ದ್ರಾವಿಡ್ ದಾಖಲೆ ಮುರಿದ ರಾಹುಲ್: ವಿಶ್ವಕಪ್‌ನಲ್ಲಿ ಭಾರತದ ಪರ ಶ್ರೇಷ್ಠ ಸಾಧನೆ
ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಪೈಪೋಟಿಯ ಪ್ರದರ್ಶನ ನೀಡುತ್ತಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾಗೆ ಸಾಧಾರಣ ಗುರು ನಿಗದಿಪಡಿಸಿದೆ. ಅದನ್ನು ಬೆನ್ನಟ್ಟಿರುವ ಆಸ್ಟ್ರೇಲಿಯಾ ವಿರುದ್ಧ ಬೌಲಿಂಗ್‌ನಲ್ಲಿ ಭಾರತ ಒಂದು ಹಂತದಲ್ಲಿ ಮೇಲುಗೈ ಸಾಧಿಸಿದ್ದರೂ ನಂತರ ಆಸಿಸ್ ಬ್ಯಾಟರ್‌ಗಳು ಹಿಡಿತ ಸಾಧಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಮಿಂಚಿದ್ದಾರೆ. ಆದರೆ ವಿಕೆಟ್ ಕೀಪರ್ ಆಗಿ ರಾಹುಲ್ ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯರ ಪರವಾಗಿ ದಾಖಲೆ ಬರೆದಿದ್ದಾರೆ. ಒಂದು ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್ ಎನ್ನುವ ದಾಖಲೆಯನ್ನು ತಮ್ಮದಾಗಿಸಿದ್ದಾರೆ ಕೆಎಲ್ ರಾಹುಲ್. 2003ರಲ್ಲಿ ರಾಹುಲ್ ದ್ರಾವಿಡ್ ಮಾಡಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ.

2003ರ ವಿಶ್ವಕಪ್‌ನಲ್ಲಿ 16 ಬಲಿ ಪಡೆದಿದ್ದ (15 ಕ್ಯಾಚ್ ಮತ್ತು 1 ಸ್ಟಂಪಿಂಗ್) ರಾಹುಲ್ ದ್ರಾವಿಡ್ ಅವರನ್ನು ರಾಹುಲ್ ಹಿಂದಿಕ್ಕಿದ್ದಾರೆ. ಆಸ್ಟ್ರೇಲಿಯಾದ ರನ್ ಚೇಸ್‌ನ ಐದನೇ ಓವರ್‌ನಲ್ಲಿ ಮಿಚೆಲ್ ಮಾರ್ಷ್ ನೀಡಿದ ಕ್ಯಾಚ್ ಪಡೆಯುವ ಮೂಲಕ ರಾಹುಲ್ ಈ ಸಾಧನೆ ಮಾಡಿದ್ದಾರೆ.
ಇನ್ನು ಒಟ್ಟಾರೆಯಾಗಿ ಈ ದಾಖಲೆಯ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಆಡಮ್ ಗಿಲ್‌ಕ್ರಿಸ್ಟ್ (2003) ಮತ್ತು ನ್ಯೂಜಿಲೆಂಡ್‌ನ ಟಾಮ್ ಲ್ಯಾಥಮ್ (2019) ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ಈ ವಿಕೆಟ್ ಕೀಪರ್‌ಗಳು ತಮ್ಮ ಹೆಸರಿನಲ್ಲಿ ತಲಾ 21 ಬಲಿ ಪಡೆಯುವ ಮೂಲಕ ಈ ದಾಖಲೆಯನ್ನು ಬರೆದಿದ್ದಾರೆ. ಇನ್ನು ಅಲೆಕ್ಸ್ ಕ್ಯಾರಿ (2019) ಮತ್ತು ಕ್ವಿಂಟನ್ ಡಿ ಕಾಕ್ (2023) ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಕೆಎಲ್ ರಾಹುಲ್ ಈ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟರ್ ಆಗಿ ಉತ್ತಮವಾದ ಪ್ರದರ್ಶನ ನೀಡಿದ್ದಾರೆ. ಬಲಗೈ ಬ್ಯಾಟರ್ 11 ಪಂದ್ಯಗಳಿಂದ 75.33 ರ ಸರಾಸರಿಯಲ್ಲಿ 452 ರನ್ ಗಳಿಸಿದರು. ಈ ಟೂರ್ನಿಯಲ್ಲಿ ಅವರು ಒಂದು ಶತಕ ಮತ್ತು ಎರಡು ಅರ್ಧ ಶತಕಗಳನ್ನು ಬಾರಿಸಿದ್ದು 90.76 ಸ್ಟ್ರೈಕ್ ರೇಟ್‌ನಲ್ಲಿ ರನ್ ಬಾರಿಸಿದ್ದಾರೆ.
ಭಾನುವಾರ ರಾಹುಲ್ ಆಸ್ಟ್ರೇಲಿಯಾ ವಿರುದ್ಧ 107 ಎಸೆತಗಳಲ್ಲಿ ಒಂದು ಬೌಂಡರಿ ಸಹಿತ 66 ರನ್ ಗಳಿಸಿದರು. ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ನಲ್ಲಿ 86 ಎಸೆತಗಳಲ್ಲಿ ಅರ್ಧ ಶತಕ ಸಿಡಿಸುವ ಮೂಲಕ ಅತ್ಯಂತ ನಿಧಾನದ ಅರ್ಧಶತಕವನ್ನು ಗಳಿಸಿದರು. ಇನ್ನು ಸಂಕಷ್ಟದ ಸಂದರ್ಭದಲ್ಲಿ ರಾಹುಲ್ ಅವರ ಬ್ಯಾಟ್‌ನಿಂದ ಈ ಪ್ರದರ್ಶನ ಬಂದರುವ ಕಾರಣ ಭಾರತ ತಂಡ 50 ಓವರ್‌ಗಳಲ್ಲಿ 240 ರನ್ ಗಳಿಸಲು ಸಾಧ್ಯವಾಯಿತು. ಇನ್ನು ರಾಹುಲ್ ವಿರಾಟ್ ಕೊಹ್ಲಿ ಜೊತೆ 67 ರನ್‌ಗಳ ಮಹತ್ವದ ಜೊತೆಯಾಟದಲ್ಲಿ ಭಾಗುಯಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications