ಐಸಿಸಿಯಿಂದ ಪಿಚ್ 'ಕಳಪೆ' ಎಂದು ರೇಟಿಂಗ್ ಪಡೆದುಕೊಂಡಿದೆ. ಇದಕ್ಕೂ ಮುನ್ನ 2017ರಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ ಪ್ರವಾಸ ಕೈಗೊಂಡಿದ್ದಾಗ ಕೊನೆಯ ಬಾರಿಗೆ ಭಾರತ ಕಳಪೆ ರೇಟಿಂಗ್ ಪಡೆದುಕೊಂಡಿತ್ತು. ಅಂದು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದ ಪಿಚ್ ಕೂಡ 'ಕಳಪೆ' ಎಂದು ಐಸಿಸಿ ರೇಟಿಂಗ್ ನೀಡಿತ್ತು.

ಐಸಿಸಿ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಹೋಲ್ಕರ್ ಸ್ಟೇಡಿಯಂಗೆ ಮೂರು ಡಿಮೆರಿಟ್ ಅಂಕಗಳನ್ನು ನೀಡಿದೆ. ಮೂರನೇ ಪಂದ್ಯದ ಅಂತ್ಯದ ಬಳಿಕ ಭಾರತದ ನಾಯಕ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲುಯಾ ನಾಯಕ ಸ್ಟೀವ್ ಸ್ಮಿತ್ ಜೊತೆಗೆ ಚರ್ಚಿಸಿದ ಬಳಿಕ ಮ್ಯಾಚ್ ರೆಫ್ರಿ ಈ ಡಿಮೆರಿಟ್ ಅಂಕ ನೀಡಿದ್ದಾರೆ. ಈ ರೇಟಿಂಗ್‌ನ ವಿರುದ್ಧ ಮೇಲ್ಮನವಿ ಸಲ್ಲಿಸಲು ಬಿಸಿಸಿಐಗೆ 14 ದಿನಗಳ ಕಾಲಾವಕಾಶವಿದೆ.

ಐಸಿಸಿಯ ಪಿಚ್ ಹಾಗೂ ಔಟ್‌ಫೀಲ್ಡ್ ಮಾನಿಟರಿಂಗ್ ಪ್ರಾಸೆಸ್(ICC Pitch and Outfield Monitoring Process) ಪ್ರಕಾರ ಒಂದು ತಾಣ ಐದು ವರ್ಷಗಳ ಅವಧಿಯಲ್ಲಿ 5 ಡಿಮೆರಿಟ್ ಅಂಕಗಳನ್ನು ಪಡೆದರೆ 12 ತಿಂಗಳ ಕಾಲ ಆ ಕ್ರೀಡಾಂಗಣವನ್ನು ಒಂದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸದಂತೆ ಅಮಾನತುಗೊಳಿಸಲಾಗುತ್ತದೆ.

Story first published: Friday, March 3, 2023, 21:22 [IST]
Other articles published on Mar 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+