ಭಾರತ vs ಆಸ್ಟ್ರೇಲಿಯಾ: ವಿಚಿತ್ರ ಕಾರಣ, ಪಂತ್ ಆಯ್ಕೆ ಅನುಮಾನ!

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸಕ್ಕೆ ಸಂಬಂಧಿಸಿ ಭಾರತದ ಕ್ರಿಕೆಟ್ ತಂಡವನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಪ್ರಕಟಿಸುವುದರಲ್ಲಿದೆ. ಆದರೆ ಈ ತಂಡದಲ್ಲಿ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಕಾಣಿಸಿಕೊಳ್ಳೋದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಸುಮಾರು 32 ಮಂದಿಯ ದೊಡ್ಡ ತಂಡವನ್ನು ಪ್ರಕಟಿಸಲಿದೆಯಾದರೂ ಪಂತ್ ಇದರಲ್ಲಿ ಕಾಣಿಸಿಕೊಳ್ಳೋ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಸದ್ಯದ ಆಯ್ಕೆ ಸಮಿತಿ ಅಂತಾರಾಷ್ಟ್ರೀಯ ಸರಣಿಗಳಿಗೆ ತಂಡಗಳನ್ನು ಆರಿಸುವಾಗ ಸಾಕಷ್ಟು ನಿಗಾ ವಹಿಸುತ್ತದೆ. ಆಟಗಾರರ ಆಯ್ಕೆಗೆ ಮಾನದಂಡಗಳನ್ನು ವಿಧಿಸುತ್ತದೆ. ಈ ಮಾನದಂಡಗಳಲ್ಲಿ ಪಾಸ್ ಎನಿಸಿದರೆ ಮಾತ್ರ ತಂಡದಲ್ಲಿ ಸ್ಥಾನ ಲಭಿಸುತ್ತದೆ.
ಬಿಸಿಸಿಐ ಆಯ್ಕೆ ಸಮಿತಿಯ ಈ ಮಾನದಂಡಗಳೇ ಯುವ ಉದಯೋನ್ಮುಖ ಆಟಗಾರ ರಿಷಭ್ ಪಂತ್‌ಗೆ ಉರುಳಾಗುವ ಸಾದ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೆಎಲ್ ರಾಹುಲ್ ಉತ್ತಮ ಪ್ರದರ್ಶನ
ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಿಂಗ್ಸ್ 11 ಪಂಜಾಬ್ ನಾಯಕ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಭಾರತ ತಂಡದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಗಾಗಿಯೂ ರಾಹುಲ್‌ಗೆ ಬೆಂಬಲಿಸಿದ್ದನ್ನು ಈ ಮೊದಲು ನಾವು ನೋಡಿದ್ದೇವೆ. ಹೀಗಾಗಿ ಆಸೀಸ್ ಪ್ರವಾಸದ ವೇಳೆ ಆಯ್ಕೆ ವಿಚಾರದಲ್ಲಿ ರಾಹುಲ್ ಇನ್ನಷ್ಟು ಪ್ರಭಾವ ಬೀರಲಿದ್ದಾರೆ.

ಸ್ಯಾಮ್ಸನ್, ಕಿಶನ್‌ನತ್ತ ಆಯ್ಕೆ ಸಮಿತಿ ಚಿತ್ತ
ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ನಲ್ಲಿ ಆಡುವ ಯುವ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಕೂಡ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ. ವಿಕೆಟ್ ಕೀಪಿಂಗ್‌ನಲ್ಲೂ ಸಂಜು ಚೆನ್ನಾಗಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್‌ನ ಯಂಗ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ನತ್ತ ಕೂಡ ಆಯ್ಕೆ ಸಮಿತಿ ಚಿತ್ತ ಹರಿಸಿದೆ ಎನ್ನಲಾಗಿದೆ.

ಪಂತ್ ಆಯ್ಕೆ ಯಾಕೆ ಅನುಮಾನ?!
ಅಂತಾರಾಷ್ಟ್ರೀಯ ಸರಣಿಗಳಿಗೆ ತಂಡಗಳನ್ನು ಆರಿಸುವಾಗ ಫಿಟ್‌ನೆಸ್ ವಿಚಾರದಲ್ಲಿ ಆಯ್ಕೆ ಸಮಿತಿ ರಾಜಿ ಮಾಡಿಕೊಳ್ಳುತ್ತಿಲ್ಲ. ಯೋ ಯೋ ಟೆಸ್ಟ್ ವಿಚಾರದಲ್ಲಿ ಆಯ್ಕೆ ಸಮಿತಿ ಖಡಕ್ ಆಗಿದೆ. ಇತ್ತ ಪಂತ್ ಅವರ ದೇಹತೂಕ ಜಾಸ್ತಿಯಾಗಿದೆ. ಹೀಗಾಗಿ ತಂಡ ಪ್ರಕಟಿಸುವ ಮುನ್ನ ಫಿಟ್ನೆಸ್ ತರಬೇತುದಾರ ನಿಕ್ ವೆಬ್ ಜೊತೆ ಮಾತನಾಡುವುದಾಗಿ ಬಿಸಿಸಿಐ ಹೇಳಿದೆ. ಪಂತ್ ಕತೆ ಹೀಗಾದರೆ ಇನ್ನು ರೋಹಿತ್ ಶರ್ಮಾ ಕತೆಯೇನು? ಎಂಬ ಪ್ರಶ್ನೆಯೂ ಕೆಲವರು ಕೇಳುತ್ತಿದ್ದಾರೆ.

ಫಿಟ್ನೆಸ್ ವರದಿ ಪರಿಗಣಿಸುತ್ತೇವೆ
'ಕೆಲ ದಿನಗಳ ಹಿಂದೆ ಭಾರತದ ಫಿಟ್ನೆಸ್ ತರಬೇತುದಾರರು ಪಂತ್ ಬಗ್ಗೆ ವಿಚಾರ ಹಂಚಿಕೊಂಡಿದ್ದಾರೆ. ಅವರ ತೂಕ ತುಂಬಾ ಹೆಚ್ಚು ಅನ್ನೋದನ್ನು ನಾವೂ ನಂಬುತ್ತೇವೆ. ಮೈದಾನದಲ್ಲಿ ಅವರು ಹೇಗಿರುತ್ತಾರೆ ಅನ್ನೋದಕ್ಕಿಂತ ಫಿಟ್ನೆಸ್ ವರದಿ ಆಧರಿಸಿ ತಂಡದ ಆಯ್ಕೆಯಲ್ಲಿ ಪಂತ್‌ನನ್ನು ಪರಿಗಣಿಸುತ್ತೇವೆ. ಹೀಗಾಗಿ ಆಯ್ಕೆಗೂ ಮುನ್ನ ತರಬೇತುದಾರ ನಿಕ್ ವೆಬ್ ಜೊತೆ ಮಾತನಾಡಲಿದ್ದೇವೆ,' ಎಂದು ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications