ಟೆಸ್ಟ್ ಸರಣಿಗಾಗಿ ತನ್ನಲ್ಲಿರುವ ಯೋಜನೆ ಬಾಯ್ಬಿಟ್ಟ ವಿರಾಟ್ ಕೊಹ್ಲಿ

ಸಿಡ್ನಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯ ಟ್ರೋಫಿ ಮೇಲೆತ್ತಿದ್ದಾರೆ. ಮಂಗಳವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟಿ20ಐ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 12 ರನ್ ಜಯ ದಾಖಲಿಸುವುದರೊಂದಿಗೆ ಟಿ20 ಸರಣಿ 2-1ರಿಂದ ಭಾರತದ ಪಾಲಾಗಿದೆ.
ಟಿ20ಐ ಸರಣಿಯ ಬಳಿಕ ಭಾರತ ತಂಡ ಆತಿಥೇಯರ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಟೆಸ್ಟ್ ಸರಣಿ ತುಂಬಾ ಕುತೂಹಲಕಾರಿಯಾದುದು. ಯಾಕೆಂದರೆ ಕಳೆದ ವರ್ಷ ಭಾರತ ತಂಡ ಈ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಆದರೆ ಆಗ ಆಸೀಸ್ ತಂಡದಲ್ಲಿ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಇರಲಿಲ್ಲ. ಈ ಬಾರಿ ಇಬ್ಬರೂ ತಂಡದಲ್ಲಿದ್ದಾರೆ.
ಟೆಸ್ಟ್ ಸರಣಿಯುದ್ದಕ್ಕೂ ವಿರಾಟ್ ಆಡುತ್ತಿಲ್ಲ. ಮೊದಲನೇ ಟೆಸ್ಟ್ ಬಳಿಕ ಕೊಹ್ಲಿ ಪಿತೃತ್ವದ ರಜೆಯಲ್ಲಿರಲಿದ್ದಾರೆ. ಜನವರಿಯಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರು ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿರುವುದರಿಂದ ಕೊಹ್ಲಿ ಈಗಾಗಲೇ ಬಿಸಿಸಿಐನಿಂದ ರಜೆ ಮಂಜೂರು ಮಾಡಿಕೊಂಡಿದ್ದಾರೆ. ಡಿಸೆಂಬರ್ 17ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ.
ಟೆಸ್ಟ್ ಬಗ್ಗೆ ಮಾತನಾಡಿದ ಕೊಹ್ಲಿ, 'ಕಳೆದ ವರ್ಷಕ್ಕಿಂತಲೂ ಬಲಿಷ್ಠ ತಂಡ ನಮ್ಮಲ್ಲಿದೆ ಎಂದು ನನಗೆ ಭರವಸೆಯಿದೆ. ನಾಳೆ ಎದ್ದ ಬಳಿಕ ನಾನು ಪ್ರವಾಸ ಸರಣಿಯಲ್ಲಿ ಆಡುತ್ತೇನಾ ನೋಡುತ್ತೇನೆ. ಆಡಿ ಮತ್ತೆ ಆಟ ನಿಲ್ಲಿಸೋದು ನನಗೆ ವಿಚಾರವಲ್ಲ. ಆದರೆ ಪೂರ್ತಿ ಗೇಮ್ ಆಡಲು ನಾನು ಬಯಸಿದ್ದೇನೆ. ನನ್ನ ಫಿಸಿಯೋ ಜೊತೆ ಮಾತಾಡಿ ಈ ಬಗ್ಗೆ ನಿರ್ಧರಿಸುತ್ತೇನೆ,' ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications