ಭಾರತ್ ಆರ್ಮಿ ಜೊತೆ ಡ್ಯಾನ್ಸ್‌ಗೆ ಹೆಜ್ಜೆ ಹಾಕಿದ ಟೆಸ್ಟ್ ಸರಣಿ ವಿಜೇತ ಕಲಿಗಳು

ನವದೆಹಲಿ, ಜನವರಿ 7: ಆಸ್ಟ್ರೇಲಿಯಾ ನೆಲದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1ರಿಂದ ಗೆಲ್ಲುವ ಮೂಲಕ ಭಾರತ ಇತಿಹಾಸ ನಿರ್ಮಿಸಿದೆ. ಈ ಖುಷಿಯನ್ನು ವಿರಾಟ್ ಕೊಹ್ಲಿ ಬಳಗ ಭಾರತ್ ಆರ್ಮಿ ಜೊತೆ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದೆ.
ಸುಮಾರು 71 ವರ್ಷಗಳ ಬಳಿಕ ಆಸೀಸ್ ನಲ್ಲಿ ಭಾರತ ತಂಡ ಟೆಸ್ಟ್ ಸರಣಿ ಗೆದ್ದಿದೆ. ನಾಲ್ಕನೇ ಮತ್ತು ಕೊನೆಯ ಪಂದ್ಯ ಮಳೆಯಿಂದ ಪೂರ್ಣಗೊಳ್ಳದೆ ಡ್ರಾ ಎನಿಸಿಕೊಂಡಿತು. ಆದರೆ ಸರಣಿಯಲ್ಲಿ 2-1ರ ಮುನ್ನಡೆಯಲ್ಲಿದ್ದಿದ್ದರಿಂದ ಐತಿಹಾಸಿಕ ಟೆಸ್ಟ್ ಸರಣಿ ಭಾರತದ ವಷವಾಗಿದೆ.
ಈ ಖುಷಿಯನ್ನು ಟೀಮ್ ಇಂಡಿಯಾವು ಇಂಡಿಯನ್ ಆರ್ಮಿ ಜೊತೆ ಸಂಭ್ರಮಿಸಿದೆ. ಭಾರತೀಯ ಸೈನಿಕರೊಂದಿಗೆ ಹೆಜ್ಜೆ ಹಾಕುತ್ತ ನಾಯಕ ಕೊಹ್ಲಿ ನಾಗಿಣಿ ನೃತ್ಯ ಪ್ರದರ್ಶಿಸಿದರು. ಸಂಗೀತ ಕೇಳುತ್ತಲೇ ಸ್ಟೆಪ್ ಹಾಕೋ ಮೂಲಕ ಹಾರ್ದಿಕ್ ಪಾಂಡ್ಯ ಡ್ಯಾನ್ಸಿಗೆ ಮುಂದಾಗಿತ್ತು ವಿಡಿಯೋದಲ್ಲಿ ಸೆರೆಯಾಗಿತ್ತು.
ಸರಣಿ ಜಯಿಸಿ ಭಾರತಕ್ಕಾಗಮಿಸಿದ ಟೀಮ್ ಇಂಡಿಯಾವನ್ನು ಭಾರತ್ ಆರ್ಮಿ ತನ್ನದೇ ವಿಭಿನ್ನ ಶೈಲಿಯಲ್ಲಿ ಬರಮಾಡಿಕೊಂಡಿತು. ಈ ವೇಳೆ ಹಾಕಲಾದ ಉಪ್ಕಾರ್ ಬಾಲಿವುಡ್ ಸಿನಿಮಾದ 'ಮೇರೆ ದೇಶ್‌ಕಿ ಧರ್ತಿ ಸೋನಾ ಉಗ್ಲೆ' ಜನಪ್ರಿಯ ಗೀತೆಗೆ ಕೊಹ್ಲಿ ಬಳಗ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications