Virat Kohli century: 28ನೇ ಟೆಸ್ಟ್ ಶತಕ ಸಿಡಿಸಿದ ಕೊಹ್ಲಿ: ಟೆಸ್ಟ್ ಮಾದರಿಯಲ್ಲೂ ವಿರಾಟ್ ಶತಕದ ಬರ ಅಂತ್ಯ

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಹ್ಮದಾಬಾದ್ ಟೆಸ್ಟ್‌ನಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಸುದೀರ್ಘ ಕಾಲದಿಂದ ಶತಕ ಸಿಡಿಸದೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ ವೈಟ್‌ಬಾಲ್ ಮಾದರಿಯಲ್ಲಿ ಫಾರ್ಮ್‌ಗೆ ಮರಳಿದ್ದರೂ ಟೆಸ್ಟ್‌ನಲ್ಲಿ ರನ್ ಬರ ಅನುಭವಿಸುವುದು ಮುಂದುವರಿಸಿದ್ದರು. ಇದೀಗ ಅಹ್ಮದಾಬಾದ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಭರ್ಜರಿ ಶತಕ ಸಿಡಿದಿದ್ದು ಟೆಸ್ಟ್ ಮಾದರಿಯಲ್ಲಿ 28ನೇ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿಯೂ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ನಿರೀಕ್ಷಿತ ಪ್ರಮಾಣದ ರನ್ ಹರಿದು ಬಂದಿರಲಿಲ್ಲ. ಹೀಗಾಗಿ ಕೊಹ್ಲಿ ಮೇಲೆ ಒತ್ತಡ ಹೆಚ್ಚಾಗಿತ್ತು. ಆದರೆ ಅಹ್ಮದಾಬಾದ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ತಮ್ಮ ಶತಕವನ್ನು ಪೂರ್ತಿಗೊಳಿಸಿದ್ದು ಸುಮಾರು ಮೂರು ವರ್ಷ ನಾಲ್ಕು ತಿಂಗಳ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್ ಮಾದರಿಯಲ್ಲಿ ಶತಕ ಸಿಡಿಸಿದಂತಾಗಿದೆ.

2019ರ ನವೆಂಬರ್‌ನಲ್ಲಿ ಕೊಹ್ಲಿ ಕೊನೆಯ ಟೆಸ್ಟ್ ಶತಕ
ಅಂದ ಹಾಗೆ ವಿರಾಟ್ ಕೊಹ್ಲಿ ಇದಕ್ಕೂ ಮುನ್ನ ಕೊನೆಯ ಬಾರಿಗೆ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದು 2019ರ ನವೆಂಬರ್ ತಿಂಗಳಿನಲ್ಲಿ. ಅಂದು ಬಾಂಗ್ಲಾದೇಶ ವಿರುದ್ಧ ಕೊಲ್ಕತ್ತಾದಲ್ಲಿ ನಡೆದ ಐತಿಹಾಸಿಕ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರು. ಅದಾದ ಬಳಿಕ ಸುದೀರ್ಘ ಕಾಲ ಫಾರ್ಮ್ ಕಳೆದುಕೊಂಡಿದ್ದ ಟೀಮ್ ಇಂಡಿಯಾದ ಅನುಭವಿ ಆಟಗಾರ ಕಳೆದ ವರ್ಷ ವೈಟ್‌ಬಾಲ್ ಮಾದರಿಯಲ್ಲಿ ಫಾರ್ಮ್‌ಗೆ ಮರಳಿದ್ದರು. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿದಿರಲಿಲ್ಲ.

241 ಎಸೆತಗಳಲ್ಲಿ ಶತಕ
ಶನಿವಾರ 128 ಎಸೆತಗಳಲ್ಲಿ 59 ರನ್‌ಗಳಿಸಿದ್ದ ವಿರಾಟ್ ಕೊಹ್ಲಿ ಭಾನುವಾರ ಆಟ ಮುಂದುವರಿಸಿ ತಾಳ್ಮೆಯ ಪ್ರದರ್ಶನ ನೀಡಿದರು. ಒಟ್ಟು 241 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ತಿಗೊಳಿಸಿದ ವಿರಾಟ್ ಕೊಹ್ಲಿ ಈ ಅವಧಿಯಲ್ಲಿ ಐದು ಬೌಂಡರಿ ಸಿಡಿಸಿದ್ದರು. ಈ ಮೂಲಕ ಟೆಸ್ಟ್ ಮಾದರಿಯಲ್ಲಿ ಫಾರ್ಮ್ ಬಗ್ಗೆ ಕೇಳಿ ಬಂದ ಟೀಕೆಗಳಿಗೆ ವಿರಾಟ್ ಕೊಹ್ಲಿ ಬ್ಯಾಟ್‌ನಿಂದಲೇ ಉತ್ತರ ನೀಡಿದ್ದಾರೆ.

ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಕೊಹ್ಲಿ ಉತ್ತಮ ಫಾರ್ಮ್
ಇನ್ನು ಸುದೀರ್ಘ ಕಾಲ ಫಾರ್ಮ್ ಕಳೆದುಕೊಂಡು ಟೀಕೆಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ ಕಳೆದ ವರ್ಷ ಏಷ್ಯಾ ಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಶತಕ ಸಿಡಿಸುವ ಮೂಲಕ ಚೊಚ್ಚಲ ಟಿ20 ಶತಕ ಸಿಡಿಸಿದ್ದಲ್ಲದೆ ತಮ್ಮ ಸುದೀರ್ಘ ಕಾಲದ ಶತಕದ ಬರವನ್ನು ನೀಗಿಸಿದ್ದರು. ಅದಾದ ಬಳಿಕ ಏಕದಿನ ಮಾದರಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಅವರು ಕಳೆದ ಮೂರು ತಿಂಗಳಿನಲ್ಲಿ ಮೂರು ಶತಕ ಸಿಡಿಸಿದ್ದಾರೆ. ಇದೀಗ ಟೆಸ್ಟ್ ಮಾದರಿಯಲ್ಲಿಯೂ ಫಾರ್ಮ್ ಕಂಡುಕೊಂಡಿದ್ದು ಟೀಮ್ ಇಂಡಿಯಾದ ಬಲ ಹೆಚ್ಚಿಸಿದೆ.

ಇತ್ತಂಡಗಳ ಆಡುವ ಬಳಗ
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ
ಬೆಂಚ್: ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಇಶಾನ್ ಕಿಶನ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್
ಆಸ್ಟ್ರೇಲಿಯಾ ಆಡುವ ಬಳಗ: ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ಕುಹ್ನೆಮನ್, ಟಾಡ್ ಮರ್ಫಿ, ನಾಥನ್ ಲಿಯಾನ್
ಬೆಂಚ್: ಸ್ಕಾಟ್ ಬೋಲ್ಯಾಂಡ್, ಮ್ಯಾಟ್ ರೆನ್ಶಾ, ಮಿಚೆಲ್ ಸ್ವೆಪ್ಸನ್, ಲ್ಯಾನ್ಸ್ ಮೋರಿಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications