ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ ಟ20ಐ: ಹೆಡ್‌ ಟು ಹೆಡ್ ದಾಖಲೆ ಹಾಗೂ ಪ್ರಮುಖ ಅಂಕಿಅಂಶಗಳು

India vs Australia T20I series: Head-to-head records and important stats

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಡಿಸೆಂಬರ್ 4ರಿಂದ ಕ್ಯಾನ್‌ಬೆರಾದಲ್ಲಿ ಆರಂಭವಾಗಲಿದ್ದು ಮನುಕಾ ಓವಲ್‌ನಲ್ಲಿ ಈ ಪಂದ್ಯದ ಆತಿಥ್ಯ ವಹಿಸಿಕೊಂಡಿದೆ. ಈ ವರ್ಷಾರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಂಡ ಬಳಿಕ ಇದೇ ಮೊದಲ ಬಾರಿಗೆ ಚುಟುಕು ಕ್ರಿಕೆಟ್ ಪಂದ್ಯವನ್ನಾಡಲು ಟೀಮ್ ಇಂಡಿಯಾ ಸಜ್ಜಾಗಿದೆ. ಕೀವಿಸ್ ವಿರುದ್ಧದ ಈ ಐದು ಪಂದ್ಯಗಳ ಸರಣಿಯನ್ನು ಭಾರತ 5-0 ಅಂತರದಿಂದ ಜಯಿಸಿಕೊಂಡಿತ್ತು.

ಇನ್ನು ಆಸ್ಟ್ರೇಲಿಯಾ ವಿರುದ್ಧದ ಟಿ20 ಕದನದ ಇತಿಹಾಸದಲ್ಲಿ ಭಾರತವೇ ಮೇಲುಗೈ ಸಾಧಿಸಿರುವುದು ಸ್ಪಷ್ಟವಾಗುತ್ತದೆ. ಎರಡು ದೇಶಗಳು ಚುಟುಕು ಕ್ರಿಕೆಟ್‌ನಲ್ಲಿ ಮುಖಾಮುಖಿಯಾದ ವೇಳೆ ಭಾರತ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಆಸ್ಟ್ರೇಲಿಯಾ 8 ಪಂದ್ಯಗಳಲ್ಲಿ ಗೆದ್ದುಕೊಂಡಿದೆ.

ಟಿ20ಯಲ್ಲಿ ಆಸ್ಟ್ರೇಲಿಯಾಕ್ಕೆ ಭಾರತ ಕಠಿಣ ಸವಾಲೊಡ್ಡುವ ನಿರೀಕ್ಷೆಟಿ20ಯಲ್ಲಿ ಆಸ್ಟ್ರೇಲಿಯಾಕ್ಕೆ ಭಾರತ ಕಠಿಣ ಸವಾಲೊಡ್ಡುವ ನಿರೀಕ್ಷೆ

ಭಾರತದ ಮೇಲುಗೈ

ಭಾರತದ ಮೇಲುಗೈ

ಆಸ್ಟ್ರೇಲಿಯಾ ವಿರುದ್ಧದ ಇತ್ತೀಚಿನ ಟಿ20 ಮುಖಾಮುಖಿಯಲ್ಲೂ ಭಾರತವೇ ಮೇಲುಗೈ ಸಾಧಿಸಿದೆ. 2018ರಲ್ಲಿ ಟೀಮ್ ಇಂಡಿಯಾ ಆಡಿದ 2 ಪಂದ್ಯಗಳಲ್ಲಿ ಒಂದನ್ನು ಗೆದ್ದುಕೊಂಡಿತು. 2016ರಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ 3-0 ಅಂತರದಿಂದ ಕ್ಲೀನ್ ಸ್ವೀಪ್ ಸಾಧಿಸಿತ್ತು. ತಂಡದ ಬಲಾಬಲವನ್ನು ಗಮನಿಸಿದಾಗಲೂ ಟಿ20ಯಲ್ಲಿ ಭಾರತವೇ ಮೇಲುಗೈ ಸಾಧಿಸಿದಂತೆ ಕಂಡು ಬರುತ್ತದೆ.

ವಿರಾಟ್ ಕೊಹ್ಲಿ ಮುನ್ನಡೆ

ವಿರಾಟ್ ಕೊಹ್ಲಿ ಮುನ್ನಡೆ

ಇನ್ನು ಈ ಎರಡು ತಂಡಗಳ ಮುಖಾಮುಖಿಯಲ್ಲಿ ರನ್ ಗಳಿಕೆಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುನ್ನಡೆಯಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ 584 ರನ್‌ಗಳನ್ನು ಗಳಿಸಿದ್ದಾರೆ. 2016ರ ಸರಣಿಯಲ್ಲಿ ಕೊಹ್ಲಿ ಸತತ ಮೂರು ಅರ್ಧ ಶತಕವನ್ನು ಸಿಡಿಸಿದ್ದರು. ಆಸಿಸ್ ತಂಡದ ಪರವಾಗಿ ನಾಯಕ ಆರೋನ್ ಫಿಂಚ್ ರನ್‌ಗಳಿಕೆಯನ್ನು ಮುಂದಿದ್ದು 405 ರನ್ ಗಳಿಸಿದ್ದಾರೆ. ಆದರೆ ಭಾರತದ ವಿರುದ್ಧ ಆಡಿದ ಕಳೆದ ಐದು ಟಿ20 ಪಂದ್ಯಗಳಲ್ಲಿ ಫಿಂಚ್ 2 ಬಾರಿ ಶೂನ್ಯ ಸಂಪಾದಿಸಿದ್ದಾರೆ.

ಬೌಲಿಂಗ್‌ನಲ್ಲಿ ಬೂಮ್ರಾ ಮೇಲುಗೈ

ಬೌಲಿಂಗ್‌ನಲ್ಲಿ ಬೂಮ್ರಾ ಮೇಲುಗೈ

ಇನ್ನು ಬೌಲಿಂಗ್ ವಿಭಾಗದಲ್ಲಿ 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದ ಜಸ್ಪ್ರಿತ್ ಬೂಮ್ರಾ ಹೆಚ್ಚಿನ ವಿಕೆಟ್ ಪಡೆದುಕೊಂಡಿದ್ದಾರೆ. ಬೂಮ್ರಾ ಆಸಿಸ್ ತಂಡದ ವಿರುದ್ಧ 15 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ತಂಡದ ಪರವಾಗಿ ಸ್ಪಿನ್ನರ್ ಆಡಂ ಜಂಪಾ ಅತ್ಯಂತ ಹೆಚ್ಚಿನ ವಿಕೆಟ್ ಗಳಿಸಿದ ಬೌಲರ್ ಆಗಿದ್ದಾರೆ.

Story first published: Friday, December 4, 2020, 14:04 [IST]
Other articles published on Dec 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X