ಭಾರತ ಮಾಡಿದ್ದು ಸರಿಯಾಗಿದೆ: ಆಸಿಸ್ ಮಾಧ್ಯಮಗಳಿಗೆ ಚಾಟಿ ಬೀಸಿದ ಮೈಕಲ್ ಕ್ಲಾರ್ಕ್

ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು ಭಾರೀ ಹಿನ್ನಡೆ ಅನುಭವಿಸಿದೆ. ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ಭಾರತದ ಗುಣಮಟ್ಟದ ಸ್ಪಿನ್ನರ್‌ಗಳ ವಿರುದ್ಧ ಸಂಪೂರ್ಣ ವಿಫಲವಾದ ಆಸ್ಟ್ರೇಲಿಯಾದ ದಾಂಡಿಗರು ಹೀನಾಯ ಪ್ರದರ್ಶನ ನೀಡಿದ್ದು ಎರಡು ಪಂದ್ಯಗಳಲ್ಲಿಯೂ ಭಾರೀ ಸೋಲು ಕಂಡಿದೆ. ಈ ಸೋಲಿನ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮೈಕಲ್ ಕ್ಲಾರ್ಕ್ ಆಸ್ಟ್ರೇಲಿಯಾ ಮಾಧ್ಯಮಗಳಿಗೆ ಚಾಟಿ ಬೀಸಿದ್ದಾರೆ.
ಆಸ್ಟ್ರೇಲಿಯಾ ತಂಡ ಭಾರತದಲ್ಲಿ ಬ್ಯಾಟಿಂಗ್ ನಡೆಸಲು ಪರದಾಡುತ್ತಿರುವ ರೀತಿಗೆ ಮೈಕಲ್ ಕ್ಲಾರ್ಕ್ ಪ್ರತಿಕ್ರಿಯಿಸಿದ್ದು ತಂಡದ ಮ್ಯಾನೇಜ್‌ಮೆಂಟ್ ಮ್ಯಾಥ್ಯೂ ಹೇಡನ್ ಹಾಗೂ ಮಾರ್ಕ್ ವಾ ಅವರ ನೆರವು ಪಡೆಯದಿರುವ ಬಗ್ಗೆಯೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ದೆಹಲಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ದಾಂಡಿಗರು ಎಲ್ಲಾ ಎಸೆತಗಳನ್ನು ಕೂಡ ಸ್ವೀಪ್ ಮಾಡಲು ನಿರ್ಧರಿಸಿದ ರಣತಂತ್ರದ ಬಗ್ಗೆಯೂ ಮೈಕಲ್ ಕ್ಲಾರ್ಕ್ ಟೀಕಿಸಿದ್ದಾರೆ. ದೆಹಲಿ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಆರು ಆಟಗಾರರು ಸ್ವೀಪ್ ಹಾಗೂ ರಿವರ್ಸ್‌ಸ್ವೀಪ್ ಪ್ರಯತ್ನದಲ್ಲಿ ವಿಕೆಟ್ ಕಳೆದುಕೊಂಡಿದ್ದರು.

ಮಾರ್ಕ್ ವಾ, ಮ್ಯಥ್ಯೂ ಹೇಡನ್ ಭಾರತದಲ್ಲೇ ಇದ್ದಾರೆ!
"ಮ್ಯಾಥ್ಯೂ ಹೇಡನ್ ಹಾಗೂ ಮಾರ್ಕ್ ವಾ ಇಬ್ಬರು ಕೂಡ ಕಾಮೆಂಟೇಟರ್‌ಗಳಾಗಿ ಭಾರತದಲ್ಲಿಯೇ ಇದ್ದಾರೆ. ನಾನೇನಾದರೂ ಆಸ್ಟ್ರೇಲಿಯಾ ಕ್ಯಾಂಪ್‌ನಲ್ಲಿದ್ದರೆ ಪ್ರತಿ ದಿನದ ಅಬ್ಯಾಸದ ಸಂದರ್ಭದಲ್ಲಿಯೂ ಈ ಇಬ್ಬರು ತಂಡದ ಜೊತೆಗೆ ಇರುವುದನ್ನು ಬಯಸುತ್ತಿದ್ದೆ " ಎಂದಿದ್ದಾರೆ ಮೈಕಲ್ ಕ್ಲಾರ್ಕ್.

ಭಾರತ ಮಾಡಿದ್ದು ಸರಿ ಎಂದ ಮೈಕಲ್ ಕ್ಲಾರ್ಕ್
ಇನ್ನು ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಆರಂಭಕ್ಕೂ ಮುನ್ನವೇ ಭಾರತದ ಪಿಚ್ ಬಗ್ಗೆ ಆಸ್ಟ್ರೇಲಿಯಾದ ಮಾಧ್ಯಮಗಳು ಭಾರೀ ಟೀಕೆ ವ್ಯಕ್ತಪಡಿಸಿತ್ತು. ಸರಣಿಯ ಆರಂಭದಿಂದಲೂ ಈ ವಿಚಾರವಾಗಿ ಸಾಕಷ್ಟು ಪರ ವಿರೋಧ ಚರ್ಚೆಗಳಾಗಿದೆ. ಈ ವಿಚಾರವಾಗಿ ಮೈಕಲ್ ಕ್ಲಾರ್ಕ್ ಕೂಡ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಪಿಚ್ ವಿಚಾರವಾಗಿ ಭಾರತ ಸರಿಯಾಗಿಯೇ ನಡೆದುಕೊಂಡಿದೆ ಎಂದಿದ್ದಾರೆ ಮೈಕಲ್ ಕ್ಲಾರ್ಕ್.
ENG vs NZ: ರಾಸ್ ಟೇಲರ್ ಹಿಂದಿಕ್ಕಿ ನ್ಯೂಜಿಲೆಂಡ್ ಪರ ನೂತನ ದಾಖಲೆ ಬರೆದ ಕೇನ್ ವಿಲಿಯಮ್ಸನ್

ಭಾರತ ಪ್ರವಾಸ ಕೈಗೊಂಡಾಗ ಇದಕ್ಕೆ ಸಿದ್ಧವಾಗಿರಬೇಕು
"ಭಾರತ ಪ್ರವಾಸ ಕೈಗೊಳ್ಳುವಾಗ ನೀವು ಏನನ್ನು ಎದುರಿಸಲಿದ್ದೀರಿ ಎಂಬುದರ ಬಗ್ಗೆ ಸ್ಪಷ್ಟ ಅರಿವಿರಬೇಕು. ಯಾವ ರೀತಿಯ ಪಿಚ್‌ಗಳು ನಿಮಗೆ ದೊರೆಯುತ್ತದೆ ಎಂಬುದು ತಿಳಿದಿರಬೇಕು. ಒಂದು ವಿಚಾರವನ್ನು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಈ ರೀತಿಯಾದ ಪಿಚ್‌ಗಳನ್ನು ನಿರ್ಮಿಸುವ ಮೂಲಕ ಭಾರತ ಸರಿಯಾಗಿಯೇ ನಡೆದುಕೊಂಡಿದೆ. ಅವರು ಚಾಣಾಕ್ಷರು. ತವರಿನ ಪಿಚ್‌ಗಳ ಲಾಭವನ್ನು ಬಳಸಿಕೊಳ್ಳುವ ಸಂಪೂರ್ಣ ಹಕ್ಕು ಅವರದಾಗಿರುತ್ತದೆ" ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್.

ನಮ್ಮದು ತಪ್ಪಲ್ಲದಿದ್ದರೆ ಭಾರತದ್ದು ಹೇಗೆ ತಪ್ಪು!?
"ಯಾವುದೇ ತಂಡ ಆಸ್ಟ್ರೇಲಿಯಾಗೆ ಬಂದಾಗ ಅವರು ಗಾಬಾದಲ್ಲಿ ಆಡುವುದನ್ನು ನಾವು ಬಯಸುತ್ತೇವೆ. ವೇಗ ಹಾಗೂ ಬೌನ್ಸ್ ಮೂಲಕ ನೆಲೆಯೂರದಂತೆ ಮಾಡಲು ನಾವು ಬಯಸುತ್ತೇವೆ. ತವರಿನ ಲಾಭವನ್ನು ಬಳಸಿಕೊಳ್ಳಲು ಅದು ಉತ್ತಮವಾದ ದಾರಿ ಎಂಬುದು ನಮಗೆ ಗೊತ್ತಿದೆ. ಅದು ತಪ್ಪಲ್ಲ ಎಂದಾದರೆ ಭಾರತ ಮಾಡಿರುವುದು ಹೇಗೆ ತಪ್ಪಾಗುತ್ತದೆ. ಅದು ತಪ್ಪಲ್ಲ. ಎರಡನೆಯದಾಗಿ, ಅಶ್ವಿನ್ ಮತ್ತು ಜಡೇಜಾ ಈ ಪರಿಸ್ಥಿತಿಗಳಲ್ಲಿ ಅದ್ಭುತ ಎನಿಸಿಕೊಳ್ಳುವಂತಾ ಆಟಗಾರರು. ಅವರಿಬ್ಬರು ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಟಗಾರರು. ಅಂತಾ ಸಂದರ್ಭದಲ್ಲಿ ಅವರಿಗೆ ಅರ್ಹವಾದ ಗೌರವವನ್ನು ನೀಡಬೇಕು ಮತ್ತು ಅದಕ್ಕಾಗಿ ನೀವು ಚೆನ್ನಾಗಿ ತಯಾರಿ ಮಾಡಿಕೊಳ್ಳಬೇಕು ಮತ್ತು ಚುರುಕಾಗಿ ತಯಾರಾಗಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications