ಭಾರತ vs ಇಂಗ್ಲೆಂಡ್: ಮತ್ತೆ ಶತಕದಂಚಿನಲ್ಲಿ ಎಡವಿದ ರಿಷಭ್ ಪಂತ್

ಟೀಮ್ ಇಂಡಿಯಾದ ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮತ್ತೊಂದು ಅದ್ಭುತ ಇನ್ನಿಂಗ್ಸ್ ನೀಡಿ ಶತಕದಂಚಿನಲ್ಲಿ ಎಡವಿದ್ದಾರೆ. ಟೀಮ್ ಇಂಡಿಯಾ ಕುಸಿಯುವ ಭೀತಿಯಲ್ಲಿದ್ದಾಗ ಚೇತೇಶ್ವರ್ ಪೂಜಾರ ಜೊತೆ ಸೇರಿದ ಪಂತ್ ಉತ್ತಮ ಜೊತೆಯಾಟವನ್ನು ನೀಡಿದರು. ಪಂತ್ ಹಾಗೂ ಪೂಜಾರ 119 ರನ್‌ಗಳ ಅಮೂಲ್ಯ ಜೊತೆಯಾಟವನ್ನು ನೀಡಿ ತಂಡದ ಮೊತ್ತದ ಹೆಚ್ಚಳಕ್ಕೆ ಕಾರಣರಾದರು.
ರಿಷಭ್ ಪಂತ್ ಆರಂಭದಿಂದಲೇ ಸ್ಪೋಟಕ ಆಟವನ್ನು ಪ್ರದರ್ಶಿಸಿದರು. ಮತ್ತೊಂದೆಡೆ ಚೇತೇಶ್ವರ್ ಪೂಜಾರ ಎಚ್ಚರಿಕೆಯಿಂದ ಆಟವಾಡುತ್ತಾ ಸಾಗಿದರು. 73 ರನ್‌ಗಳಿಸಿದ್ದ ವೇಳೆ ಪೂಜಾರ ವಿಕೆಟ್ ಒಪ್ಪಿಸಿ ಫೆವಿಲಿಯನ್‌ಗೆ ಸೇರಿದರು. ಬಳಿಕವೂ ತಮ್ಮ ಶೈಲಿಯಲ್ಲೇ ಪಂತ್ ಬ್ಯಾಟಿಂಗ್ ಮುಂದುವರಿಸಿದರು.

ಎಡವಿದ ರಿಷಭ್ ಪಂತ್
ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ 91 ರನ್ ಗಳಿಸಿದ್ದ ವೇಳೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ಎಡವಿದರು. ಈ ಮೂಲಕ ಶತಕ ಬಾರಿಸುವ ಮತ್ತೊಂದು ಅವಕಾಶವನ್ನು ತಪ್ಪಿಸಿಕೊಂಡರು. ಡಾಮ್ ಬೆಸ್ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಯತ್ನದಲ್ಲಿ ವಿಫಲರಾಗಿ ಜಾಕ್ ಲೀಚ್‌ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದರು. 88 ಎಸೆತಗಳನ್ನು ಎದುರಿಸಿದ ಪಂತ್ 9 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದರು.

ಉತ್ತಮ ಫಾರ್ಮ್‌ನಲ್ಲಿ ಪಂತ್
ರಿಷಭ್ ಪಂತ್ ಕಳೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ ಅಮೂಲ್ಯ 97 ರನ್‌ಗಳ ಕೊಡುಗೆಯನ್ನು ನೀಡಿ ವಿಕೆಟ್ ಒಪ್ಪಿಸಿದ್ದರು. ಅದಾದ ಬಳಿಕ ನಿರ್ಣಾಯಕ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೆಯ 87 ರನ್ ಗಳಿಸಿ ತಂಡದ ಗೆಲುವನ್ನು ಸಾರಿದ್ದರು. ಈಗ ಇದೇ ಫಾರ್ಮ್‌ಅನ್ನು ಇಂಗ್ಲೆಂಡ್ ವಿರುದ್ಧವೂ ಮುಂದುವರಿಸಿದ್ದಾರೆ.

ಕೈಕೊಟ್ಟ ಬಿಗ್ ಸ್ಟಾರ್ಸ್
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಜಿಂಕ್ಯ ರಹಾನೆ ಕನಿಷ್ಟ ಮೊತ್ತಕ್ಕೆ ಔಟಾಗುವ ಮೂಲಕ ತಂಡಕ್ಕೆ ಆಘಾತವನ್ನು ನೀಡಿದರು. ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲ ಇಂಗ್ಲೆಂಡ್ 578 ರನ್‌ಗಳಿಸಿ ಆಲೌಟ್ ಆಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications