ಭಾರತ vs ಆಸ್ಟ್ರೇಲಿಯಾ: ಮತ್ತೆ ಕಾಡಿದ ಗಾಯ, ಅಂಗಳದಿಂದ ಹೊರನಡೆದ ನವ್‌ದೀಪ್ ಸೈನಿ

ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಬ್ರಿಸ್ಬೇನ್‌ನಲ್ಲಿ ಅಂತಿಮ ಪಂದ್ಯ ನಡೆಯುತ್ತಿದೆ. ಆದರೆ ಭಾರತಕ್ಕೆ ಗಾಯದ ಸಮಸ್ಯೆಗೆ ಮಾತ್ಯ ಅಂತ್ಯಕಾಣುತ್ತಿಲ್ಲ. ಕೊನೆಯ ಪಂದ್ಯದ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾದ ವೇಗಿ ನವ್‌ದೀಪ್ ಸೈನಿ ಗಾಯಗೊಂಡಿದ್ದು ಮೈದಾನದಿಂದ ಹೊರನಡೆದಿದ್ದಾರೆ.
ಮೊದಲ ದಿನದಾಟದ ಎರಡನೇ ಸೆಶನ್‌ನಲ್ಲಿ ನವ್‌ದೀಪ್ ಸೈನಿ ಇನ್ನಿಂಗ್ಸ್‌ನ 36ನೇ ಓವರ್ ಹಾಗೂ ತನ್ನ 8ನೇ ಓವರ್ ಬೌಲಿಂಗ್ ಮಾಡಿತ್ತಿದ್ದರು. ಇದರ ಐದನೇ ಎಸೆತದ ಸಂದರ್ಭದಲ್ಲಿ ಸೈನಿ ತೊಡೆಭಾಗದಲ್ಲಿ ನೋವಿಗೆ ಒಳಗಾಗಿದ್ದು ಬಳಿಕ ಅಂಗಳದಿಂದಲೇ ಹೊರನಡೆದಿದ್ದಾರೆ.
ನವ್‌ದೀಪ್ ಸೈನಿ ಗಾಯದ ಬಗ್ಗೆ ಬಿಸಿಸಿಐ ಮಾಹಿತಿಯನ್ನು ನೀಡಿದೆ. "ತೊಡೆಯಲ್ಲಿ ನೋವಿನ ಬಗ್ಗೆ ನವ್‌ದೀಪ್ ಸೈನಿ ಹೇಳಿಕೊಂಡಿದ್ದಾರೆ. ಬಿಸಿಸಿಐ ನ ವೈದ್ಯಕೀಯ ಸಿಬ್ಬಂದಿಯಿಂದ ಅವರು ಪರೀಕ್ಷಿಸಲ್ಪಡುತ್ತಿದ್ದಾರೆ" ಎಂದು ಬಿಸಿಸಿಐ ಅಪ್‌ಡೇಟ್ ನೀಡಿದೆ.
ಅಂತಿಮ ಪಂದ್ಯದಲ್ಲಿ ಭಾರತ ಸಂಪೂರ್ಣ ಯುವ ಬೌಲಿಂಗ್ ಪಡೆಯೊಮದಿಗೆ ಕಣಕ್ಕಿಳಿದಿದೆ. ಮೂರನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಜಸ್ಪ್ರೀತ್ ಬೂಮ್ರಾ ಹಾಗೂ ಆರ್ ಅಶ್ವಿನ್ ಕೂಡ ಗಾಯಗೊಂಡಿದ್ದು ಅಂತಿಮ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ವಾಶಿಂಗ್ಟನ್ ಸುಂದರ್ ಹಾಗೂ ಟಿ ನಟರಾಜನ್ ಇಂದಿನ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications