ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20, ಭಾರತದ ಸಂಭಾವ್ಯ ತಂಡ

ಹೈದರಾಬಾದ್, ಫೆಬ್ರವರಿ 22: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕಾಗಿ ಟೀಂ ಇಂಡಿಯಾ ಕಠಿಣ ಅಭ್ಯಾಸ ನಡೆಸಿದೆ. ಐಸಿಸಿ ವಿಶ್ವಕಪ್ 2019ಕ್ಕಾಗಿ ಸಮರ್ಥ ತಂಡವನ್ನು ಬೆಳೆಸುವ ನಿಟ್ಟಿನಲ್ಲಿ ಬಿಸಿಸಿಐ ಈ ಸರಣಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯವು ಭಾನುವಾರ (ಫೆ.24)ದಂದು ನಡೆಯಲಿದೆ. ಭಾರತದ ಪ್ರಮುಖ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯವನ್ನು ಗಾಯಗೊಂಡು ಸರಣಿಯಿಂದ ಹೊರಗುಳಿದಿದ್ದಾರೆ. ವಿಶ್ವಕಪ್ ಗೆ ತಂಡವನ್ನು ಆಯ್ಕೆ ಮಾಡಲು ಬಿಸಿಸಿಐಗೆ ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಹಾಗೂ ಏಕದಿನ ಸರಣಿ ಮುಖ್ಯವಾಗಲಿದೆ.
ಆಡುವ ಹನ್ನೊಂದು ಮಂದಿ ಆಯ್ಕೆ ಮಾಡುವಾಗ ಮಧ್ಯಮ ಕ್ರಮಾಂಕದ ಆಯ್ಕೆ ಕೊಹ್ಲಿಗೆ ತಲೆನೋವಾಗಿ ಪರಿಣಮಿಸಲಿದೆ. ದಿನೇಶ್ ಕಾರ್ತಿಕ್, ಕೆಎಲ್ ರಾಹುಲ್ ಹಾಗೂ ವಿಜಯ್ ಶಂಕರ್ ಪೈಕಿ ಯಾರಿಗೆ ಸ್ಥಾನ ಸಿಗಲಿದೆ ಕಾದು ನೋಡಬೇಕಿದೆ.
ಮೊದಲ ಟಿ20ಐನಲ್ಲಿ ಆಡಬಲ್ಲ ಭಾರತ ತಂಡದ ಸಂಭಾವ್ಯ ಆಟಗಾರರ ವಿವರ ಹೀಗಿದೆ.
ಆರಂಭಿಕ ಆಟಗಾರರು
1. ರೋಹಿತ್ ಶರ್ಮ
2. ಶಿಖರ್ ಧವನ್
ಮಧ್ಯಮ ಕ್ರಮಾಂಕ
3. ಕೆಎಲ್ ರಾಹುಲ್
4. ವಿರಾಟ್ ಕೊಹ್ಲಿ
5. ವಿಜಯ್ ಶಂಕರ್
ವಿಕೆಟ್ ಕೀಪರ್
6.ರಿಷಬ್ ಪಂತ್
7. ಎಂಎಸ್ ಧೋನಿ
ಬೌಲರ್ಸ್
8. ಕೃನಾಲ್ ಪಾಂಡ್ಯ
9. ಯಜುವೇಂದ್ರ ಚಾಹಲ್
10. ಸಿದ್ದಾರ್ಥ್ ಕೌಲ್
11. ಜಸ್ ಪ್ರೀತ್ ಬೂಮ್ರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications