ತಮಾಷೆಯಾಗಿ ಅಭ್ಯಾಸದಲ್ಲಿ ಪಾಲ್ಗೊಂಡ ವಿರಾಟ್ ಕೊಹ್ಲಿ ಪಡೆ: ವಿಡಿಯೋ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಕುತೂಲಹಲಕಾರಿ ಟೆಸ್ಟ್ ಸರಣಿಗಾಗಿ ಸಜ್ಜಾಗುತ್ತಿರುವ ಟೀಮ್ ಇಂಡಿಯಾ, ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೂ ಮುನ್ನ ಡಿಸೆಂಬರ್ 15ರ ಮಂಗಳವಾರ ತಮಾಷೆಯಾಗಿ, ಲವಲವಿಕೆಯಿಂದ ಅಭ್ಯಾಸದಲ್ಲಿ ಪಾಲ್ಗೊಂಡಿದೆ. ಭಾರತೀಯ ತಂಡ ಹುಮ್ಮಸ್ಸಿನಲ್ಲಿ, ಸಾಮಾನ್ಯ ಅಭ್ಯಾಸಕ್ಕಿಂತ ಕೊಂಚ ಭಿನ್ನವಾಗಿ ಅಭ್ಯಾಸ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.
ಭಾರತ-ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಡಿಸೆಂಬರ್ 17ರಿಂದ ಆರಂಭಗೊಳ್ಳಲಿದೆ. ಆರಂಭಿಕ ಪಂದ್ಯ ಡೇ-ನೈಟ್ ಟೆಸ್ಟ್ ಆಗಿರಲಿದೆ. ಮೊದಲ ಪಂದ್ಯದ ಬಳಿಕ ತಂಡದ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಪಡೆದುಕೊಂಡು ಉಳಿದ ಟೆಸ್ಟ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.
ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜನವರಿಯಲ್ಲಿ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿರುವುದರಿಂದ ಕೊಹ್ಲಿ ಈಗಾಗಲೇ ಮೊದಲ ಟೆಸ್ಟ್ ಬಳಿಕ ರಜೆ ಮಂಜೂರು ಮಾಡಿಕೊಂಡಿದ್ದಾರೆ.

ರಹಾನೆ ಹೆಗಲಿಗೆ ನಾಯಕತ್ವ
ಪ್ರಮುಖ ಟೆಸ್ಟ್ ಸರಣಿಯಿಂದ ನಾಯಕ ವಿರಾಟ್ ಕೊಹ್ಲಿ ಹೊರಗುಳಿಯುತ್ತಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೀಡಾಗಿತ್ತು. ಆದರೆ ಬದುಕಿನ ಅಪರೂಪದ ಕ್ಷಣವಾದ್ದರಿಂದ ಚೊಚ್ಚಲ ಮಗು ಜನಿಸುವ ವೇಳೆ ಕೊಹ್ಲಿ ತನ್ನ ಕುಟುಂಬ ಜೊತೆಗಿರಲು ಬಯಸಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡ ಮುನ್ನಡೆಸಲಿದ್ದಾರೆ.
ತಮಾಷೆಯಾಗಿ ಅಭ್ಯಾಸ
ಭಾರತೀಯ ಆಟಗಾರರು ಫನ್ ಡ್ರಿಲ್ ನಡೆಸುತ್ತಿರುವ ವಿಡಿಯೋವನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. 'ಎಲ್ಲರೂ ತಮಾಷೆಯಾಗಿ ಅಭ್ಯಾಸ ನಡೆಸುತ್ತಿದ್ದಾರೆ ಅಲ್ಲವೆ?,' ಎಂದು ಸಾಲೊಂದನ್ನು ಸೇರಿಸಿಕೊಂಡಿದೆ.

ಟೆಸ್ಟ್ ಸರಣಿ ಉಳಿಸಿಕೊಳ್ಳುತ್ತಾ ಭಾರತ?
ಕಳೆದ ವರ್ಷ ಅಂದರೆ 2018-19ರಲ್ಲಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ವಿರಾಟ್ ಕೊಹ್ಲಿ ಬಳಗ ಇದೇ ಟೆಸ್ಟ್ ಸರಣಿ ಗೆದ್ದು ದಾಖಲೆ ನಿರ್ಮಿಸಿತ್ತು. ಈಬಾರಿ ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳಲ್ಲಿ ಪ್ರಮುಖ ಆಟಗಾರರಿಲ್ಲ. ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಡೇವಿಡ್ ವಾರ್ನರ್ ಆಡುತ್ತಿಲ್ಲ. ಇತ್ತ ಭಾರತದಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಆಡುತ್ತಿಲ್ಲ. ಹೀಗಾಗಿ ಸರಣಿ ಈ ಬಾರಿ ಯಾರು ಗೆಲ್ಲಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications