For Quick Alerts
ALLOW NOTIFICATIONS  
For Daily Alerts
 

ಭಾರತ, ಆಸ್ಟ್ರೇಲಿಯಾ ಆಟಗಾರರ ಐಸಿಸಿ ಶ್ರೇಯಾಂಕ ಹೇಗಿದೆ?

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಬುಧವಾರದಿಂದ ಟಿ20 ಸರಣಿಗಳು ಆರಂಭವಾಗುತ್ತವೆ. ಈ ವೇಳೆ ಎಲ್ಲರ ಕಣ್ಣುಗಳು ಉಭಯ ತಂಡಗಳ ಸ್ಟಾರ್ ಆಟಗಾರರ ಮೇಲೆ ನೆಟ್ಟಿದೆ. ಉಭಯ ತಂಡಗಳಲ್ಲೂ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಆಟಗಾರರು ಇದ್ದಾರೆ. ಹೀಗಾಗಿ ಬಲಿಷ್ಠ ತಂಡಗಳ ಕಾದಾಟ ರೋಚಕತೆ ಹೆಚ್ಚಿಸಿದೆ. ಇದೇ ವೇಳೆ ಐಸಿಸಿ ಶ್ರೇಯಾಂಕದಲ್ಲಿ ತಂಡಗಳು ಯಾವ ಸ್ಥಾನದಲ್ಲಿವೆ? ಟಾಪ್‌ 10ರಲ್ಲಿರುವ ಬ್ಯಾಟರ್, ಬೌಲರ್ಸ್‌ ಯಾರು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತ ಐಸಿಸಿ ಟಿ20 ತಂಡಗಳ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿದೆ. ಈ ವೇಳೆ ಭಾರತ ಒಟ್ಟು 272 ರೇಟಿಂಗ್‌ ಪಾಯಿಂಟ್‌ ಕಲೆ ಹಾಕಿದೆ. ಇನ್ನು ಆಸ್ಟ್ರೇಲಿಯಾ ಸಹ 268 ಅಂಕಗಳನ್ನು ಕಲೆ ಹಾಕಿದ್ದು, ಎರಡನೇ ಸ್ಥಾನದಲ್ಲಿದೆ. ಎರಡು ಶ್ರೇಷ್ಠ ತಂಡಗಳ ನಡುವಿನ ಕಾದಾಟ ಎಲ್ಲರ ಚಿತ್ತ ಕದ್ದಿದೆ.

India vs Australia T20 Series Star Players ICC Ranking and Team Positions

ಅಭಿಷೇಕ್‌ ನಂಬರ್ 1 ಬ್ಯಾಟರ್‌

ಟಿ20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಅಭಿಷೇಕ್‌ ಶರ್ಮಾ ಅಗ್ರ ಸ್ಥಾನದಲ್ಲಿದ್ದಾರೆ. ಇವರು 926 ಅಂಕಗಳನ್ನು ಕಲೆ ಹಾಕಿದ್ದು, ಅಗ್ರ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಇವರಿಗೆ ಹಾಗೂ ಎರಡನೇ ಸ್ಥಾನದಲ್ಲಿರುವ ಫಿಲ್‌ ಸಾಲ್ಟ್‌ ಅವರಿಗೆ 69 ಅಂಕಗಳ ವ್ಯತ್ಯಾಸ ಇದೆ. ಹೀಗಾಗಿ ಇವರ ಆಟದ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ. ಇನ್ನು ಭಾರತ ತಂಡದ ಮಧ್ಯಮ ಕ್ರಮಾಂಕದ ಆಟಗಾರ ತಿಲಕ್‌ ವರ್ಮಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಬ್ಯಾಟರ್‌ಗಳ ಟಾಪ್‌ 5 ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಯಾವೊಬ್ಬ ಬ್ಯಾಟರ್‌ ಇಲ್ಲ.

ಆಸ್ಟ್ರೇಲಿಯಾ ತಂಡದ ಪರ ಶ್ರೇಷ್ಠ ರ್ಯಾಂಕಿಂಗ್‌ ಹೊಂದಿರುವ ಬ್ಯಾಟರ್‌ ಎಂದರೆ ಟ್ರಾವಿಸ್ ಹೆಡ್‌. ಇವರು 743 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ನಾಯಕ ಮಿಚೆಲ್ ಮಾರ್ಷ್ 681 ರೇಟಿಂಗ್ ಪಾಯಿಂಟ್‌ಗಳೊಂದಿಗೆ 10ನೇ ಸ್ಥಾನದಲ್ಲಿದೆ. ಅಗ್ರ 10 ಸ್ಥಾನದಲ್ಲಿ ಆಸೀಸ್‌ನ ಕೇವಲ 2 ಬ್ಯಾಟರ್‌ಗಳು ಇದ್ದಾರೆ.

India vs Australia T20 Series Star Players ICC Ranking and Team Positions

ಟಾಪ್‌ 10ರಲ್ಲಿ ಆಸೀಸ್‌ನ ಏಕೈಕ ಬೌಲರ್‌

ಟಿ20 ಬೌಲರ್‌ಗಳ ಶ್ರೇಯಾಂಕದಲ್ಲೂ ಭಾರತೀಯ ಆಟಗಾರರು ಆರ್ಭಟ ನಡೆಸಿದ್ದಾರೆ. ಸ್ಟಾರ್ ಸ್ಪಿನ್ ಬೌಲರ್‌ ವರುಣ್‌ ಚಕ್ರವರ್ತಿ 803 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಂಬರ್‌ 1 ಸ್ಥಾನದಲ್ಲಿದ್ದಾರೆ. ಇನ್ನು ಕುಲ್‌ದೀಪ್‌ ಯಾದವ್‌ 648 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ತಂಡದ ಪರ ಆಡಂ ಜಂಪಾ ಮಾತ್ರ 691 ರೇಟಿಂಗ್ ಪಾಯಿಂಟ್ಸ್‌ಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.

ಇನ್ನು ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಒಬ್ಬನೇ ಒಬ್ಬ ಆಟಗಾರ ಟಾಪ್‌ 10ರಲ್ಲಿ ಸ್ಥಾನ ಪಡೆದಿಲ್ಲ. ಭಾರತದ ಪರ ಹಾರ್ದಿಕ್ ಪಾಂಡ್ಯ ಎರಡನೇ ಸ್ಥಾನದಲ್ಲಿದ್ದರೆ, ಭರವಸೆಯ ಆಟಗಾರ ಅಕ್ಷರ್ ಪಟೇಲ್‌ 175 ರೇಟಿಂಗ್ ಪಾಯಿಂಟ್ಸ್‌ಗಳೊಂದಿಗೆ 9ನೇ ಸ್ಥಾನದಲ್ಲಿದ್ದಾರೆ. ಈ ಶ್ರೇಯಾಂಕಗಳನ್ನು ನೋಡಿದರೆ ಆಸ್ಟ್ರೇಲಿಯಾ ನೆಲದಲ್ಲಿ ಟೀಮ್ ಇಂಡಿಯಾ ಅಬ್ಬರದ ಆಟವನ್ನು ಆಡಿ, ಎದುರಾಳಿಗಳನ್ನು ಕಾಡಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ.

Story first published: Tuesday, October 28, 2025, 16:39 [IST]
Other articles published on Oct 28, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+