ಭಾರತ vs ಆಸ್ಟ್ರೇಲಿಯಾ: 100ನೇ ಪಂದ್ಯದಲ್ಲಿ ಮಿಂಚುವತ್ತ ಬೂಮ್ರಾ ಚಿತ್ತ!

ಮೊಹಾಲಿ, ಮಾರ್ಚ್ 10: ಮೊಹಾಲಿಯಲ್ಲಿರುವ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 10) ನಡೆಯುತ್ತಿರುವ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಣ 4ನೇ ಏಕದಿನ ಪಂದ್ಯ, ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಪಾಲಿಗೆ 100ನೇ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ.
ಪಂದ್ಯದ Live Score ಕೆಳಗಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಭಾರತ ಪ್ರವಾಸ ಸರಣಿಯ 5 ಪಂದ್ಯಗಳಲ್ಲಿ ಆಡಿರುವ ಬೂಮ್ರಾ ದ್ವಿತೀಯ ಟಿ20 ಮತ್ತು ಮೂರನೇ ಏಕದಿನ ಪಂದ್ಯದಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ ಇನ್ನು ಮೂರು ಪಂದ್ಯಗಳಲ್ಲಿ ಜಸ್‌ಪ್ರೀತ್ 3+2+2ರಂತೆ 7 ವಿಕೆಟ್ ಕೆಡವಿದ್ದರು.
ಬೂಮ್ರಾ ಒಟ್ಟು 10 ಟೆಸ್ಟ್, 47 ಏಕದಿನ ಮತ್ತು 42 ಟಿ20 ಹೀಗೆ ಒಟ್ಟು 99 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಮೊಹಾಲಿ ಪಂದ್ಯ ಬೂಮ್ರಾಗೆ 100ನೆಯದ್ದಾಗಿದ್ದರಿಂದ ಆ ಪಂದ್ಯವನ್ನು ಅವಿಸ್ಮರಣೀಯವಾಗಿಸುವ ನಿರೀಕ್ಷೆಯಿದೆ. ಮೊಹಾಲಿ ಪಂದ್ಯ ಗೆದ್ದರೆ ಐದು ಪಂದ್ಯಗಳ ಏಕದಿನ ಸರಣಿ ಭಾರತದ ವಶವಾಗುವುದಲ್ಲದೆ, ಮೋಹಾಲಿಯಲ್ಲಿ 23 ವರ್ಷಗಳ ಬಳಿಕ ಆಸ್ಟ್ರೇಲಿಯಾಕ್ಕೆ ಸೋಲುಣಿಸಿದ ಹಿರಿಮೆಯೂ ಭಾರತದ್ದಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications