Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸ್ಟ್ರೇಲಿಯಾ: ರೋಹಿತ್ ಬದಲು ಶ್ರೇಯಸ್‌ಗೆ ಟೆಸ್ಟ್‌ನಲ್ಲಿ ಸ್ಥಾನ?!

India vs Australia: Shreyas Iyer may be reserve batsman for Tests

ಸಿಡ್ನಿ: ಕುತೂಹಲಕಾರಿ ಭಾರತ vs ಆಸ್ಟ್ರೇಲಿಯಾ ಸರಣಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಹಿನ್ನಡೆಯ ಸಂಗತಿಯೊಂದು ಕೇಳಿ ಬಂದಿದೆ. ಭಾರತ ಟೆಸ್ಟ್ ತಂಡದಲ್ಲಿ ಹೆಸರಿಸಲ್ಪಟ್ಟಿದ್ದ ರೋಹಿತ್ ಶರ್ಮಾ ಮತ್ತು ಇಶಾಂತ್ ಶರ್ಮಾ ಆಡುವ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಿದೆ. ಹೀಗಾಗಿ ಬದಲಿ ಆಟಗಾರರಿಗಾಗಿ ಹುಡುಕಾಟ ಶುರುವಾಗಿದೆ.

ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಗಾಯದ ಸಮಸ್ಯೆಯಲ್ಲಿದ್ದಾರೆ. ಇತ್ತ ಇಶಾಂತ್ ಶರ್ಮಾ ಕೂಡ ಗಾಯಗೊಂಡು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ರೋಹಿತ್, ಇಶಾಂತ್ ಇಬ್ಬರೂ ಟೆಸ್ಟ್ ಸರಣಿಗೆ ಬೇಕಾದಷ್ಟು ಫಿಟ್‌ ಆಗಿ ಇಲ್ಲ ಎಂದು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿರುವ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಒಂದು ವೇಳೆ ರೋಹಿತ್ ಮತ್ತು ಇಶಾಂತ್ ಇಬ್ಬರೂ ಟೆಸ್ಟ್ ಸರಣಿಯಲ್ಲಿ ಭಾಗವಹಿಸದಿದ್ದರೆ ಟೀಮ್ ಇಂಡಿಯಾ ಇನ್ನಷ್ಟು ದುರ್ಬಲಗೊಳ್ಳುತ್ತದೆ. ಯಾಕೆಂದರೆ ನಾಯಕ ವಿರಾಟ್ ಕೊಹ್ಲಿ ಕೂಡ ಪಿಂಕ್‌ ಬಾಲ್ ಟೆಸ್ಟ್ ಒಂದರಲ್ಲಿ ಆಡಿ ಇನ್ನುಳಿದ 3 ಟೆಸ್ಟ್‌ಗಳಿಂದ ವಿಶ್ರಾಂತಿ ಪಡೆಯಲಿದ್ದಾರೆ. ಹೀಗಾಗಿ ಮುಖ್ಯವಾಗಿ ಬ್ಯಾಟ್ಸ್‌ಮನ್‌ಗಾಗಿ ಎದುರು ನೋಡುತ್ತಿರುವ ತಂಡ ನಿರ್ವಹಣಾ ಸಮಿತಿ ಶ್ರೇಯಸ್ ಐಯ್ಯರ್ ಅವರತ್ತ ಚಿತ್ತ ನೆಟ್ಟಿದೆ.

ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ಟಿ20ಐ ತಂಡದಲ್ಲಿ ಶ್ರೇಯಸ್ ಹೆಸರಿಸಲ್ಪಟ್ಟಿದ್ದಾರೆ. ಆದರೆ ಟೆಸ್ಟ್ ತಂಡದಲ್ಲಿ ಶ್ರೇಯಸ್ ಇಲ್ಲ. ತಂಡ ನಿರ್ವಹಣಾ ಸಮಿತಿ ಈಗ ರೋಹಿತ್ ಬದಲಿಗೆ ಶ್ರೇಯಸ್ ಅವರನ್ನು ಟೆಸ್ಟ್ ತಂಡಕ್ಕೆ ಮೀಸಲು ಆಟಗಾರರಾಗಿ ಸೇರಿಸಿಕೊಳ್ಳುವತ್ತ ಯೋಚಿಸುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಬಿಸಿಸಿಐ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

Story first published: Tuesday, November 24, 2020, 13:37 [IST]
Other articles published on Nov 24, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+