ನಾನು ಕೆಟ್ಟ ಉದಾಹರಣೆಯಾಗಿದ್ದೇನೆ, ನನ್ನನ್ನು ಸರಿಪಡಿಸಿಕೊಳ್ಳಬೇಕು: ಟಿಮ್ ಪೈನ್

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ ರೀತಿಗೆ ಹಾಗೂ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳಿಂದ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ಪಂದ್ಯದ ಅಂತ್ಯದ ಬಳಿಕ ಸ್ವತಃ ಟಿಮ್ ಪೈನ್ ಅಂಗಳದಲ್ಲಿ ನಾನು ಕೆಟ್ಟದಾಗಿ ವರ್ತಿಸಿದೆ. ಭವಿಷ್ಯದಲ್ಲಿ ಉತ್ತಮಪಡಿಸಿಕೊಳ್ಳಬೇಕಿದೆ ಎಂದು ಹೇಳಿಕೊಂಡಿದ್ದಾರೆ.
ಬಹುಶಃ ನಾನು ಭಾಷೆಯ ಬಳಕೆಯಲ್ಲಿ ಕೆಟ್ಟ ಉದಾಹರಣೆಯಾಗಿದ್ದೇನೆ. ನನ್ನ ಬಗ್ಗೆ ನನಗೆಯೇ ಅಸಮಾಧಾನವಾಗಿದೆ ಎಂದು ಟಿಮ್ ಪೈನ್ ಪಂದ್ಯದ ಮುಕ್ತಾಯದ ಬಳಿಕ ವರದಿಗಾರರ ಜೊತೆಗೆ ಮಾತನಾಡುತ್ತಾ ಟಿಮ್ ಪೈನ್ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ತಮ್ಮ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಸಿಡ್ನಿ ಟೆಸ್ಟ್ ಪಂದ್ಯದ ಭಾರತದ ಮೊದಲ ಇನ್ನಿಂಗ್ಸ್‌ನ ಬ್ಯಾಟಿಂಗ್ ವೇಳೆಯಲ್ಲಿ ಅಂಪಾಯರ್ ಡಿಸಿಶನ್ ರಿವ್ಯೂ ಪಡೆದುಕೊಂಡ ಬಳಿಕ ಅದು ವಿಫಲವಾದ ಅಸಮಾಧಾನವನ್ನು ಪೈನ್ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಆಸಿಸ್ ನಾಯಕ ಮೈದಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂಪಾಯರ್ ಬಳಿ ಬಂದು ರಿವ್ಯೂ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಲ್ಲದೆ ಅಶ್ಲೀಲ ಪದಪ್ರಯೋಗ ಮಾಡಿದ್ದರು.
ಆಸ್ಟ್ರೇಲಿಯಾ ನಾಯಕನ ಈ ವರ್ತನೆಯ ಬಗ್ಗೆ ದೂರು ದಾಖಲಾಗಿದ್ದು ಪೈನ್‌ಗೆ ಪಂದ್ಯದ ಸಂಭಾವನೆಯ ಶೇಕಡಾ 15ರಷ್ಟು ದಂಡವನ್ನು ಕೂಡ ವಿಧಿಸಲಾಗಿದೆ. ಜೊತೆಗೆ ಒಂದು ಡಿಮೆರಿಟ್ ಅಂಕವನ್ನು ಕೂಡ ಟಿಮ್ ಪೈನ್ ಖಾತೆಗೆ ಸೇರಿಸಲಾಗಿದೆ. ಅಂಪಾಯರ್ ಪೌಲ್ ವಿಲ್ಸನ್ ಜೊತೆಗೆ ಪೈನ್ ಮಾತಿನ ಚಕಮಕಿ ನಡೆಸಿದ್ದರು.
"ನಾನು ಅಂಪಾಯರ್ ವಿಲ್ಸನ್ ಅವರೊಗೆ ಅಗೌರವ ನೀಡಬೇಕೆಂಬ ಉದ್ದೇಶದಿಂದ ಈ ಮಾತನ್ನು ಹೇಳಿರಲಿಲ್ಲ. ಪರಿಸ್ಥಿತಿಯ ತಾಪದಲ್ಲಿ ಆ ಮಾತು ಬಂದಿದೆ. ನಾನು ನನ್ನನ್ನು ಸರಿಪಡಿಸಿಕೊಳ್ಳಬೇಕಿದೆ. ಸ್ಟಂಪ್ ಮೈಕ್ ಇರುತ್ತದೆ ಸಾಕಷ್ಟು ಮಕ್ಕಳು ಪಂದ್ಯವನ್ನು ವೀಕ್ಷಿಸುತ್ತಾರೆ ಎಂದು ನನಗೆ ಅರಿವಿದೆ. ಹಾಗಾಗಿ ನಾನು ಉತ್ತಮ ಉದಾಹರಣೆಯನ್ನು ನೀಡಬೇಕಿದೆ" ಎಂದು ಟಿಮ್ ಪೈನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications