Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸೀಸ್‌ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಭಾರತೀಯ ಬ್ಯಾಟರ್‌ ಯಾರು?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಪಂದ್ಯಗಳು ಮುಕ್ತಾಯವಾಗಿವೆ. ಬುಧವಾರದಿಂದ ಉಭಯ ದೇಶಗಳ ನಡುವೆ ಟಿ20 ಸರಣಿ ಆರಂಭವಾಗುತ್ತದೆ. ಈ ಸರಣಿಯ ವೇಳೆ ಒಟ್ಟು 5 ಪಂದ್ಯಗಳನ್ನು ಆಡಲಾಗುತ್ತದೆ. ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು ಎಲ್ಲರ ಗಮನ ಸೆಳೆದಿದೆ. ಈ ವೇಳೆ ಹಲವು ದಾಖಲೆಗಳು ನಿರ್ಮಾಣ ಆಗುವ ಸಾಧ್ಯತೆ ಸಹ ಇದೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯಗಳಲ್ಲಿ ಭಾರತದ ಪರ ಏಕೈಕ ಬ್ಯಾಟರ್ ಶತಕ ಬಾರಿಸಿದ್ದಾರೆ. ಆ ಬ್ಯಾಟರ್ ಯಾರು ಎಂಬ ಬಗ್ಗೆ ಡಿಟೇಲ್ಸ್‌ ಇಲ್ಲಿದೆ.

ಚುಟುಕು ಕ್ರಿಕೆಟ್‌ ಅಂದರೆ ಬ್ಯಾಟರ್‌ಗಳ ಹಾವಳಿ ಜೋರಾಗಿರುತ್ತದೆ. ಮೊದಲು ಈ ಪಂದ್ಯದಲ್ಲಿ ಶತಕ ಬಾರಿಸುವುದು ಎಂದರೆ ದೊಡ್ಡ ಸಾಧನೆಯಾಗಿತ್ತು. ಆದರೆ ಈಗ ಈ ಸಾಧನೆಯನ್ನು ಹಲವು ಬ್ಯಾಟರ್‌ಗಳು ಮಾಡಿ ಬೀಗಿದ್ದಾರೆ. ಈ ಫಾರ್ಮೆಟ್‌ನಲ್ಲಿ ಸ್ಟ್ರೈಕ್‌ ರೇಟ್‌ ದೊಡ್ಡ ಮೇಜರ್ ರೋಲ್ ಪ್ಲೇ ಮಾಡುತ್ತದೆ. ಈ ಫಾರ್ಮೆಟ್‌ನಲ್ಲಿ ಬ್ಯಾಟರ್‌ಗಳು ದೊಡ್ಡ ಹೊಡೆತಗಳ ಮೂಲಕ ರನ್‌ ರೇಟ್‌ ಹಿಗ್ಗಿಸುವುದೇ ಕೆಲಸವಾಗಿರುತ್ತದೆ.

India vs Australia T20I Ruturaj Gaikwad is the Sole Indian Centurion against Aussies

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟಿ20 ಪಂದ್ಯಗಳಲ್ಲಿ ಒಟ್ಟು ಈ ವರೆಗೆ 5 ಶತಕಗಳು ದಾಖಲಾಗಿವೆ. ಇದರಲ್ಲಿ ಒಬ್ಬ ಭಾರತೀಯ ಮಾತ್ರ ಸ್ಥಾನ ಪಡೆದಿದ್ದಾನೆ. ಆಸೀಸ್‌ ವಿರುದ್ಧದ ಚುಟುಕು ಫಾರ್ಮೆಟ್‌ನಲ್ಲಿ ಶತಕ ಬಾರಿಸಿರುವ ಏಕೈಕ ಭಾರತೀಯ ಬ್ಯಾಟರ್‌ ಎಂದರೆ ರುತುರಾಜ್ ಗಾಯಕ್ವಾಡ್‌. ಇವರು 2023 ರಲ್ಲಿ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಗೈಕ್‌ವಾಡ್ ಕೇವಲ 57 ಎಸೆತಗಳಲ್ಲಿ ಮೂರಂಕಿ ಮುಟ್ಟಿ ಸಂಭ್ರಮಿಸಿದ್ದರು. ಈ ವೇಳೆ 13 ಬೌಂಡರಿ, 7 ಸಿಕ್ಸರ್‌ ಸಹ ಸಿಡಿಸಿದ್ದರು. ಇವರ ಇನಿಂಗ್ಸ್‌ಗೆ ಅಂದು ಯಾರು ಬ್ರೇಕ್‌ ಹಾಕದ ಕಾರಣ ರುತುರಾಜ್‌ ಅಜೇಯ 123 ರನ್‌ ಸಿಡಿಸಿದ್ದರು. ಈ ಶತಕದ ಸಾಧನೆಯ ಬಳಿಕ ಹಾಗೂ ಈ ಹಿಂದೆ ಯಾವೊಬ್ಬ ಬ್ಯಾಟರ್ ಸಹ ಈ ಸಾಧನೆ ಮಾಡಿರಲಿಲ್ಲ.

ಆಸೀಸ್ ಪರ 3 ಬ್ಯಾಟರ್‌ಗಳಿಂದ ಶತಕದ ಸಾಧನೆ

ಆಸ್ಟ್ರೇಲಿಯಾದ ಪರ 3 ಬ್ಯಾಟರ್‌ಗಳು ಮೂರಂಕಿ ಮುಟ್ಟಿ ಸಂಭ್ರಮಿಸಿದ್ದಾರೆ. ಸ್ಫೋಟಕ ಬ್ಯಾಟರ್‌ ಶೇನ್ ವ್ಯಾಟ್ಸನ್‌ 2016ರಲ್ಲಿ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ 124 ರನ್‌ ಸಿಡಿಸಿ ಅಬ್ಬರಿಸಿದ್ದರು. ಸ್ಟಾರ್ ಆಲ್‌ರೌಂಡರ್‌ ಗ್ಲೇನ್‌ ಮ್ಯಾಕ್ಸ್‌ವೆಲ್‌ 2 ಬಾರಿ ಶತಕ ಬಾರಿಸಿದ್ದಾರೆ. 2019 ಹಾಗೂ 2023ರಲ್ಲಿ ಈ ಸಾಧನೆ ಮಾಡಿ ಗ್ಲೇನ್ ಬೀಗಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಆಟಗಾರ ಜೋಶ್ ಇಂಗ್ಲಿಂಷ್. ಇವರು 2023ರಲ್ಲಿ ಶತಕ ಬಾರಿಸಿದ್ದರು.

ಭಾರತದ ಪರ ಅಂದು ಶತಕ ಬಾರಿಸಿದ್ದ ರುತುರಾಜ್ ಗಾಯಕ್ವಾಡ್ ಇಂದು ತಂಡದಲ್ಲಿಲ್ಲ. ಅಲ್ಲದೆ ಈ ಸ್ವರೂಪದಲ್ಲಿ ಅವರು ಭಾರತದ ಪರ ಕಣಕ್ಕೆ ಇಳಿಯಲು ಅವಕಾಶ ಸಿಗುತ್ತಿಲ್ಲ. ಹೀಗಾಗಿ ಆಸೀಸ್‌ ವಿರುದ್ಧದ ಪಂದ್ಯದಲ್ಲಿ ಮತ್ತೆ ಯಾರು ಶತಕ ಬಾರಿಸುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

Story first published: Tuesday, October 28, 2025, 20:10 [IST]
Other articles published on Oct 28, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+