ಭಾರತ ವಿರುದ್ಧದ 1ನೇ ಟೆಸ್ಟ್‌ಗೆ 'ಆಸ್ಟ್ರೇಲಿಯಾ XI' ಪ್ರಕಟಿಸಿದ ಶೇನ್ ವಾರ್ನ್

ಸಿಡ್ನಿ: ಡಿಸೆಂಬರ್ 17ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕುತೂಹಲಕಾರಿ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ನಾಲ್ಕು ಪಂದ್ಯಗಳ ಈ ಟೆಸ್ಟ್ ಸರಣಿ ಜಿದ್ದಾಜಿದ್ದಿಯೆನಿಸಲಿದೆ. ಕಳೆದ ವರ್ಷ ವಿರಾಟ್ ಕೊಹ್ಲಿ ಪಡೆ ಈ ಟೆಸ್ಟ್ ಸರಣಿ ಗೆದ್ದು ಬೀಗಿತ್ತು. ಆದರೆ ಈ ವರ್ಷ ಸರಣಿ ಗೆಲುವು ಸವಾಲೆನಿಸಲಿದೆ.
ಆರಂಭಿಕ ಟೆಸ್ಟ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳಲ್ಲಿ ಪ್ರಮುಖ ಆಟಗಾರರು ಆಡುತ್ತಿಲ್ಲ. ಆಸ್ಟ್ರೇಲಿಯಾದಿಂದ ಡೇವಿಡ್ ವಾರ್ನರ್ ಗಾಯಗೊಂಡಿದ್ದು, ಮೊದಲ ಟೆಸ್ಟ್‌ನಲ್ಲಿ ಆಡುತ್ತಿಲ್ಲ. ಇತ್ತ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಮೈದಾನಕ್ಕಿಳಿಯುತ್ತಿಲ್ಲ. ಮೂರನೇ ಟೆಸ್ಟ್‌ನಲ್ಲಿ ಇಬ್ಬರೂ ಆಡುವ ನಿರೀಕ್ಷೆಯಿದೆ.
ಇತ್ತಂಡಗಳ ಕುತೂಹಲಕಾರಿ ಸರಣಿ ಆರಂಭಗೊಳ್ಳುವುದಕ್ಕೂ ಮುನ್ನ ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ್ನ್ ತನ್ನ ನೆಚ್ಚಿನ ತಂಡ ಪ್ರಕಟಿಸಿದ್ದಾರೆ. ಅಂದ್ಹಾಗೆ ಈ ತಂಡ ಭಾರತ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯಕ್ಕಾಗಿ. ವಾರ್ನ್ ಪ್ರಕಟಿಸಿರುವ ತಂಡ ಬಲಿಷ್ಠವಾಗಿದೆ. ಇಲ್ಲೂ ಎಂದಿನ ನಾಯಕ ಟಿಮ್ ಪೈನ್ ತಂಡದ ನಾಯಕರಾಗಿದ್ದು, ಪ್ಯಾಟ್ ಕಮಿನ್ಸ್ ಉಪನಾಯಕರಾಗಿದ್ದಾರೆ.
ವಾರ್ನ್ ನೆಚ್ಚಿನ ಆಸ್ಟ್ರೇಲಿಯಾ XI: ಟಿಮ್ ಪೈನ್ (ಸಿ/ವಿಕೆ), ಜೋ ಬರ್ನ್ಸ್, ಪ್ಯಾಟ್ ಕಮ್ಮಿನ್ಸ್ (ವಿಸಿ), ಮ್ಯಾಥ್ಯೂ ವೇಡ್/ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಝಲ್ವುಡ್, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಸ್ಚಾಗ್ನೆ, ನಾಥನ್ ಲಿಯಾನ್, ವಿಲ್ ಪುಕೊವ್ಸ್ಕಿ/ಮಾರ್ಕಸ್ ಹ್ಯಾರಿಸ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications