Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಡಿಲೇಡ್ ಟೆಸ್ಟ್‌ಗೆ ಇನ್ನೂ ಪ್ಲೇಯಿಂಗ್ XI ನಿರ್ಧಾರವಾಗಿಲ್ಲ: ಅಜಿಂಕ್ಯ ರಹಾನೆ

India vs Australia: no decision yet on XI for Adelaide Test, says Ajinkya Rahane

ಸಿಡ್ನಿ: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ನಾವು ವೇಗಿ ಇಶಾಂತ್ ಶರ್ಮಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅಡಿಲೇಡ್‌ನಲ್ಲಿ ನಡೆಯಲಿರುವ ಆರಂಭಿಕ ಟೆಸ್ಟ್‌ಗೆ ಪ್ಲೇಯಿಂಗ್‌ XI ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದು ಟೀಮ್ ಇಂಡಿಯಾದ ಟೆಸ್ಟ್ ಉಪನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.

ಡಿಸೆಂಬರ್ 17ರ ಗುರುವಾರದಿಂದ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಯ ಆರಂಭಿಕ ಟೆಸ್ಟ್ (ಡೇ-ನೈಟ್ ಟೆಸ್ಟ್) ಬಳಿಕ ಭಾರತದ ಎಂದಿನ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಪಡೆಯಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.

'ನಮ್ಮಲ್ಲಿ ಬಲಿಷ್ಠ ಬೌಲಿಂಗ್ ದಾಳಿಯಿದೆ. ಆದರೆ ಹೌದು, ಒಬ್ಬ ಅನುಭವಿ ಟೆಸ್ಟ್ ಬೌಲರ್ ಆಗಿ ನಾವು ಖಂಡಿತಾ ಇಶಾಂತ್ ಶರ್ಮಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ,' ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಹಾನೆ ಹೇಳಿದ್ದಾರೆ. ಐಪಿಎಲ್ ವೇಳೆ ಗಾಯಕ್ಕೀಡಾಗಿದ್ದ ಇಶಾಂತ್, ಆಸ್ಟ್ರೇಲಿಯಾ ಸರಣಿಯಿಂದ ಹೊರ ಬಿದ್ದಿದ್ದರು.

'ಮೊದಲ ಪಂದ್ಯದಲ್ಲಿ ಆಡುವ ಕಾಂಬಿನೇಶನ್ ಯಾವುದು ಅಂತ ನಾವಿನ್ನೂ ನಿರ್ಧಾರ ಮಾಡಿಲ್ಲ. ನಾವಿದನ್ನು ನಾಳೆ ಕೂತು ಮಾತನಾಡುತ್ತೇವೆ. ಸರಣಿ ಆರಂಭಕ್ಕೆ ಇನ್ನೂ ಒಂದು ದಿನ ಬಾಕಿಯಿದೆ. ಅಭ್ಯಾಸಕ್ಕೆ ಇನ್ನೊಂದು ಹೆಚ್ಚುವರಿ ದಿನವಿದೆ. ನಾಳೆ ಕೂತು ನಮ್ಮ ಕಾಂಬಿನೇಶನ್ ಬಗ್ಗೆ ಚರ್ಚಿಸುತ್ತೇವೆ,' ಎಂದು ರಹಾನೆ ಹೇಳಿದ್ದಾರೆ.

Story first published: Wednesday, December 16, 2020, 0:24 [IST]
Other articles published on Dec 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+