ಭಾರತ vs ಆಸ್ಟ್ರೇಲಿಯಾ: ಮತ್ತೆ ಎಡವಿದ ಪೃಥ್ವಿಗೆ ಟ್ವಿಟರ್‌ನಲ್ಲಿ ಭಾರೀ ಟೀಕೆ

ಅಡಿಲೇಡ್: ಭಾರತದ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಭಾರತ-ಆಸ್ಟ್ರೇಲಿಯಾ ಟೆಸ್ಟ್ ತಂಡದಲ್ಲಿ ಶಾಗೆ ಸ್ಥಾನ ನೀಡಲಾಗಿದೆಯಾದರೂ ಶಾ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಪೃಥ್ವಿಯನ್ನು ಟೀಕಿಸಿದ್ದಾರೆ.
ಅಡಿಲೇಡ್ ಓವಲ್‌ನಲ್ಲಿ ಭಾರತ-ಆಸ್ಟ್ರೇಲಿಯಾ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಪೃಥ್ವಿ ಶಾ 0ಗೆ ಮಿಚೆಲ್ ಸ್ಟಾರ್ಕ್‌ಗೆ ಬೌಲ್ಡ್ ಆಗಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲಾದರೂ ಪೃಥ್ವಿ ಟೀಕಾಕಾರರಿಗೆ ಬ್ಯಾಟ್ ಮೂಲಕ ಉತ್ತರಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು.
ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲೂ 21ರ ಹರೆಯದ ಪೃಥ್ವಿ ಎಡವಿದ್ದಾರೆ. 4 ಎಸೆತಗಳಲ್ಲಿ ಕೇವಲ 4 ರನ್ ಬಾರಿಸಿ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ದ್ವಿತೀಯ ಇನ್ನಿಂಗ್ಸ್‌ನಲ್ಲೂ ಶಾ ನೀರಸ ಬ್ಯಾಟಿಂಗ್ ನೋಡುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಪೃಥ್ವಿಯತ್ತ ಟೀಕಾ ಬಾಣಗಳು ಬರತೊಡಗಿವೆ.
ಪೃಥ್ವಿ ಶಾ ವಾಪಸ್ ಹೋಗಿ ಒಂದಿಷ್ಟು ದೇಸಿ ಕ್ರಿಕೆಟ್ ಆಡಲಿ ಎಂದು ಭಾರತದ ಮಾಜಿ ಬೌಲರ್, ಕನ್ನಡಿಗ ದೊಡ್ಡ ಗಣೇಶ್ ಸಲಹೆ ನೀಡಿದ್ದರೆ, ವಾಸಿಮ್ ಜಾಫರ್, ಆಸ್ಟ್ರೇಲಿಯಾ ಮಾಜಿ ಕೋಚ್ ಟಾಮ್ ಮೂಡಿ, ಭಾರತದ ವಾಗ್ಮಿ ಜಯ್ ಭಟ್ಟಾಚಾರ್ಯ ಸೇರಿದಂತೆ ಹಲವಾರು ಮಂದಿ ಪೃಥ್ವಿಯನ್ನು ಟ್ವೀಟ್ ಮೂಲಕ ಟೀಕಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications