ಶುಬ್ಮನ್ ಗಿಲ್ ಸ್ಫೋಟಕ ಆಟ: ಕೊಹ್ಲಿ, ಬಾಬರ್ ದಾಖಲೆ ಉಡೀಸ್
ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಈ ವರ್ಷ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಈ ಬಾರಿ ಅಂಗಳದಲ್ಲಿ ರನ್ ಚಿತ್ತಾರ ಬಿಡಿಸಿರುವ ಶುಬ್ಮನ್ ಗಿಲ್, ಅಬ್ಬರಿಸುತ್ತಾ ಬರುತ್ತಿದ್ದಾರೆ. ಯಾರೇ ಎದುರಾಳಿ ಇದ್ದರೂ ಕೆಚ್ಚದೆಯ ಬ್ಯಾಟಿಂಗ್ ಪ್ರದರ್ಶನ ಮಾಡಿ ರನ್ ಮಹಲ್ ಕಟ್ಟಿದ್ದಾರೆ. ಇದೇ ವರ್ಷ ಗಿಲ್ ಹಲವು ಬಾರಿ ದಾಖಲೆಯ ಪುಸ್ತಕಕ್ಕೆ ಕೆಲಸ ನೀಡಿದ್ದಾರೆ.
ಇಂದೋರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಶುಬ್ಮನ್ ಗಿಲ್ ಭರ್ಜರಿ ಶತಕ ಸಿಡಿಸುವ ಮೂಲಕ ಮತ್ತೊಂದು ದಾಖಲೆಗೆ ತಮ್ಮ ಹೆಸರು ನಮೂದಿಸಿದ್ದಾರೆ. ಗಿಲ್ ಈ ಬಾರಿ ಸಚಿನ್ ತೆಂಡೂಲ್ಕರ್, ಹಶೀಮ್ ಆಮ್ಲಾ, ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಅವರಂತಹ ದಿಗ್ಗಜರನ್ನು ಹಿಂದಿಕ್ಕಿ ವಿಶ್ವದಾಖಲೆ ಬರೆದಿದ್ದಾರೆ.

ಇಂದೋರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಶುಬ್ಮನ್ ಗಿಲ್ 97 ಎಸೆತಗಳಲ್ಲಿ 104 ರನ್ ಗಳಿಸಿದರು. ಈ ವೇಳೆ ಅವರ ಬ್ಯಾಟ್‌ನಿಂದ 6 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಬಂದವು. ಇದು ಏಕದಿನದಲ್ಲಿ ಗಿಲ್ ಅವರ ಆರನೇ ಶತಕವಾಗಿದೆ. ಆಸ್ಟ್ರೇಲಿಯ ವಿರುದ್ಧ ಚೊಚ್ಚಲ ಬಾರಿ ಶತಕ ಸಿಡಿಸಿದ್ದಾರೆ.
ಗಿಲ್ ಏಕದಿನ ಪಂದ್ಯದ 35 ಇನ್ನಿಂಗ್ಸ್ ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್
ಎನಿಸಿಕೊಂಡಿದ್ದಾರೆ. ODI ಕ್ರಿಕೆಟ್ ಇತಿಹಾಸದಲ್ಲಿ, ಶುಬ್ಮನ್ ಗಿಲ್ 35 ಇನ್ನಿಂಗ್ಸ್ ಗಳಲ್ಲಿ 1,900 ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ದಾಖಲೆಯ ಪಟ್ಟಿಯಲ್ಲಿ ಅವರು ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ, ಪಾಕಿಸ್ತಾನದ ಬಾಬರ್ ಅಜಮ್, ಫಖರ್ ಜಮಾನ್ ಮತ್ತು ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.
ಶುಭಮನ್ ಗಿಲ್ ಈ ವರ್ಷ ಐದನೇ ಶತಕ
ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಸಿಡಿಸಿದ ಶತಕ ಗಿಲ್ ವೃತ್ತಿ ಜೀವನದ ಐದನೇ ಶತಕವಾಗಿದೆ. ಅವರು ಕ್ಯಾಲೆಂಡರ್ ವರ್ಷದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿದ ಏಳನೇ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ.
ಇದಕ್ಕೂ ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ಶಿಖರ್ ಧವನ್ ಈ ಸಾಧನೆ ಮಾಡಿದ್ದಾರೆ. ಕೊಹ್ಲಿ ನಾಲ್ಕು ಬಾರಿ ಹಾಗೂ ರೋಹಿತ್ ಮೂರು ಬಾರಿ ಈ ಸಾಧನೆ ಮಾಡಿದ್ದಾರೆ. ಆದರೆ ಸಚಿನ್ ತೆಂಡೂಲ್ಕರ್ ಇದನ್ನು ಎರಡು ಬಾರಿ ಮಾತ್ರ ಮಾಡಲು ಸಾಧ್ಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications