Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ಸರಣಿ: ಭಾರತದ ವಿರುದ್ಧ ಸಾರ್ವಕಾಲಿಕ ಶ್ರೇಷ್ಠ ದಾಖಲೆ ಮೇಲೆ ಮ್ಯಾಕ್ಸ್‌ವೆಲ್ ಕಣ್ಣು

ವಿಶ್ವಕಪ್ ಟೂರ್ನಿಯ ಬೆನ್ನಲ್ಲೇ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲು ಸಜ್ಜಾಗಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಸಂಪೂರ್ಣ ಯುವ ತಂಡದೊಂದಿಗೆ ಭಾರತ ಈ ಸರಣಿಯಲ್ಲಿ ಭಾಗಿಯಾಗಿದ್ದರೆ ಆಸ್ಟ್ರೇಲಿಯಾ ತಂಡವನ್ನು ಮ್ಯಾಥ್ಯೂ ವೇಡ್ ಮುನ್ನಡೆಸುತ್ತಿದೆ. ಈ ಸರಣಿಯಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತದ ವಿರುದ್ಧ ಚುಟುಕು ಮಾದರಿಯಲ್ಲಿ ಶ್ರೇಷ್ಠ ದಾಕಳೆ ಬರೆಯುವ ಅತ್ಯುತ್ತಮ ಅವಕಾಶವೊಂದನ್ನು ಹೊಂದಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಭಾರತದ ವಿರುದ್ಧ ಟಿ20 ಸರಣಿಯಲ್ಲಿ ಸಾರ್ವಕಾಲಿಕ ಗರಿಷ್ಠ ರನ್ ಗಳಿಸುವ ಅವಕಾಶವಿದೆ. ಪ್ರಸ್ತುತ ಈ ಪಟ್ಟಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ನಾಲ್ಕನೇ ಸ್ಥಾನದಲ್ಲಿದ್ದು ಹಾರ್ಡ್-ಹಿಟ್ಟಿಂಗ್ ಬ್ಯಾಟರ್ ದಾಖಲೆಯನ್ನು ಬರೆಯಲು 154 ರನ್‌ಗಳ ಅಗತ್ಯವಿದೆ. ಗುರುವಾರ ನವೆಂಬರ್ 21 ರಿಂದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಇದನ್ನು ಸಾಧಿಸುವ ಅವಕಾಶ ಮ್ಯಾಕ್ಸ್‌ವೆಲ್‌ಗೆ ಇದೆ.

India vs Australia t20 series: Glenn Maxwell eye on all-time record against India in T20I series

ಭಾರತದ ವಿರುದ್ಧ ಮ್ಯಾಕ್ಸ್‌ವೆಲ್ 19 ಟಿ20I ಪಂದ್ಯಗಳನ್ನು ಆಡಿದ್ದು 27.37 ಸರಾಸರಿಯಲ್ಲಿ 141.74 ಸ್ಟ್ರೈಕ್-ರೇಟ್‌ನೊಂದಿಗೆ 438 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕಗಳು ಒಳಗೊಂಡಿದೆ. ಪ್ರಸ್ತುತ ಭಾರತದ ವಿರುದ್ಧ ಟಿ20 ಮಾದರಿಯಲ್ಲಿ ನಿಕೋಲಸ್ ಪೂರನ್ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಂಡಿದ್ದು 20 ಪಂದ್ಯಗಳಿಂದ 32.88 ಸರಾಸರಿ ಮತ್ತು 135.15 ಸ್ಟ್ರೈಕ್ ರೇಟ್‌ನೊಂದಿಗೆ 592 ರನ್ ಗಳಿಸಿದ್ದಾರೆ.

ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡದ ಪರವಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಟೂರ್ನಿಯುದ್ದಕ್ಕೂ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಈ ವಿಶ್ವಕಪ್‌ನಲ್ಲಿ ಮ್ಯಾಕ್ಸ್‌ವೆಲ್ ಏಕದಿನದಲ್ಲಿ ರನ್ ಚೇಸ್‌ನಲ್ಲಿ ದ್ವಿಶತಕ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಹಶ್ಮತುಲ್ಲಾ ಶಾಹಿದಿ ನೇತೃತ್ವದ ಅಫ್ಘಾನಿಸ್ತಾನ ವಿರುದ್ಧ ಅವರು ಅಜೇಯ 201 ರನ್ ಗಳಿಸಿದರು. 7 ವಿಕೆಟ್‌ಗೆ 97 ರನ್‌ಗೆ ಕುಸಿದ ನಂತರ ಆಸೀಸ್ ಚೇತರಿಸಿಕೊಳ್ಳುವಂತೆ ಮಾಡಿದ್ದಲ್ಲದೆ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿದ್ದರು.

ಇನ್ನು ಮ್ಯಾಕ್ಸ್‌ವೆಲ್ ಏಕದಿನ ವಿಶ್ವಕಪ್‌ನ ಇತಿಹಾಸದಲ್ಲಿ ಅತ್ಯಂತ ವೇಗದ ಶತಕದ ದಾಖಲೆಯನ್ನು ಕೂಡ ಹೊಂದಿದ್ದಾರೆ. ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಸ್ಕಾಟ್ ಎಡ್ವರ್ಡ್ಸ್ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ 40 ಎಸೆತಗಳಲ್ಲಿ ಶತಕ ಸಿಡಿಸಿ ಈ ದಾಖಲೆ ಬರೆದರು. ವಿಶ್ವಕಪ್‌ನಲ್ಲಿ ಒಂಬತ್ತು ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ 66.66 ಸರಾಸರಿ ಮತ್ತು 150.37 ಸ್ಟ್ರೈಕ್ ರೇಟ್‌ನಲ್ಲಿ 400 ರನ್ ಗಳಿಸಿದ್ದಾರೆ.

Story first published: Tuesday, November 21, 2023, 18:25 [IST]
Other articles published on Nov 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+