ಭಾರತ vs ಆಸ್ಟ್ರೇಲಿಯಾ, ಟಿ20 ಸರಣಿ: ಇತ್ತಂಡಗಳ ಪ್ಲಸ್ಸು-ಮೈನಸ್ಸುಗಳು!

ಸಿಡ್ನಿ, ನವೆಂಬರ್ 20: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಬುಧವಾರ (ನವೆಂಬರ್ 21) ಟಿ20 ಸರಣಿಯ ಮೊದಲ ಪಂದ್ಯಕ್ಕಾಗಿ ಮೈದಾನಕ್ಕೆ ಇಳಿಯಲಿದೆ. ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್, ಟಿ20 ಏಕದಿನ ಸರಣಿ ಗೆದ್ದಿರುವ ಭಾರತ ಆಸೀಸ್ ವಿರುದ್ಧವೂ ಮೂರೂ ಸರಣಿಯನ್ನು ವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಸರಣಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆಸೀಸ್ ವಿರುದ್ಧದ ಮೂರೂ ಸರಣಿಯನ್ನು ಗೆದ್ದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ನೆಲೆಯಲ್ಲಿ ತಪ್ಪುಗಳಿಗೆ ಕಡಿವಾಣ ಹಾಕುವ ಮೂಲಕ ಪಾರಮ್ಯ ಮೆರೆಯಲು ಇಡೀ ತಂಡವೇ ಪ್ರಯತ್ನಿಸಬೇಕು ಎಂಬು ತಿಳಿಸಿದ್ದಾರೆ.
ಆಸೀಸ್ ಸ್ಫೋಟಕ ಬ್ಯಾಟ್ಸ್ಮನ್ ಗಳಾದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಮೇಲಿನ ನಿಷೇಧ ಮುಂದುವರಿಕೆಯಿಂದ ತಂಡ ಕೊಂಚ ಬಲಕಳೆದುಕೊಂಡಂತೆ ಮೇಲ್ನೋಟಕ್ಕೆ ಅನ್ನಿಸಿದರೂ ಆಸ್ಟ್ರೇಲಿಯಾ ತಂಡವನ್ನು ಸಂಪೂರ್ಣ ಕಡೆಗಣಿಸುವಂತಿಲ್ಲ. ಹಾಗೆ ನೋಡಿದರೆ ಎರಡೂ ತಂಡಗಳೂ ಧನಾತ್ಮಕ-ಋಣಾತ್ಮಕ ವಿಚಾರಗಳನ್ನು ಒಳಗೊಂಡಿವೆ.

ಇಂಗ್ಲೆಂಡ್ ನಲ್ಲಿ ಎಡವಿಬಿದ್ದಿತ್ತು
ಅಂತಾರಾಷ್ಟ್ರೀಯ ಪ್ರವಾಸದ ವೇಳೆ ಭಾರತ ಪ್ರತೀಸಾರಿ ಅದ್ಭುತ ಪ್ರದರ್ಶನ ನೀಡುವ ಬಲಿಷ್ಠ ತಂಡವೆಂದು ಹೇಳುವಂತಿಲ್ಲ. ಯಾಕೆಂದರೆ ಈ ವರ್ಷ ಭಾರತದ ಇಂಗ್ಲೆಂಡ್ ಪ್ರವಾಸ ಸರಣಿಯೇ ಇದಕ್ಕೆ ಸಾಕ್ಷಿ ಹೇಳುತ್ತವೆ. ಇಂಗ್ಲೆಂಡ್ ಪ್ರವಾಸದ ವೇಳೆ ಟೀಮ್ ಇಂಡಿಯಾ ಅನೇಕ ಕಡೆ ಎಡವಿತ್ತು. ಅದು ಬೌಲಿಂಗ್-ಬ್ಯಾಟಿಂಗ್-ಫೀಲ್ಡಿಂಗ್ ಎಲ್ಲವೂ ಸೇರಿ ತಪ್ಪುಗಳನ್ನು ಮಾಡುತ್ತಲೇ ಟಿ20 ಹೊರತು ಪಡಿಸಿ ಏಕದಿನ ಮತ್ತು ಟೆಸ್ಟ್ ಸರಣಿಯನ್ನು ಕಳೆದುಕೊಂಡಿತ್ತು.

ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ
ಸರಣಿ ಆರಂಭಕ್ಕೂ ಮುನ್ನ ಮಾತನಾಡಿರುವ ಭಾರತದ ತಂಡದ ನಾಯಕ ಕೊಹ್ಲಿ, 'ಇಂಗ್ಲೆಂಡ್ ಪ್ರವಾಸದ ವೇಳೆ ನಾವು ಕೆಲವೊಂದು ತಪ್ಪುಗಳನ್ನು ಮಾಡಿದ್ದೆವು. ಹೀಗಾಗಿ ಸರಣಿಯನ್ನು ಕಳೆದುಕೊಂಡೆವು. ಆದರೆ ಆಸ್ಟ್ರೇಲಿಯಾದಲ್ಲಿ ಆ ತಪ್ಪುಗಳನ್ನೆಲ್ಲ ಸರಿಪಡಿಸಿಕೊಂಡು ಆಡಲಿದ್ದೇವೆ. ಸರಣಿಯನ್ನು ಸಂಪೂರ್ಣ ವಶವಾಗಿಸಿಕೊಳ್ಳಲಿದ್ದೇವೆ' ಎಂದಿದ್ದಾರೆ.

ಫಾರ್ಮ್‌ನಲ್ಲಿ ಭುವಿ-ಬೂಮ್ರಾ
ಭಾರತದ ಬ್ಯಾಟಿಂಗ್ ವಿಭಾಗದ ಬಲವಾಗಿ ಕೊಹ್ಲಿ, ರೋಹಿತ್, ಧವನ್, ಕಾರ್ತಿಕ್ ನಂತ ಬಲಿಷ್ಠರಿದ್ದರೆ, ಸದ್ಯ ಭರ್ಜರಿ ಫಾರ್ಮ್ ನಲ್ಲಿರುವ ಜಸ್‌ಪ್ರೀತ್ ಬೂಮ್ರಾ ಮತ್ತು ಭುವನೇಶ್ವರ್ ಯಾದವ್ ಬೌಲಿಂಗ್ ವಿಭಾಗಕ್ಕೆ ಬಲ ತುಂಬಬಲ್ಲರು.

ವಾರ್ನರ್-ಸ್ಮಿತ್ ಬೆಂಬಲವಿಲ್ಲ
ಭಾರತದ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ದೈತ್ಯರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರ ಮೇಲಿನ ನಿಷೇಧವನ್ನು ಕಡಿತಗೊಳಿಸುವ ಮೂಲಕ ಆಡುವ ತಂಡದಲ್ಲಿ ಸ್ಮಿತ್-ವಾರ್ನರ್ ಬಳಿಸಿಕೊಳ್ಳಬೇಕೆಂದು ಕ್ರಿಕೆಟ್ ಆಸ್ಟ್ರೇಲಿಯಾ ಕೊಂಚ ಹೊಯ್ದಾಟ ನಡೆಸಿದ್ದು ನಿಜ. ಆದರೆ ಚೆಂಡು ವಿರೂಪ ಪ್ರಕರಣದಲ್ಲಿ ಇಬ್ಬರ ಮೇಲೂ ಹೇರಲಾಗಿರುವ 1 ವರ್ಷದ ಶಿಕ್ಷೆಯನ್ನು ಕಡಿತಗೊಳಸಲು ಸಾಧ್ಯವಾಗಿಲ್ಲ. ನಿಷೇಧ ಮುಂದವರಿಕೆಯಾಗಿದೆ. ಹೀಗಾಗಿ ಆಸೀಸ್‌ಗೆ ಸ್ಮಿತ್-ವಾರ್ನರ್ ಬೆಂಬಲ ಆಸೀಸ್‌ಗೆ ಇಲ್ಲವಾಗಿದೆ.

ಮೊದಲ ಟಿ20ಗೆ 12 ಜನರ ಭಾರತ ತಂಡ
ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ರಿಷಬ್ ಪಂತ್, ದಿನೇಶ್ ಕಾರ್ತಿಕ್ (ವಿಕೆ), ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ಭುವನೇಶ್ವರ ಕುಮಾರ್, ಜಾಸ್‌ಪ್ರೀತ್ ಬೂಮ್ರಾ, ಖಲೀಲ್ ಅಹ್ಮದ್, ಯುಜುವೇಂದ್ರ ಚಾಹಲ್.
ಬ್ರಿಸ್ಬೇನ್‌ನ ಗಬ್ಬಾದಲ್ಲಿ 1.20pmಗೆ ಪಂದ್ಯ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications