Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಡಿಲೇಡ್: ಪಾದಾರ್ಪಣೆ ಪಂದ್ಯದಲ್ಲಿ ಅನಗತ್ಯ ದಾಖಲೆ ಬರೆದ ಸಿರಾಜ್

India vs Australia: Mohammed Siraj sets unwanted record on ODI debut

ಅಡಿಲೇಡ್, ಜನವರಿ 15: ಭಾರತದ ಯುವ ವೇಗಿ ಮೊಹಮ್ಮದ್ ಸಿರಾಜ್ ಅವರು ಬೇಡದ ದಾಖಲೆಯೊಂದಕ್ಕೆ ಕಾರಣರಾಗಿದ್ದಾರೆ. ಅಡಿಲೇಡ್‌ನಲ್ಲಿ ಮಂಗಳವಾರ (ಜನವರಿ 15) ನಡೆದ ಭಾರತ vs ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ಸಿರಾಜ್ ಇಂಥದ್ದೊಂದು ದಾಖಲೆಗೆ ಗುರುತಿಸಿಕೊಂಡರು.

ಅಡಿಲೇಡ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದ ಸಿರಾಜ್ ಒಟ್ಟು 10 ಓವರ್‌ ಎಸೆದಿದ್ದರು. ಆದರೆ ಅವರಿಗೆ ಒಂದೂ ವಿಕೆಟ್ ಲಭಿಸಲಿಲ್ಲ. ಆದರೆ 10 ಓವರ್‌ಗೆ ಸಿರಾಜ್ ಬರೋಬ್ಬರಿ 76 ರನ್‌ ನೀಡಿದ್ದರು. ಇದರಿಂದ ಅತ್ಯಧಿಕ ರನ್ ನೀಡಿದ ಭಾರತದ ಎರಡನೇ ಆಟಗಾರ ಎಂಬ ಹಣೆಪಟ್ಟಿ ಸಿರಾಜ್ ಅವರಿಗೆ ಲಭಿಸಿದೆ.

ಇದಕ್ಕೂ ಮುನ್ನ 1975ರಲ್ಲಿ ಭಾರತದ ಮಾಜಿ ಆಟಗಾರ ಕಾರ್ಸನ್ ಘೌರಿ ಅವರು ಇಂಗ್ಲೆಂಡ್ ವಿರುದ್ಧ ಏಕದಿನ ಪಾದಾರ್ಪಣೆ ಪಂದ್ಯದಲ್ಲಿ 11 ಓವರ್‌ಗೆ 83 ರನ್ ನೀಡಿ ಈ ಅನಗತ್ಯ ದಾಖಲೆಗಾಗಿ ಮೊದಲ ಸ್ಥಾನದಲ್ಲಿದ್ದಾರೆ. ಆದರೆ ಅಡಿಲೇಡ್ ಪಂದ್ಯದಲ್ಲಿ ಭಾರತ ತಂಡ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ಆಟದ ನೆರವಿನೊಂದಿಗೆ 6 ವಿಕೆಟ್ ಗೆಲುವನ್ನಾಚರಿಸಿತು.

Story first published: Tuesday, January 15, 2019, 18:24 [IST]
Other articles published on Jan 15, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+