Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಹ್ಮದಾಬಾದ್ ಟೆಸ್ಟ್‌ನ ಪ್ರದರ್ಶನಕ್ಕೆ ಖಂಡಿತಾ ಆತನಿಗೆ ಹಮ್ಮೆಯಾಗಲಿದೆ: ಅಶ್ವಿನ್ ಆಟಕ್ಕೆ ತಲೆದೂಗಿದ ಮಂಜ್ರೇಕರ್

India vs Australia: Sanjay Manjrekar praises R Ashwin said he will be proud of his 5-wicket haul in Ahmedabad Test

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಆದರೆ ಬ್ಯಾಟಿಂಗ್‌ಗೆ ಸಹಕಾರಿಯಾಗುವಂಥಾ ಪಿಚ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದು ಟೀಮ್ ಇಂಡಿಯಾದ ಅನುಭವಿ ಬೌಲರ್ ಆರ್ ಅಶ್ವನ್. ಆಸ್ಟ್ರೇಲಿಯಾದ 6 ವಿಕೆಟ್ ಪಡೆದ ಅಶ್ವಿನ್ ಇಂಥಾ ಪಿಚ್‌ನಲ್ಲಿಯೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಈ ಪ್ರದರ್ಶನದ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯಿಸಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ. ಅಹ್ಮದಾಬಾದ್‌ನ ಬ್ಯಾಟಿಂಗ್‌ಗೆ ನೆರವು ನೀಡುವಂತಾ ಪಿಚ್‌ನಲ್ಲಿಯೂ ಅಶ್ವಿನ್ ಅವರ ಅದ್ಭುತ ಪ್ರದರ್ಶನಕ್ಕೆ ಅವರು ಖಂಡಿತವಾಗಿಯೂ ಹೆಮ್ಮೆ ಪಡಬೇಕು ಎಂದಿದ್ದಾರೆ ಸಂಜಯ್ ಮಂಜ್ರೇಕರ್. 47.2 ಓವರ್‌ಗಳ ಬೌಲಿಂಗ್ ಮಾಡಿದ ಅಶ್ವಿನ್ 15 ಮೇಡನ್ ಓವರ್ ಎಸೆದಿದ್ದು 32ನೇ ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದಾರೆ.

ಈ ಸರಣಿಯ ಮೊದಲ ಮೂರು ಪಂದ್ಯಗಳು ಸ್ಪಿನ್ನರ್‌ಗಳಿಗೆ ನೆರವು ನೀಡುವಂತಾ ಪಿಚ್‌ನಲ್ಲಿ ಆಡಿಸಲಾಗಿತ್ತು. ಆ ಮೂರು ಪಂದ್ಯಗಳಲ್ಲಿ ಅಶ್ವಿನ್ ಒಟ್ಟು 18 ವಿಕೆಟ್ ಸಂಪಾದಿಸಿದ್ದಾರೆ. ಆದರೆ ಅಹ್ಮದಾಬಾದ್ ಪಿಚ್ ಈ ಹಿಂದಿನ ಪಂದ್ಯಗಳನ್ನು ಆಡಿದ ನಾಗ್ಪುರ, ದೆಹಲಿ ಹಾಗೂ ಇಂದೋರ್‌ನಂತೆ ಮೊದಲ ದಿನದಿಂದಲೂ ಸ್ಪಿನ್ನರ್‌ಗಳಿಗೆ ನೆರವು ನೀಡುವಂತಾ ಪಿಚ್‌ನಲ್ಲಿ ಅಲ್ಲ. ಹಾಗಿದ್ದರೂ ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಸಂಪಾದಿಸಿದ್ದಾರೆ.

"ಎರಡನೇ ಸೆಶನ್‌ನಲ್ಲಿ ವಿಕೆಟ್‌ಗಳು ಉರುಳಿದ ರೀತಿ ಅನಿರೀಕ್ಷಿತವಾಗಿತ್ತು. ಅಲ್ಲಿ ನಾವು ಅಶ್ವಿನ್ ಅವರ ಕ್ಲಾಸ್ ಆಟವನ್ನು ನಾವು ಕಂಡೆವು. ಇದು ಹಿಂದಿನ ಪಂದ್ಯಗಳಲ್ಲಿ ಕಂಡಂತಾ ರೀತಿಯ ಪಿಚ್ ಅಲ್ಲ. ಅಲ್ಲಿ ಒಂದು ವಿಕೆಟ್ ಪಡೆದರೆ ಮೂರು ವಿಕೆಟ್‌ಗಳು ಉರುಳುತ್ತಿತ್ತು. ಆದರೆ ಇಂಥಾ ಪಿಚ್‌ನಲ್ಲಿಯೂ ಅಶ್ವಿನ್ ಅದನ್ನು ಸಾಧಿಸಿದ್ದಾರೆ" ಎಂದಿದ್ದಾರೆ ಸಂಜಯ್ ಮಂಜ್ರೇಕರ್.

"ಇಂಥಾ ಪಿಚ್‌ನಲ್ಲಿ ಅದು ಅಮೋಘ ಸಾಧನೆ. ಕ್ಯಾಮರೂನ್ ವಿಕೆಟ್ ಪಡೆದ ರೀತಿಯಲ್ಲಿ ಅವರು ಸ್ವಲ್ಪ ಅದೃಷ್ಟವನ್ನು ಕೂಡ ಹೊಂದಿದ್ದರು. ಯಾಕೆಂದರೆ ಬಳಿಕ ಅವರು ಇಬ್ಬರು ಬ್ಯಾಟರ್‌ಗಳನ್ನು ಔಟ್ ಮಾಡಿದರು. ಅವರು ಸಾಕಷ್ಟು ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಆದರೆ ಇಲ್ಲಿ ಪಡೆದಿರುವ ಐದು ವಿಕೆಟ್‌ಗಳ ಗೊಂಚಲು ನಿಜಕ್ಕೂ ಹೆಮ್ಮೆ ಮೂಡಿಸುತ್ತದೆ. ಇಲ್ಲಿ ಐದು ವಿಕೆಟ್ ಅಲ್ಲ ನಾಲ್ಕು ವಿಕೆಟ್ ಅವರು ಪಡೆದಿದ್ದರೂ ಅದು ಅತ್ಯುತ್ತಮ ಪ್ರದರ್ಶನೇ" ಎಂದಿದ್ದಾರೆ ಸಂಜಯ್ ಮಂಜ್ರೇಕರ್.

ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ
ಬೆಂಚ್: ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಇಶಾನ್ ಕಿಶನ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್

ಆಸ್ಟ್ರೇಲಿಯಾ ಆಡುವ ಬಳಗ: ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ಕನ್ನೇಮನ್, ಟಾಡ್ ಮರ್ಫಿ, ನಾಥನ್ ಲಿಯಾನ್
ಬೆಂಚ್: ಸ್ಕಾಟ್ ಬೋಲ್ಯಾಂಡ್, ಮ್ಯಾಟ್ ರೆನ್ಶಾ, ಮಿಚೆಲ್ ಸ್ವೆಪ್ಸನ್, ಲ್ಯಾನ್ಸ್ ಮೋರಿಸ್

Story first published: Friday, March 10, 2023, 18:39 [IST]
Other articles published on Mar 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+