Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸೀಸ್: ವೈಟ್ ಬಾಲ್ ಫಿನಿಶರ್ಸ್‌ನತ್ತ ಆಯ್ಕೆದಾರರ ಕಣ್ಣು

India vs Australia: Selectors looking for white-ball finishers

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ಅಲ್ಲಿ ಲಿಮಿಟೆಡ್ ಓವರ್‌ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಲಿದೆ. ಈ ಪ್ರವಾಸ ಸರಣಿಗೆ ಸಂಬಂಧಿಸಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಆಯ್ಕೆ ಸಮಿತಿ ವೈಟ್ ಬಾಲ್ ಕ್ರಿಕೆಟ್ ಫಿನಿಶರ್‌ಗಳತ್ತ ಚಿತ್ತ ನೆಟ್ಟಿದೆ ಎಂದು ಹೇಳಲಾಗುತ್ತಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈಗಾಗಲೇ ಟೀಮ್ ಇಂಡಿಯಾದಲ್ಲಿರುವ ಆಟಗಾರರಿದ್ದಾರೆ. ಜೊತೆಗೆ ಹೊಸ ಮುಖಗಳೂ ಬಹಳಷ್ಟು ಮಂದಿಯಿದ್ದಾರೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವವರತ್ತ ಸಹಜವಾಗೇ ಆಯ್ಕೆದಾರರ ಗಮನ ಹರಿಯುವ ಸಾಧ್ಯತೆಯಿದೆ.

ಬಿಸಿಸಿಐಗೆ ಹತ್ತಿರವಿರುವ ಮೂಲವೊಂದರ ಪ್ರಕಾರ ಮುಂಬೈ ಇಂಡಿಯನ್ಸ್‌ನಲ್ಲಿ ಆಡುತ್ತಿರುವ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ-ಭಾರತ ಪ್ರವಾಸ ಸರಣಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ. ಅಂದರೆ ಟೀಮ್ ಇಂಡಿಯಾಕ್ಕೆ ಮೊದಲ ಕರೆ ಯಾದವ್‌ಗೆ ಲಭಿಸಲೂಬಹುದು.

ಇನ್ನು ಸನ್ ರೈಸರ್ಸ್ ಹೈದರಾಬಾದ್‌ನಲ್ಲಿರುವ ಕನ್ನಡಿಗ ಮನೀಶ್ ಪಾಂಡೆಗೂ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಿದೆ. ರಾಜಸ್ಥಾನ್ ರಾಯಲ್ಸ್‌ನಲ್ಲಿರುವ ಸಂಜು ಸ್ಯಾಮ್ಸನ್‌ಗೂ ಅವಕಾಶದ ಬಾಗಿಲು ತೆರೆದಿದೆ. ಆದರೆ ಈ ಎಲ್ಲಾ ಆಟಗಾರರು ಮುಂದಿನ ಪಂದ್ಯಗಳಲ್ಲಿ ಹೇಗೆ ಆಡುತ್ತಾರೆ ಅನ್ನೋದು ಈ ಅವಕಾಶವನ್ನು ಅವಲಂಭಿಸಿದೆ.

Story first published: Sunday, October 25, 2020, 0:24 [IST]
Other articles published on Oct 25, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+