Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸ್ಟ್ರೇಲಿಯಾ ಸರಣಿ: ದ್ವಿಪಕ್ಷೀಯ ಸರಣಿಗಳಲ್ಲೇ ದೊಡ್ಡ ಹೆಜ್ಜೆ, 120 ದೇಶಗಳಲ್ಲಿ ನೇರಪ್ರಸಾರ

India vs Australia Test series will streamed live in more than 120 countries

ವಿಶ್ವ ಕ್ರಿಕೆಟ್ ಅಭಿಮಾನಿಗಳು ಅತ್ಯಂತ ನಿರೀಕ್ಷೆಯಿಂದ ಕಾಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಈ ಜಿದ್ದಾಜಿದ್ದಿನ ಕಾದಾಟವನ್ನು ನೋಡಲು ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಹೀಗಾಗಿ ಈ ಸರಣಿ ನೇರಪ್ರಸಾರದ ವಿಚಾರದಲ್ಲಿ ವಿಶೇಷವಾದ ಸಾಧನೆಯೊಂದನ್ನು ಮಾಡಲಿದೆ.

ಇನ್‌ಸೈಡ್‌ ಸ್ಪೋರ್ಟ್ಸ್ ಮಾಡಿರುವ ವರದಿಯ ಪ್ರಕಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಈ ಟೆಸ್ಟ್ ಸರಣಿ ವಿಶ್ವಾದ್ಯಂತ ಸುಮಾರು 120 ದೇಶಗಳಲ್ಲಿ ನೇರಪ್ರಾರವಾಗಲಿದೆ. ದ್ವಿಪಕ್ಷೀಯ ಕ್ರಿಕೆಟ್‌ನಲ್ಲಿ ಇದೊಂದು ಅತ್ಯಂದ ದೊಡ್ಡ ಸಾಧನೆಯಾಗಿದ್ದು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುವ ಆ್ಯಶಸ್ ಸರಣಿಗಿಂತಲೂ ದೊಡ್ಡ ಸರಣಿಯನ್ನಾಗಿ ಮಾಡಿದೆ.

ಭಾರತದಲ್ಲಿ ನೇರಪ್ರಸಾರ: ಇನ್ನು ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಟೆಸ್ಟ್ ಸರಣಿಯ ನೇರಪ್ರಸಾರ ಭಾರತದಲ್ಲಿ ಸೋನಿ ಪಿಕ್ಚರ್ಸ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಭಾರತದಲ್ಲಿ ಅಧಿಕೃತವಾಗಿ ನಾಲ್ಕು ಭಾಷೆಗಳಲ್ಲಿ ಈ ಪಂದ್ಯದ ವೀಕ್ಷಕವಿವರಣೆಯಿರಲಿದೆ.

ಸೋನಿ ಟೆನ್ 1ನಲ್ಲಿ ಇಂಗ್ಲೀಷ್, ಸೋನಿ ಟೆನ್ 3ನಲ್ಲಿ ಹಿಂದಿ ಹಾಗೂ ಸೋನಿ ಸಿಕ್ಸ್ ಚಾನೆಲ್‌ಗಳಲ್ಲಿ ಇಂಗ್ಲೀಷ್ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ನೇರಪ್ರಸಾರದ ಜೊತೆಗೆ ವೀಕ್ಷಕ ವಿವರಣೆ ಇರಲಿದೆ. ಶುಕ್ರವಾರ ಬೆಳಗ್ಗೆ 8:30ರಿಂದ ನೇರಪ್ರಸಾರ ಆರಂಭವಾಗಲಿದೆ.

ಏಷ್ಯಾದ ದೇಶಗಳಾದ ಅಪ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾರೀಷಸ್, ನೇಪಾಲ್ ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಸೋನಿ ನೆಟ್‌ವರ್ಕ್‌ನಲ್ಲೇ ಪಂದ್ಯದ ನೇರಪ್ರಸಾರವಾಗಲಿದೆ.

Story first published: Wednesday, December 16, 2020, 13:00 [IST]
Other articles published on Dec 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+