ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ: ಧೋನಿ, ಗಂಗೂಲಿ ಹಿಂದಿಕ್ಕಿದ ಕೊಹ್ಲಿ

ಸಿಡ್ನಿ, ಜನವರಿ 7: ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿದ ಏಷ್ಯಾದ ಮೊದಲ ನಾಯಕನಾಗಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸರಣಿ ಜಯಿಸಿದ್ದು ತಂಡದ ಪ್ರಯತ್ನದಿಂದ ಎಂದು ಕೊಹ್ಲಿ ಹೇಳಿದರೂ ಐತಿಹಾಸಿಕ ದಾಖಲೆಗೆ ಕೊಹ್ಲಿ ಕಾರಣರಾಗಿದ್ದಾರೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಭಾರತ 2-1 ಮುನ್ನಡೆ ಸಾಧಿಸಿತ್ತು. 4ನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಕೊನೆಯ ದಿನದಾಟದ ಪಂದ್ಯ ಮಳೆಯ ಕಾರಣ ಮುಂದುವರಿಯಲಿಲ್ಲ. ಅಂತಿಮವಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಲಾಯಿತು. ಸರಣಿ ಮುನ್ನಡೆಯಲ್ಲಿದ್ದ ಭಾರತ ಸರಣಿ ವಶಪಡಿಸಿಕೊಂಡಿತ್ತು.
1947-48ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಟೆಸ್ಟ್ ಸರಣಿ ಜಯಿಸಿತ್ತು. ಅಲ್ಲಿಂದ ಮುಂದೆ ಯಾವ ಟೆಸ್ಟ್ ಸರಣಿಯೂ ಭಾರತದ ವಶವಾಗಿರಲಿಲ್ಲ. ಈ ನೆಲೆಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಸೌರವ್ ಗಂಗೂಲಿ, ಎಂಎಸ್ ಧೋನಿ ಅವರಂತ ಮಾಜಿ ನಾಯಕರನ್ನು ಹಿಂದಿಕ್ಕಿದಂತಾಗಿದೆ.
ಪಂದ್ಯದ ಬಳಿಕ ಮಾತನಾಡುತ್ತ ಕೊಹ್ಲಿ, 'ನಾನೊಬ್ಬನೇ ಖುಷಿಪಡುವುದಕ್ಕಿಂತಲೂ ಒಂದು ತಂಡವಾಗಿ ನಾವು ಅಪರೂಪದ ಸಾಧನೆ ಮೆರೆದಿದ್ದೇವೆ ಎನ್ನಲು ಹೆಮ್ಮೆಪಡುತ್ತೇನೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಸರಣಿ ಜಯಿಸಿದ್ದಾಗಿ ಬಹಳ ಹೆಮ್ಮೆ ಅನ್ನಿಸಿದೆ. ಭಾರತದ ಆಟಗಾರರಿಗೆ ಮುಂದಾಳತ್ವ ವಹಿಸುವ ಅಪೂರ್ವ ಅವಕಾಶ ನನ್ನದು' ಎಂದರು.
2011ರ ವಿಶ್ವಕಪ್ ವಿಜಯದ ಕುರಿತ ಪ್ರಶ್ನೆಗೆ ಉತ್ತರಿಸುತ್ತ ಕೊಹ್ಲಿ, 'ಅಂದು ನಾವು ವಿಶ್ವಕಪ್ ಗೆದ್ದಾಗ ನಾನು ಯುವ ಆಟಗಾರನಾಗಿದ್ದೆ. ಆಗ ಉಳಿದ ಆಟಗಾರರು ಭಾವುಕರಾಗುತ್ತಿದ್ದನ್ನು ನೋಡಿದ್ದೇನೆ. ಇಂದಿನ ಸರಣಿ ಜಯ ನಮಗೆ, ನಮ್ಮ ತಂಡಕ್ಕೆ ವಿಶೇಷ ಗುರುತನ್ನು ನೀಡಿದೆ. ಈ ಸಾಧನೆಗಾಗಿ ನಿಜಕ್ಕೂ ಖುಷಿ ಅನ್ನಿಸಿದೆ' ಎಂದು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications