ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ಗೆ ಆಯ್ಕೆಯಾದರೂ ನಿರಾಳತೆಯಿಲ್ಲ!: ಆಸಿಸ್ ಸರಣಿಗೆ ಒತ್ತಡದಲ್ಲೇ ಕಣಕ್ಕಿಳಿಯಲಿದ್ದಾರೆ ಈ 3 ಕ್ರಿಕೆಟಿಗರು!

India vs Australia: These three Indian cricketers under pressure during the Australia T20I series ahead of t20 world cup

ಏಷ್ಯಾ ಕಪ್ ಟೂರ್ನಿ ಮುಕ್ತಾಯವಾದ ಬಳಿಕ ಇದೀಗ ಟೀಮ್ ಇಂಡಿಯಾದ ಚಿತ್ತ ವಿಶ್ವಕಪ್ ಟೂರ್ನಿ ಮೇಲೆ ನೆಟ್ಟಿದೆ. ಈ ಮಹತ್ವದ ಟೂರ್ನಿಗೂ ಮುನ್ನ ಎರಡು ಬಲಿಷ್ಠ ತಂಡಗಳು ವಿರುದ್ಧ ಟಿ20 ಸರಣಿಯಲ್ಲಿ ಭಾರತ ತಂಡ ಭಾಗಿಯಾಗಲಿದೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಈ ಚುಟುಕು ಸರಣಿಗಳು ನಡೆಯಲಿದ್ದು ಇದು ವಿಶ್ವಕಪ್‌ಗೆ ಭಾರತದ ಅಂತಿಮ ಸಿದ್ಧತೆಯಾಗಿರಲಿದೆ. ಈ ಪೈಕಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಸರಣಿ ಮುಂದಿನ ಸೋಮವಾರದಿಂದ ಆರಂಭವಾಗಲಿದೆ.

ಆಸ್ಟ್ರೇಲಿಯಾ ನೆಲದಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿ ನಡೆಯುತ್ತಿರುವ ಕಾರಣ ಹಾಲಿ ಚಾಂಪಿಯನ್ ತಂಡವೂ ಆಗಿರುವ ಆರೋನ್ ಫಿಂಚ್ ಪಡೆ ಟೂರ್ನಿಯನ್ನು ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಈ ಸರಣಿ ಅಭ್ಯಾಸದ ದೃಷ್ಟಿಯಿಂದ ಭಾರತಕ್ಕೆ ಪ್ರಮುಖವಾಗಿರಲಿದೆ. ಅಲ್ಲದೆ ಕೆಲ ಆಟಗಾರರು ತಮ್ಮ ಫಾರ್ಮ್ ಕಂಡುಕೊಳ್ಳಲು ಕೂಡ ಇದೊಂದು ಉತ್ತಮ ಅವಕಾಶವಾಗಿದೆ.

ನಿಮ್ಮ ಜೊತೆ ಆಡಿದ್ದು ತುಂಬಾ ಖುಷಿ ನೀಡಿದೆ: ರಾಬಿನ್ ಉತ್ತಪ್ಪಗೆ ವಿರಾಟ್ ಕೊಹ್ಲಿ ಸಂದೇಶನಿಮ್ಮ ಜೊತೆ ಆಡಿದ್ದು ತುಂಬಾ ಖುಷಿ ನೀಡಿದೆ: ರಾಬಿನ್ ಉತ್ತಪ್ಪಗೆ ವಿರಾಟ್ ಕೊಹ್ಲಿ ಸಂದೇಶ

ಆದರೆ ಭಾರತ ಕ್ರಿಕೆಟ್ ತಂಡದ ಕೆಲ ಆಟಗಾರರಿಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿ ಮಹತ್ವದ್ದಾಗಿರಲಿದ್ದು ಅದರಲ್ಲೂ ಈ ಮೂವರು ಆಟಗಾರರು ಸಾಕಷ್ಟು ಒತ್ತಡದಿಂದಲೇ ಈ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಯಾರು ಆ ಮೂವರು ಆಟಗಾರರು? ಮುಂದೆ ಓದಿ..

ಉಪ ನಾಯಕ ಕೆಎಲ್ ರಾಹುಲ್

ಉಪ ನಾಯಕ ಕೆಎಲ್ ರಾಹುಲ್

ಟೀಮ್ ಇಂಡಿಯಾದ ಉಪ ನಾಯಕ ಕೆಎಲ್ ರಾಹುಲ್‌ ಗಾಯದಿಂದ ಸುದೀರ್ಘ ಕಾಲದ ವಿರಾಮದ ಬಳಿಕ ಕಳೆದ ಏಷ್ಯಾ ಕಪ್‌ನ ಮೂಲಕ ಕಮ್‌ಬ್ಯಾಕ್ ಮಾಡಿದರು. ಅಂತಿಮ ಪಂದ್ಯದಲ್ಲಿ ಅರ್ಧ ಶತಕ ಬಾರಿಸುವ ಮೂಲಕ ಲಯಕ್ಕೆ ಮರಳಿದ ಸೂಚನೆ ನೀಡಿದರಾದರೂ ಅದಕ್ಕೂ ಹಿಂದಿನ ಪಂದ್ಯಗಳಲ್ಲಿ ರನ್‌ಗಳಿಸಲು ಸಾಕಷ್ಟು ಪರದಾಡುವ ಮೂಲಕ ಟೀಕೆಯನ್ನು ಎದುರಿಸಿದ್ದರು. ಅಫ್ಘಾನಿಸ್ತಾನದ ವಿರುದ್ಧ ಅರ್ಧ ಶತಕವನ್ನು ಬಾರಿಸಿದರಾದರೂ ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಮೋಘ ಶತಕವನ್ನು ಬಾರಿಸಿದ ಕಾರಣ ಕೊಹ್ಲಿಯನ್ನು ಆರಂಭಿಕನಾಗಿಯೇ ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಹೀಗಾಗಿ ಕೆಎಲ್ ರಾಹುಲ್ ಮೇಲೆ ಈಗ ಸಾಕಷ್ಟು ಒತ್ತಡಗಳು ಉಂಟಾಗುತ್ತಿದೆ. ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲು ಅರ್ಹ ಎಂಬುದನ್ನು ಕೆಎಲ್ ರಾಹುಲ್ ಸಾಬೀತುಪಡಿಸಬೇಕಿದ್ದು ಇಲ್ಲವಾದಲ್ಲಿ ಮತ್ತಷ್ಟು ಟೀಕೆಗಳಿಗೆ ಗುರಿಯಾಗುವ ಸಾಧ್ಯತೆಯಿದೆ.

ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್

ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್

ಭಾರತದ ಅನುಣವಿ ಸ್ಪಿನ್ನರ್ ಯುಜುವೇಂದ್ ಚಾಹಲ್ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಮೊದಲ ಆಯ್ಕೆಯ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಕಳೆದ ವರ್ಷದ ವಿಶ್ವಕಪ್‌ನಲ್ಲಿ ಸ್ಥಾನವನ್ನು ಕಳೆದುಕೊಂಡ ಬಳಿಕ ಅದ್ಭುತ ಪ್ರದರ್ಶನ ನೀಡಿ ಕಮ್‌ಬ್ಯಾಕ್ ಮಾಡಿದರಾದರೂ ಇತ್ತೀಚೆಗೆ ಮತ್ತೆ ಕಳೆಗುಂದಿದಂತೆ ಕಂಡುಬಂದಿದ್ದಾರೆ. ಅದರಲ್ಲೂ ಏಷ್ಯಾಕಪ್‌ನಲ್ಲಿ ಚಾಹಲ್ ಪರಿಣಾಮಕಾರಿ ಎನಿಸಲಿಲ್ಲ ಎಂಬುದು ಗಮನಾರ್ಹ. ಹಾಗಿದ್ದರೂ ಮ್ಯಾನೇಜ್‌ಮೆಂಟ್ ಹಾಗೂ ಆಯ್ಕೆಗಾರರು ಚಾಹಲ್ ಮೇಲೆ ಸಾಕಷ್ಟು ಭರವಸೆಯಿಟ್ಟುಕೊಂಡಿದ್ದಾರೆ. 2019ರ ಬಳಿಕ ಅಂಕಿಅಂಶವನ್ನು ನೋಡಿದರೆ ಟಿ20 ಕ್ರಿಕಕೆಟ್‌ನಲ್ಲಿ ಒಂದು ಪಂದ್ಯದಲ್ಲಿ ಒಂದಕ್ಕಿಂತ ಹೆಚ್ಚು ಮವಿಕೆಟ್ ಪಡೆದಿರುವ ದೃಷ್ಟಾಂತ ಅತ್ಯಂತ ಅಪರೂಪವಾಗಿದೆ. ವಿಕೆಟ್ ಟೇಕರ್ ಬೌಲರ್ ಎನಿಸಿಕೊಂಡಿದ್ದರೂ ಅವರಿಂದ ಅಂಥಾ ಪ್ರದರ್ಶನ ಇತ್ತೀಚಿನ ದಿನಗಳಲ್ಲಿ ಬಾರದಿರುವುದು ಚಿಂತೆ ಹೆಚ್ಚಿಸಿದೆ. ತಂಡದಲ್ಲಿ ಅನುಭವಿ ಆರ್ ಅಶ್ವಿನ್ ಇರುವ ಕಾರಣ ಆಡುವ ಬಳಗದಲ್ಲಿ ಸ್ಥಾನವನ್ನು ಚಾಹಲ್ ಪಡೆಯಬೇಕಾದರೆ ಆಸಿಸ್ ವಿರುದ್ಧದ ಸರಣಿಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ.

ಶಾಹಿದ್ ಅಫ್ರಿದಿ ನಂತರ, ವಿರಾಟ್ ಕೊಹ್ಲಿ ನಿವೃತ್ತಿ ಕುರಿತು ಮತ್ತೊಬ್ಬ ಪಾಕ್ ಕ್ರಿಕೆಟಿಗ ಭವಿಷ್ಯ!

ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್

ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್

ರಿಚಭ್ ಪಂತ್ ಎಂಥಾ ಅದ್ಭುತ ಪ್ರತಿಭೆ ಎಂಬುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿಸಿಹೇಳಬೇಕಿಲ್ಲ. ಆದರೆ ಅವರ ಸಾಮರ್ಥ್ಯಕ್ಕೆ ಪೂರಕವಾದ ಪ್ರದರ್ಶನ ವೈಟ್‌ಬಾಲ್ ಮಾದರಿಯಲ್ಲಿ ಇನ್ನೂ ಬಂದಿಲ್ಲ ಎಂಬುದು ಬೇಸರದ ಸಂಗತಿ. ಅದರಲ್ಲೂ ಟಿ20 ಮಾದರಿಯಲ್ಲಿ ಪಂತ್ ಅಕ್ಷರಶಃ ಪರದಾಡುತ್ತಿದ್ದಾರೆ. ಇದು ಏಷ್ಯಾ ಕಪ್ ಟೂರ್ನಿಯಲ್ಲಿಯೂ ಸಾಬೀತಾಯಿತು. ಹೀಗಾಗಿ ಪಂತ್ ಬದಲಿಗೆ ಸಂಜು ಸ್ಯಾಮ್ಸನ್ ಅಥವಾ ಇಶಾನ್ ಕಿಶನ್‌ಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯಗಳು ಜೋರಾಗಿ ವ್ಯಕ್ತವಾಗಿದೆ. ಹೀಗಾಗಿ ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರಿಷಭ್ ಪಂತ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಒತ್ತಡದಲ್ಲಿದ್ದು ತಾನು ವಿಶ್ವಕಪ್‌ನ ತಂಡದಲ್ಲಿ ಸ್ಥಾನ ಪಡೆಯಲು ಅರ್ಹ ಎನಿಸಿಕೊಳ್ಳಬೇಕಿದೆ.

ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ

ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

Story first published: Thursday, September 15, 2022, 17:56 [IST]
Other articles published on Sep 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X