Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸ್ಟ್ರೇಲಿಯಾ: 22ನೇ ಏಕದಿನ ಶತಕ ಸಿಡಿಸಿದ ರೋಹಿತ್ ಶರ್ಮಾ

India vs Australia: Rohit Sharma slams 22nd ODI ton in Sydney

ಸಿಡ್ನಿ, ಜನವರಿ 12: ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿನ ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಉಪನಾಯಕ ರೋಹಿತ್ ಶರ್ಮಾ ಶತಕ (133 ರನ್) ಸಿಡಿಸಿದ್ದಾರೆ. ಇದು ರೋಹಿತ್ ಬಾರಿಸಿದ 22ನೇ ಏಕದಿನ ಶತಕ. ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡು ಭೀತಿಯಲ್ಲಿದ್ದ ಭಾರತ ಪರ ರೋಹಿತ್ ಏಕಾಂಗಿ ಹೋರಾಟ ನಡೆಸಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡ ಉಸ್ಮಾನ್ ಖವಾಜಾ (59 ರನ್), ಶಾನ್ ಮಾರ್ಷ್ (54), ಪೀಟರ್ ಹ್ಯಾಂಡ್ಸ್‌ಕಾಂಬ್ (73) ಅರ್ಧಶತಕದ ನೆರವಿನಿಂದ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದು 288 ರನ್ ಪೇರಿಸಿತ್ತು. ಆದರೆ ಚೇಸಿಂಗ್‌ಗೆ ಇಳಿದ ಭಾರತ ಆರಂಭಿಕ ಆಘಾತ ಅನುಭವಿಸಿತು.

ಶಿಖರ್ ಧವನ್ 0, ವಿರಾಟ್ ಕೊಹ್ಲಿ 3 ಮತ್ತು ಅಂಬಾಟಿ ರಾಯುಡು 0ಗೆ ವಿಕೆಟ್ ಒಪ್ಪಿಸಿದ್ದರಿಂದ ಟೀಮ್ ಇಂಡಿಯಾ ಒತ್ತಡಕ್ಕೆ ಸಿಲುಕಿತ್ತು. ಆಗ ಭಾರತ ಪರ ಹೋರಾಟ ನಡೆಸಿದ್ದು ರೋಹಿತ್ ಒಬ್ಬರೆ. ರೋಹಿತ್ ಭರ್ಜರಿ 133 ರನ್ ತಂಡಕ್ಕೆ ಸೇರಿಸಿದರು. ಅದು ಬಿಟ್ಟರೆ ಎಂಎಸ್ ಧೋನಿಯಿಂದ 51 ರನ್ ಕೊಡುಗೆ ಲಭಿಸಿತು.

22ನೇ ಶತಕದೊಂದಿಗೆ 31ರ ಹರೆಯದ ರೋಹಿತ್, ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಒಟ್ಟು 7,587 ರನ್ ದಾಖಲೆ ಹೊಂದಿದ್ದಾರೆ. 264 ರನ್ ಮೂಲಕ ಏಕದಿನ ಅತ್ಯಧಿಕ ರನ್ ದಾಖಲೆಯೂ ರೋಹಿತ್ ಹೆಸರಿನಲ್ಲಿದೆ. ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಶರ್ಮಾ ದ್ವಿತೀಯ ಸ್ಥಾನಿ.

Story first published: Saturday, January 12, 2019, 15:45 [IST]
Other articles published on Jan 12, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+