ಆಸ್ಟ್ರೇಲಿಯಾಗೆ ರಾಹುಲ್ ದ್ರಾವಿಡ್ ಕಳುಹಿಸುವ ಬಗ್ಗೆ ಸ್ಪಷ್ಟನೆ ನೀಡಿದ ರಾಜೀವ್ ಶುಕ್ಲ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡ ಬಳಿಕ ಭಾರತ ತಂಡದ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಟೀಮ್ ಇಂಡಿಯಾ ಪ್ರದರ್ಶನದ ಬಗ್ಗೆ ಬಿಸಿಸಿಐ ಕೂಡ ಆತಂಕಿತವಾಗಿದೆ ಎಂದು ಬಿಸಿಸಿಐ ಉಪಾಧ್ಯಕ್ಷರಾಗಲಿರುವ ರಾಜೀವ್ ಶುಕ್ಲಾ ಹೇಳಿಕೆಯನ್ನು ನೀಡಿದ್ದಾರೆ.
ಸೋಮವಾರ ರಾಜೀವ್ ಶುಕ್ಲಾ ಎಎನ್‌ಐ ಜೊತೆಗೆ ಮಾತನಾಡಿದ್ದು ಈ ಸಂದರ್ಭದಲ್ಲಿ ತಂಡದ ಸೋಲಿನ ಬಗ್ಗೆ ಹಾಗೂ ಬಿಸಿಸಿಐ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 36 ರನ್‌ಗಳಿಗೆ ಎಲ್ಲಾ ವಿಕೆಟ್ ಒಪ್ಪಿಸಿದ ಬಳಿಕ 8 ವಿಕೆಟ್‌ಗಳಿಂದ ಶರಣಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದರು. ಈ ಸಂದರ್ಭದಲ್ಲಿ ರಾಜೀವ್ ಶುಕ್ಲಾ ಆಸ್ಟ್ರೇಲಿಯಾಗೆ ರಾಹುಲ್ ದ್ರಾವಿಡ್ ಅವರನ್ನು ಕಳುಹಿಸಿಕೊಡಲಿದೆ ಎಂಬ ಅಭಿಪ್ರಾಯದ ಬಗ್ಗೆಯೂ ಬಿಸಿಸಿಐ ನಿಲುವನ್ನು ತಿಳಿಸಿದ್ದಾರೆ.

ಬಿಸಿಸಿಐ ಸಂತೋಷವಾಗಿಲ್ಲ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅನುಭವಿಸಿದ ಸೋಲಿಗೆ ಬಿಸಿಸಿಐ ಸಂತೋಷವಾಗಿಲ್ಲ. ಅದು ನಿಜಕ್ಕೂ ಉತ್ತಮ ಸ್ಕೋರ್ ಅಲ್ಲ. ನಾವು ಆ ಬಗ್ಗೆ ಕಳವಳಗೊಂಡಿದ್ದೇವೆ. ಬಿಸಿಸಿಐ ಅರ್ಧಯಕ್ಷ ಸೌರಬ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಕೂಡ ಈ ಸೋಲಿನಿಂದಾಗಿ ಕಳವಳಗೊಂಡಿದ್ದಾರೆ ಎಂದು ರಾಜೀವ್ ಶುಕ್ಲ ಹೇಳಿದ್ದಾರೆ.

ಮ್ಯಾನೇಜ್‌ಮೆಂಟ್ ಜೊತೆಗೆ ಸಂಪರ್ಕದಲ್ಲಿ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ತಂಡದ ಪ್ರದರ್ಶನ ಉತ್ತಮ ಪಡಿಸಲು ಅಗತ್ಯವಾಗಿರುವ ವಿಚಾರಗಳ ಕಡೆಗೆ ಗಮನಹರಿಸುತ್ತಿದ್ದು ನಿರಂತರವಾಗಿ ತಂಡದ ಮ್ಯಾನೇಜ್‌ಮೆಂಟ್ ಜೊತೆಗೆ ಸಂಪರ್ಕದಲ್ಲಿದ್ದಾರೆ. ಇಬ್ಬರೂ ಕೂಡ ತಂಡದ ಪ್ರದರ್ಶನ ಉತ್ತಮಗೊಳಿಸಲು ಕೆಲ ಯೋಜನೆಗಳನ್ನು ಹೊಂದಿದ್ದಾರೆ. ಮುಂದಿನ ಪಂದ್ಯದಲ್ಲಿ ತಂಡದ ಪ್ರದರ್ಶನ ಉತ್ತಮವಾಗಿರಲಿದೆ ಎಂದು ನಾನು ನಿರೀಕ್ಷೆಯಲ್ಲಿದ್ದೇನೆ ಎಂದು ಶುಕ್ಲಾ ಹೇಳಿದ್ದಾರೆ.

ರಾಹುಲ್ ತೆರಳುವ ಬಗ್ಗೆ ಶುಕ್ಲ ಸ್ಪಷ್ಟನೆ
ಇನ್ನು ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾಗೆ ರಾಹುಲ್ ದ್ರಾವಿಡ್ ಅವರನ್ನು ಕಳುಹಿಸಿಕೊಡುವ ಬಗ್ಗೆ ಪ್ರಶ್ನೆ ರಾಜೀವ್ ಶುಕ್ಲಾ ಅವರಿಗೆ ಪ್ರಶ್ನೆ ಎದುರಾಯಿತು. ಈ ಬಗ್ಗೆ ರಾಜೀವ್ ಶುಕ್ಲಾ ಸ್ಪಷ್ಟ ಉತ್ತರವನ್ನು ಹೇಳಿದ್ದಾರೆ. "ಆಸ್ಟ್ರೇಲಿಯಾಗೆ ಯಾರೂ ಕೂಡ ತೆರಳುತ್ತಿಲ್ಲ. ಆತಿಥೇಯರ ವಿರುದ್ಧ ನಮ್ಮ ಮೊದಲ ಇನ್ನಿಂಗ್ಸ್‌ನ ಪ್ರದರ್ಶನ ಉತ್ತಮವಾಗಿತ್ತು. ನಾವು ಮುನ್ನಡೆಯನ್ನು ಕೂಡ ಪಡೆದುಕೊಂಡಿದ್ದೆವು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ನಾವು ಕುಸಿದುಹೋದೆವು, ಕೆಲ ಬಾರಿ ಈ ರೀತಿ ನಡೆಯುತ್ತದೆ. ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡಲು ಸಮರ್ಥರಾಗಿದ್ದಾರೆ" ಎಂದು ರಾಜೀವ್ ಶುಕ್ಲಾ ಹೇಳಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸ ಯಾವಾಗಲೂ ಸವಾಲು
"ಆಸ್ಟ್ರೇಲಿಯಾದ ಪ್ರವಾಸ ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ಈ ಹಿಂದಿನ ಪ್ರದರ್ಶನವನ್ನು ಹೋಲಿಸಿಕೊಂಡು ನೋಡಿದರೆ ಆಸಿಸ್ ಬೌಲರ್‌ಗಳನ್ನು ಎದುರಿಸುವುದು ತುಂಬಾ ಕಠಿಣವಾಗಿದೆ. ಆದರೆ ಭಾರತ ಮುನ್ನುಗ್ಗಲಿದ್ದು ಆಸ್ಟ್ರೇಲಿಯಾದಲ್ಲಿ ಉತ್ತಮ ರನ್ ಗಳಿಸಲಿದೆ. ವಿರಾಟ್ ಕೊಹ್ಲಿ ಗೈರು ಇದ್ದರೂ ಇತರರ ಆಟಗಾರರು ಉತ್ತಮ ಪ್ರದರ್ಶನ ನೀಡಲು ಸಮರ್ಥರಾಗಿದ್ದಾರೆ" ಎಂದು ರಾಜೀವ್ ಶುಕ್ಲ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications