ಎಂಸಿಜಿಯಲ್ಲಿ ರಾಹುಲ್ ದ್ರಾವಿಡ್ ದಾಖಲೆ ಮುರಿದ ವಿರಾಟ್ ಕೊಹ್ಲಿ


ಮೆಲ್ಬೋರ್ನ್, ಡಿಸೆಂಬರ್ 27: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ)ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಮಾಜಿ ನಾಯಕ ರಾಹುಲ್ ದ್ರಾವಿಡ್ಅವರು ಸ್ಥಾಪಿಸಿದ್ದ ದಾಖಲೆಯೊಂದನ್ನು 16 ವರ್ಷಗಳ ನಂತರ ಮುರಿದಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ನ ಮೊದಲ ಇನಿಂಗ್ಸ್ನ ಎರಡನೇ ದಿನವಾದ ಗುರುವಾರದಂದು ಕೊಹ್ಲಿ ಅವರು 82 ರನ್ ಗಳಿಸಿ ಔಟಾದರು. ಈ ಅರ್ಧ ಶತಕದ ಮೂಲಕ 2018ನೇ ಕ್ಯಾಲೆಂಡರ್ ವರ್ಷದಲ್ಲಿ ಭಾರತದಿಂದ ಹೊರಗೆ ಟೆಸ್ಟ್ ಕ್ರಿಕೆಟ್ನಲ್ಲಿ ಒಟ್ಟು 1138 ರನ್ ಗಳನ್ನು ಕೊಹ್ಲಿ ಗಳಿಸಿದ್ದಾರೆ. ಈ ಮೂಲಕ ರಾಹುಲ್ ದ್ರಾವಿಡ್ 2002ರಲ್ಲಿ 1137 ರನ್ಗಳಿಸಿ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.
ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮೊಹಿಂದರ್ ಅಮರನಾಥ್ ಇದ್ದು, ಇವರು 1983ರಲ್ಲಿ ವಿದೇಶಗಳಲ್ಲಿ ನಡೆದ ಟೆಸ್ಟ್ಪಂದ್ಯಗಳಲ್ಲಿ ಒಟ್ಟು 1065 ರನ್ ಗಳಿಸಿದ್ದರು.
ಒಂದು ಕ್ಯಾಲೆಂಡರ್ ವರ್ಷದಲ್ಲಿ 12ಕ್ಕೂ ಅಧಿಕ ಶತಕ ಗಳಿಸಿದ್ದ ಸಚಿನ್ ದಾಖಲೆಯನ್ನು ಸರಿಗಟ್ಟುವ ಅವಕಾಶವನ್ನು ಕೊಹ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಮಿಸ್ಮಾಡಿಕೊಂಡಿದ್ದಾರೆ.
ವಿದೇಶದಲ್ಲಿ ಅತಿ ಹೆಚ್ಚು ರನ್ ಒಂದು ಕ್ಯಾಲೆಂಡರ್ ವರ್ಷ:
* 1212ರನ್ : ಗ್ರಹಾಂ ಸ್ಮಿತ್ (2008)
* 1154 ರನ್: ವಿವ್ ರಿಚರ್ಡ್ಸ್ (1976)
* 1138: ವಿರಾಟ್ ಕೊಹ್ಲಿ (2018) ಭಾರತದ ಪರ ದಾಖಲೆ
* 1137 ರನ್ : ರಾಹುಲ್ ದ್ರಾವಿಡ್ (2002)
* 1065 : ಮೊಹಿಂದರ್ ಅಮರನಾಥ್ (1983)
* 1061 : ಅಲೆಸ್ಟರ್ ಕುಕ್ (2010)
ಎಂಸಿಜಿಯಲ್ಲಿ 2014ರಲ್ಲಿ 169 ಹಾಗೂ 54 ಹಾಗೂ 2018ರಲ್ಲಿ 82ಗಳಿಸುವ ಮೂಲಕ ಸತತ ಮೂರು 50ಪ್ಲಸ್ ರನ್ ಗಳಿಸಿ ಮೊದಲ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications