ಮುರಳಿ ಶತಕ, ರಾಹುಲ್ ಅರ್ಧಶತಕ: ಭಾರತ vs ಆಸೀಸ್ ಅಭ್ಯಾಸ ಪಂದ್ಯ ಡ್ರಾ

ಸಿಡ್ನಿ, ಡಿಸೆಂಬರ್ 1: ಡಿಸ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪ್ರವಾಸಿ ಭಾರತ ಮತ್ತು ಆತಿಥೇಯ ಆಸ್ಟ್ರೇಲಿಯಾ ನಡುವಣ ನಾಲ್ಕು ದಿನಗಳ ಅಭ್ಯಾಸ ಪಂದ್ಯ ಡ್ರಾಗೊಂಡಿದೆ. ಡಿಸೆಂಬರ್ 1ರ ದಿನದಾತ್ಯಂಕ್ಕೆ ದ್ವಿತೀಯ ಇನ್ನಿಂಗ್ಸ್ ಗೆ ಇಳಿದಿದ್ದ ಭಾರತ 43.4 ಓವರ್‌ಗೆ 2 ವಿಕೆಟ್ ಕಳೆದು 211ರನ್ ಪೇರಿಸಿತ್ತು.
ಭಾರತದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಲೋಕೇಶ್ ರಾಹುಲ್ ಮತ್ತು ಮುರಳಿ ವಿಜಯ್ ಮಿಂಚಿದ್ದು ಕಂಡು ಬಂತು. ಹಿಂದಿನ ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದ ರಾಹುಲ್ ಈ ಪಂದ್ಯದಲ್ಲಿ ಕೊಂಚ ಫಾರ್ಮ್ ತೋರಿಕೊಂಡರು. ರಾಹುಲ್ 62, ವಿಜಯ್ 129, ಹನುಮ ವಿಹಾರಿ 15 ರನ್ ಗಳಿಸಿದ್ದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಪೃಥ್ವಿ ಶಾ 66, ಪೂಜಾರ 54, ಕೊಹ್ಲಿ 64, ರಹಾನೆ 56, ಹನುಮ ವಿಹಾರಿ 53, ರೋಹಿತ್ 40 ರನ್ ನೆರವಿನೊಂದಿಗೆ 92 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದು 358 ರನ್ ಪೇರಿಸಿತ್ತು.
ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್ ನಲ್ಲಿ ಡಿ ಅರ್ಚಿ 74, ಮ್ಯಾಕ್ಸ್ ಬ್ರ್ಯಾಂಟ್ 62, ಹ್ಯಾರಿ ನೀಲ್ಸನ್ 100, ಆರನ್ ಹಾರ್ಡಿ 86 ರನ್ ನೆರವಿನೊಂದಿಗೆ 151.1 ಓವರ್ ನಲ್ಲಿ 554 ರನ್ ಗಳಿಸಿತ್ತು. ಈ ವೇಳೆ ವೇಳೆ ಮೊಹಮ್ಮದ್ ಶಮಿ, ಆರ್ ಅಶ್ವಿನ್ ಬೌಲಿಂಗ್ ನಲ್ಲಿ ಮಿಂಚಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications