ಉಮೇಶ್ ಯಾದವ್‌ಗೆ ಬದಲಿ ಆಟಗಾರನ ಹೆಸರಿಸಿದ ಓಜಾ, ದೀಪ್‌ದಾಸ್

ನವದೆಹಲಿ: ಜನವರಿ 7ರ ಗುರುವಾರ ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಕುತೂಹಲಕಾರಿ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಪಂದ್ಯ ಗೆದ್ದುಕೊಳ್ಳುವ ನಿಟ್ಟಿನಲ್ಲಿ ಎರಡೂ ತಂಡಗಳ ಆಟಗಾರರು ಬೆವರಿಳಿಸುತ್ತಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಈ ಪಂದ್ಯ ನಡೆಯಲಿದೆ.
ದ್ವಿತೀಯ ಪಂದ್ಯದ ವೇಳೆ ಭಾರತದ ವೇಗಿ ಉಮೇಶ್ ಯಾದವ್ ಗಾಯಕ್ಕೀಡಾಗಿ ತಂಡದಿಂದ ಹೊರ ಬಿದ್ದಿದ್ದರು. ಅವರ ಜಾಗಕ್ಕೆ ಈಗಾಗಲೇ ಮತ್ತೊಬ್ಬ ವೇಗಿ ಟಿ ನಟರಾಜನ್ ಅವರನ್ನು ಹೆಸರಿಸಲಾಗಿದೆ. ಆದರೆ ಶಾರ್ದೂಲ್ ಠಾಕೂರ್ ಮತ್ತು ನವದೀಪ್ ಸೈನಿ ಕೂಡ ಸ್ಪರ್ಧೆಯಲ್ಲಿದ್ದಾರೆ.
ತೃತೀಯ ಟೆಸ್ಟ್‌ಗೆ ಉಮೇಶ್ ಯಾದವ್ ಬದಲಿಗೆ ಯಾವ ಆಟಗಾರ ಆಗಬಹುದು ಅನ್ನೋದನ್ನು ಭಾರತದ ಮಾಜಿ ಕ್ರಿಕೆಟರ್‌ಗಳಾದ ಪ್ರಗ್ಯಾನ್ ಓಜಾ ಮತ್ತು ದೀಪ್ ದಾಸ್‌ಗುಪ್ತಾ ಹೇಳಿಕೊಂಡಿದ್ದಾರೆ. ಯಾದವ್ ಬದಲಿಗೆ ಶಾರ್ದೂಲ್ ಠಾಕೂರ್ ಸೂಕ್ತ ಎಂದು ಇಬ್ಬರೂ ಹೇಳಿದ್ದಾರೆ.
'ಇದು ತುಂಬಾ ಸ್ಪಷ್ಟ ಆಯ್ಕೆ. ಯಾಕೆಂದರೆ ಶಾರ್ದೂಲ್ ಠಾಕೂರ್ ಸ್ವಿಂಗ್ ಮಾಡಬಲ್ಲರು. ಅವರ ಶಕ್ತಿಯಂದರೆ ಚೆಂಡನ್ನು ಸ್ವಿಂಗ್ ಮಾಡುವುದು. ನಮಗೆ ಸ್ವಿಂಗ್ ಮಾಡಬಲ್ಲ ಬೌಲರೇ ಬೇಕಾಗಿದೆ. ವೇಗಿಗಳು ನಮ್ಮಲ್ಲಿದ್ದಾರೆ. ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬೂಮ್ರಾ ಇದಕ್ಕೆ ಉದಾಹರಣೆ. ಆದರೆ ನಮಗೆ ಸ್ವಿಂಗ್ ಬೌಲರ್‌ನ ಅವಶ್ಯಕತೆಯಿದೆ,' ಎಂದು ಓಜಾ ಹೇಳಿದ್ದಾರೆ. ದೀಪ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications