
ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾ ಅಭ್ಯಾಸ ಆರಂಭಿಸಿದೆ. ಟೆಸ್ಟ್ ಸರಣಿಗಾಗಿ ಸೋಮವಾರ (ನವೆಂಬರ್ 16) ನಡೆದ ಅಭ್ಯಾಸದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಪಾಲ್ಗೊಂಡಿದ್ದಾರೆ. ಶನಿವಾರ ಕೋಚ್ ಶ್ರೀಧರ್ ಜೊತೆ ಭಾರತ ತಂಡ ಫೀಲ್ಡಿಂಗ್ ಅಭ್ಯಾಸ ನಡೆಸಿತ್ತು.
ಅಭ್ಯಾಸದ ವೇಳೆ ಕೊಹ್ಲಿ ಅವರು ಭಾರತೀಯ ಬೌಲರ್‌ಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್ ಎದುರಿಸಿದರು. ಭಾರತ ತಂಡ ಟೆಸ್ಟ್‌ಗಾಗಿ ಅಭ್ಯಾಸ ನಡೆಸುತ್ತಿರುವುದನ್ನು ವಿರಾಟ್ ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದಾರೆ.
ಕೊರೊನಾವೈರಸ್ ಆರಂಭವಾದ ಬಳಿಕ ಭಾರತೀಯರು ಪಾಲ್ಗೊಂಡ ಚೊಚ್ಚಲ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್. ಟಿ20 ಮಾದರಿಯಲ್ಲಿ ಭಾರತೀಯರು ಆಡಿದ್ದಾಗಿದೆ. ಆದರೆ ಏಕದಿನ ಮತ್ತು ಟೆಸ್ಟ್ ಮಾದರಿಯ ಕ್ರಿಕೆಟ್ ಆಡಿ ಬಹಳಷ್ಟು ಕಾಲವಾಗಿದೆ. ಹೀಗಾಗಿ ಕೊಹ್ಲಿ ಟೆಸ್ಟ್ ಅಭ್ಯಾಸ ಮಾಡುವಾಗಿನ ಖುಷಿ ತೋರಿಕೊಂಡಿದ್ದಾರೆ.
'ಟೆಸ್ಟ್ ಕ್ರಿಕೆಟ್ ಅಭ್ಯಾಸದ ಅವಧಿಯನ್ನು ಪ್ರೀತಿಸುತ್ತೇನೆ' ಎಂದು ಕೊಹ್ಲಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಟ್ವೀಟ್ ವಿಡಿಯೋದಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿರುವ, ಬೌಲರ್‌ಗಳು ಬೌಲಿಂಗ್ ಮಾಡುತ್ತಿರುವ ಚಿತ್ರಣವಿದೆ. ಭಾರತ-ಆಸ್ಟ್ರೇಲಿಯಾ ಸರಣಿಯು 3 ಏಕದಿನ ಪಂದ್ಯಗಳು, 3 ಟಿ20ಐ ಪಂದ್ಯಗಳು ಮತ್ತು 4 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ. ಟೆಸ್ಟ್ ಸರಣಿ ಡಿಸೆಂಬರ್ 17ರಿಂದ ಆರಂಭಗೊಳ್ಳಲಿದೆ.