Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂದೋರ್ ರೀತಿಯ ಪಿಚ್ ಒಳ್ಳೆಯದಲ್ಲ ಎಂದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್

India vs Australia: Sunil Gavaskar criticize Indore pitch said Don’t think it’s a great idea to have pitch like this

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಇಂದೋರ್‌ನಲ್ಲಿ ಅಂತ್ಯವಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿನೊಂದಿಗೆ ಮುಕ್ತಾಯವಾಗಿದ್ದು ಆಸ್ಟ್ರೇಲಿಯಾ ತಮಡ ಸರಣಿಯಲ್ಲಿ ಮೊದಲ ಗೆಲುವು ಸಾಧಿಸಿದೆ. ಈ ಪಂದ್ಯದ ಬಳಿಕ ಇಂದೋರ್ ಪಿಚ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಈ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದು ಇಂಓರ್ ರೀತಿಯ ಪಿಚ್ ಒಳ್ಳೆಯದಲ್ಲ ಎಂದಿದ್ದಾರೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಇಂದೋರ್‌ ಟೆಸ್ಟ್‌ಗೆ ಇದೇ ರೀತಿಯ ಪಿಚ್ಚನ್ನು ಬಯಸಿದ್ದೆವು ಎಂದಿದ್ದರು. ಈ ಬಗ್ಗೆ ಸುನಿಲ್ ಗವಾಸ್ಕರ್ ಮಾತನಾಡಿದ್ದು ನಾಯಕನ ಮಾತಿಗೆ ಅಸಮ್ಮತಿ ವ್ಯಕ್ತೊಡಿಸಿದ್ದಾರೆ. ಇಂದೋರ್ ರೀತಿಯ ಪಿಚ್ಹೊಂದುವುದು ಉತ್ತಮ ಎಂದು ನನಗೆ ಅನಿಸುತ್ತಿಲ್ಲ. ಬ್ಯಾಟ್ ಹಾಗೂ ಬಾಲ್‌ಗೆ ಉತ್ತಮವಾದ ಹೊಂದಾಣಿಕೆಯಿರುವ ಪಿಚ್‌ಗಳ ಅಗತ್ಯವಿದೆ ಎಂದಿದ್ದಾರೆ ಸುನಿಲ್ ಗವಾಸ್ಕರ್.

"ಈ ಬಗ್ಗೆ ಬೇರೆ ಬೇರೆ ರೀತಿಯ ಅಭಿಪ್ರಾಯಗಳು ಇರುತ್ತವೆ. ಈ ರೀತಿಯ ಪಿಚ್ ಹಿಂದೆಯೂ ಭಾರತಕ್ಕೆ ತಿರುಗೇಟು ನೀಡಿದ್ದು 2012-13ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಗ್ರೇಮ್ ಸ್ವಾನ್ ಹಾಗು ಮಾಂಟಿ ಪನೆಸರ್ ಇಂಗ್ಲೆಂಡ್‌ಗೆ ಗೆಲುವು ತಂದುಕೊಟ್ಟಿದ್ದರು. ನನ್ನ ಪ್ರಕಾರ ಈ ಗುಣಮಟ್ಟದ ಪಿಚ್ ಹೊಂದುವುದು ಉತ್ತಮ ನಿರ್ಧಾರ ಎಂದು ಅನಿಸುತ್ತಿಲ್ಲ" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಇನ್ನು ಇಂದೋರ್ ಪಿಚ್‌ಗೆ ಐಸಿಸಿ ಕಳಪೆ ಎಂದು ರೇಟಿಂಗ್ ನೀಡುವ ಮೂಲಕ ಬಿಸಿಸಿಐಗೆ ಭಾರೀ ಮುಖಭಂಗವಾಗಿದೆ. ಅಲ್ಲದೆ 3 ಡಿಮೆರಿಟ್ ಅಂಕಗಳನ್ನು ಕೂಡ ಐಸಿಸಿ ನೀಡಿದ್ದು ದೊಡ್ಡ ಹಿನ್ನಡೆಯಾಗಿದೆ. ಇಂದೋರ್ ಟೆಸ್ಟ್ ಪಂದ್ಯ ಮ್ಯಾಚ್ ರೆಫ್ರೀ ಕ್ರಿಸ್ ಬ್ರಾಡ್ ಪಿಚ್ ಪರಿಶೀಲಿಸಿ ವರದಿ ನೀಡಿದ್ದು ಈ ಪಿಚ್ ಬ್ಯಾಟ್ ಹಾಗೂ ಬಾಲ್ ಮಧ್ಯೆ ಸಮವಾಗಿ ಹೊಂದಾಣಿಕೆಯಾಗಿಲ್ಲ ಎಂದಿದ್ದಾರೆ. "ಪಿಚ್ ಬಹಳ ಒಣಗಿದೆ. ಆರಂಭದಿಂದಲೂ ಇದು ಬ್ಯಾಟ್ ಹಾಗೂ ಬಾಲ್ ಮಧ್ಯೆ ಹೊಂದಾಣಿಕೆ ಇರುವಂತೆ ಇರಲಿಲ್ಲ" ಎಂದಿದ್ದಾರೆ.

ಐಸಿಸಿಯ ಪಿಚ್ ಹಾಗೂ ಔಟ್‌ಫೀಲ್ಡ್ ಮಾನಿಟರಿಂಗ್ ಪ್ರಾಸೆಸ್ ಪ್ರಕಾರ ಒಂದು ತಾಣ ಐದು ವರ್ಷಗಳ ಅವಧಿಯಲ್ಲಿ 5 ಡಿಮೆರಿಟ್ ಅಂಕಗಳನ್ನು ಪಡೆದರೆ 12 ತಿಂಗಳ ಕಾಲ ಆ ಕ್ರೀಡಾಂಗಣವನ್ನು ಒಂದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸದಂತೆ ಅಮಾನತುಗೊಳಿಸಲಾಗುತ್ತದೆ.

Story first published: Friday, March 3, 2023, 23:36 [IST]
Other articles published on Mar 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+