ಭಾರತ vs ಆಸ್ಟ್ರೇಲಿಯಾ: 'ಹಿಟ್ ಮ್ಯಾನ್' ರೋಹಿತ್ ಶರ್ಮಾ ಹೊಸ ದಾಖಲೆ

ಮೊಹಾಲಿ, ಮಾರ್ಚ್ 10: ಮೊಹಾಲಿಯಲ್ಲಿ ನಡೆಯುತ್ತಿರುವ ಭಾರತ vs ಆಸ್ಟ್ರೇಲಿಯಾ 4ನೇ ಏಕದಿನ ಪಂದ್ಯದಲ್ಲಿ ಭಾರತದ ಉಪನಾಯಕ ಮತ್ತು ಆರಂಭಿಕ ಆಟಗಾರ ರೋಹಿತ್ ಶರ್ಮಾ ಹೊಸ ದಾಖಲೆಯನ್ನು ಬರೆದಿದ್ದಾರೆ. ಏಕದಿನ ಅತ್ಯಧಿಕ ಸಿಕ್ಸ್ ಬಾರಿಸಿದ ಭಾರತದ ಮುಂಚೂಣಿ ಆಟಗಾರನಾಗಿ ರೋಹಿತ್ ಗುರುತಿಸಿಕೊಂಡರು.
ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 10) ನಡೆದ ಭಾರತ-ಆಸ್ಟ್ರೇಲಿಯಾ 4ನೇ ಏಕದಿನ ಪಂದ್ಯದಲ್ಲಿ ರೋಹಿತ್ 92 ಎಸೆತಗಳಿಗೆ 95 ರನ್ ಬಾರಿಸಿದರು. ಇದರಲ್ಲಿ 7 ಬಂಡರಿ ಮತ್ತು 2 ಸಿಕ್ಸ್ ಕೂಡ ಸೇರಿತ್ತು.
ಪಂದ್ಯದಲ್ಲಿ ರೋಹಿತ್ ಬಾರಿಸಿದ ಎರಡೇ ಸಿಕ್ಸ್‌ಗಳು ಭಾರತ ಪರ ಅತೀ ಹೆಚ್ಚು ಸಿಕ್ಸರ್ ದಾಖಲೆ ಹೊಂದಿದ್ದ ಎಂಎಸ್ ಧೋನಿಯನ್ನು ಮೀರಿಸಿದೆ. ಧೋನಿ 217 ಸಿಕ್ಸ್ ಬಾರಿಸಿದ್ದರೆ, ರೋಹಿತ್ 218 ಸಿಕ್ಸ್ ಮೂಲಕ ಏಕದಿನದಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಭಾರತ ಆಟಗಾರನಾಗಿ ಮೊದಲ ಸ್ಥಾನಕ್ಕೇರಿದ್ದಾರೆ.
ಮೊಹಾಲಿ ಪಂದ್ಯದಲ್ಲಿ ರೋಹಿತ್, ಆಸೀಸ್ ಬೌಲರ್ ಜೇಸನ್ ಬೆಹೆರೆನ್ಡಾಫ್ ಓವರ್‌ನಲ್ಲಿ 217 ಸಿಕ್ಸ್ ಮತ್ತು 24ನೇ ಓವರ್‌ನಲ್ಲಿ ಆದಂ ಜಂಪಾ ಎಸೆತಕ್ಕೆ 218ನೇ ಸಿಕ್ಸರ್ ಸಿಡಿಸಿದರು. ಇದೇ ಯಾದಿಯಲ್ಲಿ ಸಚಿನ್ ತೆಂಡೂಲ್ಕರ್ 195, ಸೌರವ್ ಗಂಗೂಲಿ 189, ಯುವರಾಜ್ ಸಿಂಗ್ 153 ಸಿಕ್ಸ್ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications