Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಎಲ್ ರಾಹುಲ್‌ಗೆ ಮತ್ತೊಂದು ಅವಕಾಶ ದೊರೆಯುವ ಸಾಧ್ಯತೆಯಿದೆ: ಸುನಿಲ್ ಗವಾಸ್ಕರ್

India vs Australia: Sunil Gavaskar said KL Rahul will get another opportunity will play in 2nd test

ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಉಪನಾಯಕನಾಗಿರುವ ಕೆಎಲ್ ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಹೀಗಾಗಿ ಕೆಎಲ್ ರಾಹುಲ್‌ಗೆ ಅವಕಾಶ ನೀಡಿದ್ದು ಸಾಕು ಎಂಬ ಅಭಿಪ್ರಾಯಗಳು ಜೋರಾಗುತ್ತಿದೆ. ರಾಹುಲ್‌ಗೆ ಬದಲಿಗೆ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಆಟಗಾರರಿಗೆ ಅವಕಾಶ ನೀಡುವುದು ಸೂಕ್ತ ಎಂಬ ಅಬಿಪ್ರಾಯಗಳು ಜೋರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದು ರಾಹುಲ್‌ಗೆ ದೆಹಲಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಅವಕಾಶ ದೊರೆಯುವ ಸಾಧ್ಯತೆಯಿದೆ ಎಂದಿದ್ದಾರೆ.

ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇನ್ನಿಂಗ್ಸ್ ಹಾಗೂ 132 ರನ್‌ಗಳ ಅಂತರದ ಬೃಹತ್ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಸಾಧಿಸಿದ ಭರ್ಜರಿ ಗೆಲುವಿನ ಹೊರತಾಗಿಯೂ ಕೆಲ ವಿಭಾಗಗಳಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಬೇಕಿದ್ದು ಇದರಲ್ಲಿ ಅಗ್ರಕಮಾಂಕದ ಬ್ಯಾಟಿಂಗ್ ವಿಭಾಗ ಕೂಡ ಸೇರಿದೆ. ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ 120 ರನ್‌ಗಳನ್ನು ಸಿಡಿಸಿ ಭರ್ಜರಿ ಶತಕ ಸಿಡಿಸಿದರು ಕೂಡ ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸಿದ್ದಾರೆ.

ಸತತವಾಗಿ ಕೆಎಲ್ ರಾಹುಲ್ ಕಳಪೆ ಪ್ರದರ್ಶನ ನೀಡುತ್ತಿರುವ ಕಾರಣ ಕೆಎಲ್ ರಾಹುಲ್ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಮೊದಲ ಪಂದ್ಯದಲ್ಲಿ ರಾಹುಲ್ 71 ಎಸೆತಗಳಲ್ಲಿ 20 ರನ್‌ಗಳಿಸಿದಾಗಲೂ ರಾಹುಲ್ ಬ್ಯಾಟ್ ಸರಾಗವಾಗಿರಲಿಲ್ಲ. 2021-22ರಲ್ಲಿ ಭಾರತ ತಂಡ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾಗ ಉತ್ತಮ ಲಯದಲ್ಲಿದ್ದರು. ಆದರೆ ಕಳೆದ 8 ಇನ್ನಿಂಗ್ಸ್‌ಗಳಲ್ಲಿ ರಾಹುಲ್ ಅವರಿಂದ ಒಂದು ಬಾರಿಯೂ 30 ರನ್‌ಗಳ ಗಡಿ ದಾಟಲು ಸಾಧ್ಯವಾಗಿಲ್ಲ.

"ಶುಬ್ಮನ್ ಗಿಲ್ ಅವರಂತಾ ಆಟಗಾರ ಕಾದು ನಿಂತಿರುವಾಗ ಭಾರತ ತಂಡಕ್ಕೂ ಇಂಥಾ ಸಂದರ್ಭದಲ್ಲಿ ನಿರ್ಧಾಗಳನ್ನು ತೆಗೆದುಕೊಳ್ಳುವುದು ಬಹಳ ಕಷ್ಟವಾಗಲಿದೆ. ಆದರೆ ಅಕ್ಷರ್ ಪಟೇಲ್ ಅವರಿಂದ ನಾವು ಅದ್ಭುತ ಆಟವನ್ನು ನೋಡಿದ್ದೇವೆ. ಇದು ಭಾರತದ ಬೆಂಚ್ ಸ್ಟ್ರೆಂತ್ ಬಲಿಷ್ಠವಾಗಿದ್ದು ಸಿಕ್ಕ ಅವಕಾಶದಲ್ಲಿ ಮಿಂಚಲು ಹಾತೊರೆಯುತ್ತಿದೆ ಎಂಬುದನ್ನು ತೋರಿಸುತ್ತದೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.

"ನನ್ನ ಪ್ರಕಾರ ರಾಹುಲ್ ದೆಹಲಿಯಲ್ಲಿ ನಡೆಯುವ ಪಂದ್ಯದಲ್ಲಿ ಮತ್ತೊಂದು ಅವಕಾಶ ಪಡೆದುಕೊಳ್ಳಳಿದ್ದಾರೆ. ಅದಾದ ಬಳಿಕ ಆತನ ಸ್ಥಾನದ ಬಗ್ಗೆ ಚಿಂತನೆ ನಡೆಸಬಹುದು. ತಂಡದ ಪ್ರಮುಖ ಭಾಗವಾಗಿರುವ ಆಟಗಾರನಿಗೆ ಮತ್ತೊಂದು ಅವಕಾಶ ನಿಡುವುದು ನ್ಯಾಯಯುತವಾಗಿದೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಇನ್ನು ಇದಕ್ಕೂ ಮುನ್ನ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಮಾತನಾಡಿ ಟೀಮ್ ಇಂಡಿಯಾದ ಉಪನಾಯಕನಿಗೆ ಬೆಂಬಲ ಸೂಚಿಸಿದ್ದರು. ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಡುವ ಯಾವ ಯೀಚನೆ ಕೂಡ ಮ್ಯಾನೇಜ್‌ಮೆಂಟ್ ಮುಂದೆ ಇಲ್ಲ ಎಂದಿದ್ದರು ವಿಕ್ರಂ ರಾಥೋರ್

Story first published: Sunday, February 12, 2023, 15:23 [IST]
Other articles published on Feb 12, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+